ಮೇಷ: ಸ್ವಲ್ಪ ಶ್ರಮವಹಿಸಿದರೆ ಖಂಡಿತ ಸರಕಾರಿ ಉದ್ಯೋಗ ಲಭಿಸುವುದು, ನಂಬಿದವರಿಂದಲೇ ಮೋಸ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ ಬರುವುದು, ನಿಮಗೂ ಮೇಲಾಧಿಕಾರಿ ನಡುವೆ ಮಾತಿನ ಚಕಮಕಿ ಸಂಭವ, ಮಕ್ಕಳಿಂದ ಜಗಳ ಸಂಭವ.
ವೃಷಭ: ಕೃಷಿಕರಿಗೆ ಲಾಭ, ಹೊಸ ಉದ್ಯಮ ಪ್ರಾರಂಭ ಮಾಡಲು ಪತ್ನಿಯ ಸಲಹೆ ಪಡೆದುಕೊಳ್ಳಿ, ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರ, ಚಲನಚಿತ್ರ ನಟ-ನಟಿಯರಿಗೆ ರಂಗಭೂಮಿ ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ.
ಮಿಥುನ: ಕುಟುಂಬದಲ್ಲಿ ಸಂತಸದ ವಾತಾವರಣ. ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಹೊಸ ಆಶಾಕಿರಣ. ಅನಾರೋಗ್ಯ ಭೀತಿ. ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ.
ಕಟಕ: ಹೊಸದಾದ ಯೋಜನೆಗೆ ಹಲವು ರೀತಿಯಾದಂತಹ ಚಟುವಟಿಕೆಗಳು ಈ ದಿನ ಕಾಣಬಹುದಾಗಿದೆ. ಆರ್ಥಿಕ ವ್ಯವಹಾರದಲ್ಲಿ ತುಸು ಏರಳಿತ ಕಂಡುಬರುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ವಸೂಲಿ ಮಾಡುವಲ್ಲಿ ವಿಫಲರಾಗುವಿರಿ.
ಸಿಂಹ: ಆಸ್ತಿ ವಿಚಾರವಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಉಂಟಾಗಲಿದೆ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವಿರಿ. ಆದರೆ ಪೋಷಕರು ನಿಮ್ಮ ಪರ ನಿಲ್ಲುವುದರಿಂದ ನಿಮಗೆ ಆನೆ ಬಲ ಬರಲಿದೆ.
ಕನ್ಯಾ: ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವದು. ಕೇಡುಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ.
ತುಲಾ: ನಿಮ್ಮ ಆತ್ಮವಿಶ್ವಾಸದ ನಡೆ ಹಲವರಿಗೆ ದಾರಿದೀಪ ಆಗಲಿದೆ. ಬಂಧು ಬಾಂಧವರಿಂದ ಕೆಟ್ಟ ಸುದ್ದಿ ಕೇಳುವಿರಿ. ವೈಯಕ್ತಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಸಾಮಾಜಿಕ ಕಾರ್ಯದಲ್ಲಿ ಭಾಗಿ.
ವೃಶ್ಚಿಕ: ನಿಮ್ಮ ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆ, ವೈವಾಹಿಕ ಜೀವನದ ಸಂತೋಷ ಹೆಚ್ಚಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರಿಯತಮೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ಧನು: ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ ನೀಡುತ್ತದೆ. ಸಂಗಾತಿಯ ಧನಸಹಾಯ ಚುಕ್ತಾ ಮಾಡುವ ಸಮಯ ಬಂದಿದೆ. ಪಕ್ಕದ ನಿವೇಶನ ಖರೀದಿಸುವ ಅವಕಾಶ ಒದಗಿ ಬರುವುದು.
ಮಕರ: ಹಳೆಯ ಸಾಲ ಮರುಪಾವತಿ. ಪತ್ನಿಯೊಂದಿಗೆ ದೂರ ಕಿರು ಪ್ರಯಾಣ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಜಾಗ್ರತೆವಹಿಸಿ. ಪ್ರೇಮಿಗಳು ಹೇಳಿಕೆ ಮಾತನ್ನು ಕೇಳದಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮದಲ್ಲಿ ಲಾಭ.
ಕುಂಭ: ಅಧಿಕ ಖರ್ಚು, ಕಾಯಕವೇ ಕೈಲಾಸ ಅಂತ ನಂಬಿದವರಿಗೆ ಗೌರವ ಪ್ರಾಪ್ತಿ, ಶುಭ ಮಂಗಳ ಕಾರ್ಯ ಸಂಭವ, ಉದ್ಯೋಗದ ಸ್ಥಳ ಬದಲಾವಣೆ, ಮಿತ್ರರಿಂದ ಹಣಕಾಸು ನಿರಾಸೆ ಮೂಡಲಿದೆ, ಮನೆ ಬದಲಾವಣೆ, ಮಹಿಳಾ ಉದ್ಯೋಗಿಗಳಿಗೆ ಸಲ್ಲದ ಅಪವಾದ.
ಮೀನ: ಮನಸ್ಸು ಉತ್ಸಾಹದಿಂದ ಇರುವುದು. ನಿಮ್ಮ ಅನಿಯಮಿತ ದುಂದು ವೆಚ್ಚಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಬಿಟ್ಟು ಎಲ್ಲರ ಅಭಿಪ್ರಾಯವನ್ನು ಗೌರವಿಸುವುದು ಸೂಕ್ತ.