ಮೇಷ: ಕೆಲಸವನ್ನು ವಿಳಂಬ ಮಾಡುವುದು ಸರಿಯಲ್ಲ. ವೈಯಕ್ತಿಕ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಅನಗತ್ಯವಾಗಿ ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಬೇಡ.
ವೃಷಭ: ನೀವು ಸಹೋದ್ಯೋಗಿಗಳನ್ನು ಅತಿಯಾಗಿ ನಂಬುವುದನ್ನು ತಪ್ಪಿಸಬೇಕು. ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಪಡೆಯಬಹುದು, ಇಂದು ನಿಮಗೆ ಬಹಳ ಲಾಭದಾಯಕವಾಗಿರುತ್ತದೆ.
ಮಿಥುನ: ತಾಳ್ಮೆಯಿರಲಿ. ಸ್ಥಗಿತಗೊಂಡಿರುವ ಕಾರ್ಯಗಳಿಗೆ ಚಾಲನೆ ನೀಡುವುದು ಅವಶ್ಯಕ. ಜವಾಬ್ದಾರಿಯುತ ಕಾರ್ಯಗಳಿಂದ ನಿಮ್ಮ ಸಾಧನೆ ಎತ್ತರದ ಸ್ಥಾನಕ್ಕೆ ಏರುವುದು.
ಕಟಕ: ಆರ್ಥಿಕ ವ್ಯವಹಾರಗಳನ್ನು ಆದಷ್ಟು ಜಾಗೃತಿಯಿಂದ ಮಾಡಿ. ವೈವಾಹಿಕ ಜೀವನಕ್ಕೆ ಸಿದ್ಧತೆ ನಡೆಸುವ ಸಮಯವಿದು. ಶತ್ರುಗಳಿಂದ ವೃತ್ತಿರಂಗದಲ್ಲಿ ಸಮಸ್ಯೆಗಳು ಹೆಚ್ಚಳವಾಗುತ್ತದೆ.
ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಕುಟುಂಬದ ಯಾವುದೇ ಸದಸ್ಯರ ಕಾಯಿಲೆ ಬೀಳುವ ಕಾರಣದಿಂದಾಗಿ ನೀವು ಆರ್ಥಿಕ ತೊಂದರೆಗೊಳಗಾಗಬಹುದು.
ಕನ್ಯಾ: ಪರಾಕ್ರಮದ ಕಾರ್ಯ ವೈಖರಿ, ಶತೃಗಳಿಂದ ನಿಮ್ಮ ಅನೇಕ ಕೆಲಸ ಕಾರ್ಯಗಳು ಲಾಭ ಪಡೆಯುವುದಿಲ್ಲ. ಏನೇ ಮಾಡಿದರೂ ಜೀವನ ಚಿಂತಾಜನಕ ಆಗಿ ಕಾಣುತ್ತಿರುತ್ತದೆ.
ತುಲಾ: ನಿಮ್ಮ ಆಸೆಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸಬೇಡಿ. ಆಡಳಿತಕ್ಕೆ ಸಂಬಂಧಿಸಿದ ಕೆಲಸವನ್ನು ಸುಗಮವಾಗಿ ಮಾಡಲಾಗುತ್ತದೆ. ವ್ಯಾಪಾರ ಚಟುವಟಿಕೆಗಳು ದುರ್ಬಲವಾಗಿರುತ್ತವೆ.
ವೃಶ್ಚಿಕ: ಬಂಧುಮಿತ್ರರ ಸಹಕಾರ. ಆರೋಗ್ಯದ ದೃಷ್ಟಿಕೋನದಿಂದ ಒಳ್ಳೆಯ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡಿ. ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರುವುದು.
ಧನುಸ್ಸು: ಹೊಸದಾಗಿ ಪ್ರಾರಂಭಿಸಿ ಮತ್ತು ನಿಮ್ಮ ಕೆಲಸವನ್ನು ಹೊಸ ರೀತಿಯಲ್ಲಿ ಸಮೀಪಿಸಲು ಪ್ರಯತ್ನಿಸಿ. ಸರ್ಕಾರಿ ಕೆಲಸದ ಸಿದ್ಧತೆಯಲ್ಲಿದ್ದರೆ ಕಷ್ಟಪಟ್ಟು ಕೆಲಸ ಮಾಡಿ.
ಮಕರ: ಮದುವೆಗೆ ಹಿರಿಯರ ಅನುಮೋದನೆ ಸಿಗಲಿದೆ, ವಾರದ ಅಂತ್ಯಕ್ಕೆ ವೈಯಕ್ತಿಕ ಸಾಲ ನಿವಾರಣೆಯಾಗಲಿದೆ, ಆಸ್ತಿ ವಿಚಾರಕ್ಕಾಗಿ ಅಹಿತಕರ ಬೆಳವಣಿಗೆಗಳು ಎದುರಿಸುವಿರಿ.
ಕುಂಭ: ಉದ್ಯಮಿಗಳು ಇಂದು ನಷ್ಟ ಅನುಭವಿಸಲಿದ್ದಾರೆ. ಆಸ್ತಿ ವ್ಯವಹಾರದಲ್ಲಿ ಮೋಸಕ್ಕೆ ಒಳಗಾಗುವಿರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಸಾಲಗಾರರು ಸರಿಯಾದ ಸಮಯಕ್ಕೆ ಬಾಕಿ ಹಣ ನೀಡಲಿದ್ದಾರೆ.
ಮೀನ: ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ.