ಡಾ.ಡಿ.ವಿ ಪರಶಿವಮೂರ್ತಿ ಅವರ ‘ನೊಳಂಬರ ಶಾಸನಗಳು‘ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ 2019ರ ಪುಸ್ತಕ ಗೌರವ ಪ್ರಶಸ್ತಿ

ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಪ್ರೊ. ಡಿ.ವಿ. ಪರಶಿವಮೂರ್ತಿ ಅವರು ಬರೆದಿರುವ ನೊಳಂಬರ ಶಾಸನಗಳು ಎನ್ನುವ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2019ರ ವರ್ಷದ ಪುಸ್ತಕ ಗೌರವ ದೊರೆತಿದೆ. ಸೆಪ್ಟೆಂಬರ್ 12 ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಡಿ.ವಿ. ಪರಶಿವಮೂರ್ತಿ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಬಿ.ವಿ. ವಸಂತ ಕುಮಾರ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು 2019ರ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


2019ರಲ್ಲಿ ಪ್ರಕಟವಾದ ಪ್ರಮುಖ ಕೃತಿಗಳಲ್ಲಿ ‘ನೊಳಂಬರ ಶಾಸನಗಳು’ ಕೃತಿಯು ಮಹತ್ವದ ಕೃತಿಯಾಗಿದ್ದು, ಮುಂದೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಅನೇಕರಿಗೆ ಇದು ಅಕರ ಗ್ರಂಥವಾಗಲಿದೆ. ಕರ್ನಾಟಕದ ಇತಿಹಾಸವನ್ನು, ಸಂಸ್ಕೃತಿಯನ್ನು ಅಧ್ಯಯನ ಮಾಡಲು ಸಹಕಾರಿಯಾಗಲಿದೆ. ಅದರಲ್ಲೂ ವಿಶೇಷವಾಗಿ ಹೆಂಜೇರು ನೊಳಂಬರ ಕಾಲದ ಸಂಸ್ಕೃತಿ ಸಂಕಥನಗಳ ಬಗ್ಗೆ ಲೇಖಕರು ದಾಖಲೆ ಸಹಿತ ವಿವರಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಗೌರವವನ್ನು ಪಡೆದ ಪ್ರೊ. ಡಿ.ವಿ. ಪರಶಿವಮೂರ್ತಿ ಅವರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!