ಭಾದ್ರ ಅಷ್ಟಮಿ: ಸಂಪತ್ತಿಗಾಗಿ ಗಜಲಕ್ಷ್ಮಿ ಮತ್ತು ಕುಬೇರ ಪೂಜೆ..!

ಇದೇ ಮಂಗಳವಾರ ‌ಸೆಪ್ಟೆಂಬರ್‌ 14 ಭಾದ್ರ ಶುದ್ಧ ಅಷ್ಟಮಿಯ ಶುಭ ದಿನ. ಈ ಭಾದ್ರ ಅಷ್ಟಮಿಯಂದು ಗಜಲಕ್ಷ್ಮಿಯನ್ನು ಮತ್ತು ಕುಬೇರನನ್ನು ಸಂಪತ್ತಿಗಾಗಿ ಪೂಜಿಸಬೇಕು. ಪೂಜಿಸುವುದು ಹೇಗೆ ನೋಡಿ..

ಸಾಧಕ ಜನರು ವರ್ಷವಿಡೀ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ವಿಶೇಷವಾಗಿ ಆರ್ಥಿಕ ಲಾಭವನ್ನು ಮತ್ತು ಪ್ರಗತಿಯನ್ನು ಸಾಧಿಸಲು ಬಯಸುವವರು ಈ ದಿನವನ್ನು ಅತ್ಯಂತ ಮಹತ್ತರವೆಂದು ಪರಿಗಣಿಸುತ್ತಾರೆ. ಧರ್ಮಗ್ರಂಥಗಳಲ್ಲಿ ರಾಧಾಷ್ಟಮಿಯಿಂದ ಭಾದ್ರಮಾಸದ ಕೃಷ್ಣ ಅಷ್ಟಮಿಯವರೆಗಿನ ಸಮಯವನ್ನು ಸುರೈಯಾ ಪರ್ವವೆಂದು ಕರೆಯಲಾಗುತ್ತದೆ. ‌ ‌ 1) *ಭಾದ್ರ ಅಷ್ಟಮಿ ಮಹತ್ವ*:
ರಾಧಾಷ್ಟಮಿಯಿಂದ ಭಾದ್ರ ಕೃಷ್ಣ ಅಷ್ಟಮಿಯವರೆಗೆ ವಿಶೇಷ ಪೂಜೆಯನ್ನು ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಬಹುದು. ಒಂದು ವೇಳೆ ರಾಧಾಷ್ಟಮಿಯಿಂದ ಭಾದ್ರ ಕೃಷ್ಣ ಅಷ್ಟಮಿಯವರೆಗೆ ಪೂಜೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಭಾದ್ರ ಮಾಸದ ಶುಕ್ಲ ಅಷ್ಟಮಿ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಪೂಜಿಸಬಹುದು. ಇದರಿಂದ ಧನಾಗಮನವಾಗುವುದು. ಈ ದಿನವನ್ನು ಲಕ್ಷ್ಮೀ ವ್ರತವೆಂದು ಕೂಡ ಕರೆಯಲಾಗುತ್ತದೆ.

2) *ಗಜ ಸ್ವರೂಪಿ ಲಕ್ಷ್ಮಿಯನ್ನು ಪೂಜಿಸಿ:*
ಭಾದ್ರ ಅಷ್ಟಮಿಯ ದಿನದಂದು ಲಕ್ಷ್ಮಿ ದೇವಿಯನ್ನು ಗಜಲಕ್ಷ್ಮೀ ರೂಪದಲ್ಲಿ ಪೂಜಿಸುವುದರಿಂದ ಪೂಜೆಯ ವಿಶೇಷ ಫಲವನ್ನು ಪಡೆಯಬಹುದೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಲಕ್ಷ್ಮೀ ದೇವಿಯು ಐಶ್ವರ್ಯ ಲಕ್ಷ್ಮಿ, ವೀರ ಲಕ್ಷ್ಮೀ, ವಿಜಯ ಲಕ್ಷ್ಮೀ, ಆದಿ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಸಂತಾನ ಲಕ್ಷ್ಮೀ ಮತ್ತು ಗಜ ಲಕ್ಷ್ಮೀ ಸೇರಿದಂತೆ ಇನ್ನೂ ಅನೇಕ ಸ್ವರೂಪವನ್ನು ಹೊಂದಿದ್ದಾಳೆ.

*ಗಜಲಕ್ಷ್ಮಿ ಪೂಜಾ ವಿಧಾನ*

ಸಾಗರ ಮಂಥನದ ಸಮಯದಲ್ಲಿ ಲಕ್ಷ್ಮೀ ದೇವಿಯು ಕಾಣಿಸಿಕೊಂಡಾಗ ಐರಾವತ ಆನೆಗಳು ಲಕ್ಷ್ಮಿಯ ಮೇಲೆ ಪವಿತ್ರ ನೀರನ್ನು ಸುರಿದು ಗಜಲಕ್ಷ್ಮಿ ದೇವಿಯನ್ನು ಆಹ್ವಾನಿಸುತ್ತಾರೆ. ಆದ್ದರಿಂದ ಲಕ್ಷ್ಮೀ ದೇವಿಯ ಈ ಸ್ವರೂಪವನ್ನು ನೋಡಿದಾಗ ಆಕೆಯ ಹಿಂದೆ ಎರಡು ಆನೆಗಳು ಅವಳಿಗೆ ನೀರನ್ನು ಅರ್ಪಿಸುತ್ತಿರುವುದನ್ನು ನೋಡಬಹುದು. ದೂರ್ವಾಸ ಮುನಿಗಳ ಶಾಪದಿಂದ ವಂಚಿತರಾದ ದೇವರಾಜ ಇಂದ್ರನು ಗಜ ಲಕ್ಷ್ಮಿಯನ್ನು ಪೂಜಿಸಿ ಶ್ರೀಮಂತನಾಗುತ್ತಾನೆ. ಆದ್ದರಿಂದ ಗಜ ಲಕ್ಷ್ಮಿಯನ್ನು ಪೂಜಿಸುವುದರಿಂದ ಬಡವನು ಕೂಡ ಶ್ರೀಮಂತನಾಗುತ್ತಾನೆ.

3) *ಗಜಲಕ್ಷ್ಮಿ ಆರಾಧನೆಯಲ್ಲಿ ಈ ವಸ್ತುಗಳನ್ನು ಇಡಬೇಕು:*
ಸಂಪತ್ತನ್ನು ಬಯಸುವ ವ್ಯಕ್ತಿಯು ಭಾದ್ರ ಮಾಸದ ಅಷ್ಟಮಿಯಂದು ಗಜಲಕ್ಷ್ಮಿ ವಿಗ್ರಹವನ್ನು ಅಥವಾ ಲಕ್ಷ್ಮಿ ದೇವಿಯ ಎರಡೂ ಬದಿಗಳಲ್ಲಿ ಆನೆಗಳಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಬೇಕು. ಅಷ್ಟಮಿ ದಿನವಾದ ಇಂದು ನೀವು ಲಕ್ಷ್ಮಿ ದೇವಿಯೊಂದಿಗೆ ಕುಬೇರ ವಿಗ್ರಹವನ್ನು ಕೂಡ ಪೂಜಿಸಬೇಕು. ಲಕ್ಷ್ಮಿಗೆ ಪ್ರಿಯವಾದ ತೆಂಗಿನಕಾಯಿ, ಶಂಖ, ಕವಡೆ, ಬೆಳ್ಳಿ ನಾಣ್ಯ ಮತ್ತು ಶ್ರೀಯಂತ್ರವನ್ನು ಲಕ್ಷ್ಮಿ ವಿಗ್ರಹದ ಬಳಿ ಇಡಬೇಕು. ಒಂದು ವೇಳೆ ಶ್ರೀ ಯಂತ್ರ ಇಲ್ಲದಿದ್ದರೆ, ಸರಳ ಕಾಗದದ ಮೇಲೆ ಕೆಂಪು ಕಮಲದ ಮೇಲೆ ಶ್ರೀಯಂತ್ರವನ್ನು ಮಾಡಿ ಅದನ್ನು ಪೂಜಾ ಸ್ಥಳದಲ್ಲಿ ಇರಿಸಿ. ‌ ‌ 4) *ಗಜಲಕ್ಷ್ಮಿಯನ್ನು ಪೂಜಿಸಿದ ನಂತರ ಈ ಕೆಲಸ ಮಾಡಿ*:
ಕೆಂಪು ಬಣ್ಣದ ಹತ್ತಿಯಿಂದ ತುಪ್ಪದ ದೀಪವನ್ನು ಬೆಳಗಿಸಿ. ನಂತರ ಪಾಯಸ, ಕಲ್ಲುಸಕ್ಕರೆ ಮತ್ತು ಜೇನುತುಪ್ಪದಿಂದ ಪ್ರಸಾದವನ್ನು ತಯಾರಿಸಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಪ್ರಸಾದವನ್ನು ಅರ್ಪಿಸಿದ ಮೇಲೆ ಗುಲಾಬಿ ಹೂವುಗಳನ್ನು ನೀಡಿ *ಓಂ ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಗಜಲಕ್ಷ್ಮಿ ನಮಃ* ಮಂತ್ರವನ್ನು ಮತ್ತು ಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು. ಗಜಲಕ್ಷ್ಮಿ ಪೂಜೆಯ ನಂತರ ಬೆಳ್ಳಿ ನಾಣ್ಯವನ್ನು ಮತ್ತು ಕವಡೆಯನ್ನು ಕೆಂಪು ಬಟ್ಟೆಯಲ್ಲಿ ಇಟ್ಟು ಅದನ್ನು ಬೀರು ಅಥವಾ ಅಲಮಾರಿಯಲ್ಲಿಟ್ಟು ತಾಯಿಯ ವಿಗ್ರಹವನ್ನು ನಿಯಮಿತವಾಗಿ ಪೂಜಿಸಬೇಕು.

Leave a Reply

Your email address will not be published. Required fields are marked *

error: Content is protected !!