ರಾಶಿ ಭವಿಷ್ಯ : ಈ ರಾಶಿಯವರು ಇಂದು ವಿಲಾಸಿ ಜೀವನದಿಂದ ಸಾಲ ಅನುಭವಿಸುವ ಸಾಧ್ಯತೆ.

ಮೇಷ – ಇಂದು ನಿಮ್ಮ ಪೋಷಕರ ಸಂತಸಕ್ಕೆ ಕಾರಣವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ದೊರಕಲಿದೆ. ಧಾರ್ಮಿಕ ಕಾರ್ಯಗಳತ್ತ ಒಲವು ತೋರಲಿದ್ದೀರಿ. ಮನೆ ನಿರ್ಮಾಣ ಮಾಡುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ.

ವೃಷಭ – ನಿಮ್ಮ ಕ್ರಿಯಾಶೀಲತೆ ವೃತ್ತಿರಂಗದಲ್ಲಿ ಇತರರಿಗೆ ಪ್ರೇರಣೆಯಾಗಲಿದೆ. ದೂರ ಸಂಚಾರದ ಸಿದ್ಧತೆ ಇನ್ನೂ ವಿಳಂಬವಾಗಬಹುದು. ಆರ್ಥಿಕವಾಗಿ ಹಂತಹಂತವಾಗಿ ಉನ್ನತಿಯು ತೋರಿಬರುವುದು.

ಮಿಥುನ – ವೃತ್ತಿರಂಗದಲ್ಲಿ ಅನಿರೀಕ್ಷಿತ ಬದಲಾವಣೆಯ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಯತ್ನಗಳಿಂದ ಸಂಬಂಧಗಳಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಕಟಕ – ಜನರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶ ಸಿಗಲಿದೆ. ಹಳೆಯ ಸಾಲ ಮರುಪಾವತಿಯಾಗಲಿದೆ.

ಸಿಂಹ – ಉದ್ಯೋಗಿಗಳು ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕಚೇರಿಯಲ್ಲಿ ಹೆಚ್ಚಿನ ಸ್ಪರ್ಧೆ ಇರುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಪ್ರಗತಿಗೆ ತಡೆಗಟ್ಟಬಹುದು.

ಕನ್ಯಾ – ದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಭಾಗ್ಯ ,ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಮುನ್ನಡೆ, ಗುತ್ತಿಗೆದಾರರಿಗೆ ಟೆಂಡರ್ ಸಿಗುವ ಭಾಗ್ಯ.

ತುಲಾ – ಗಂಡ ಹೆಂಡತಿ ಅಗಲಿಕೆಯಿಂದ ಪಶ್ಚಾತಾಪ, ಕೊನೆಗೆ ಜ್ಞಾನೋದಯದಿಂದ ಮತ್ತೆ ಕೂಡುವ ಸಂಭವ, ಮುಖ್ಯ ದಾಖಲಾತಿ ಕಳೆದ ಭೀತಿ,ಸರಕಾರಿ ಉದ್ಯೋಗಿಗಳು ಕಾರ್ಯಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿ, ಇಲ್ಲದಿದ್ದರೆ ಉದ್ಯೋಗದಲ್ಲಿ ತೊಂದರೆ.

ವೃಶ್ಚಿಕ – ಇಂದು ಮಹಾತ್ವಕಾಂಕ್ಷೆ ಗಳು ಯಶಸ್ವಿ, ಸಹೋದರನಿಗೆ ಉದ್ಯೋಗ ಪ್ರಾಪ್ತಿ, ಅಪಘಾತದಿಂದ ಪಾರಾಗುವಿರಿ, ನಿಮ್ಮ ಕೃಷಿ ವೆಚ್ಚ ಹೆಚ್ಚಾಗಲಿವೆ, ವಿರೋಧಿಗಳು ನಿಮಗೆ ಅಪಹಾಸ್ಯ ಮಾಡಬಹುದು.

ಧನುಸ್ಸು – ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ.

ಮಕರ – ಜೀವನದ ಕಷ್ಟಗಳೆಲ್ಲವೂ ಹಂತ ಹಂತವಾಗಿ ಕೊನೆಗೊಳ್ಳಲಿದೆ. ಆಸ್ತಿ ವಿಚಾರವಾಗಿ ದಾಯಾದಿಗಳ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಕುಂಭ – ನಿಮ್ಮ ಹಗುರ ಮಾತಿನಿಂದ ಗೌರವ ವರ್ಚಸ್ಸು ಎರಡಕ್ಕೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ, ಹಿಂದಿನ ಹಗೆತನ ನೆನಪಿಸಿಕೊಂಡು ಆಪ್ತರ ಮೇಲೆ ದ್ವೇಷ ಸಾಧಿಸುವುದು ಶೋಭೆಯಲ್ಲ, ವಿಲಾಸಿ ಜೀವನದಿಂದ ಸಾಲ ಅನುಭವಿಸುವ ಸಾಧ್ಯತೆ.

ಮೀನ – ಧಾರ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ದಿನವಿದು. ಸನ್ಯಾಸಿಯ ಮನಸ್ಥಿತಿ ನಿಮ್ಮ ವಿಚಾರಗಳಿಗೆ ವಿರುದ್ಧವಾಗಿ ವರ್ತಿಸಬಹುದು. ಹೊಸ ವಾಹನ ಖರೀದಿ ಪ್ರಕ್ರಿಯೆಗಳನ್ನು ಈಗ ಸದ್ಯಕ್ಕೆ ಬೇಡ

Leave a Reply

Your email address will not be published. Required fields are marked *

error: Content is protected !!