ರಾಶಿ ಭವಿಷ್ಯ ದಿನಾಂಕ 08/09/2021

ಮೇಷ – ಇಂದು ಅದೃಷ್ಟದ ದಿನ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಹೊಸ ಜಮೀನ್ ಅಥವಾ ನಿವೇಶನ ಖರೀದಿಸುವ ಯೋಚನೆಯನ್ನು ಮಾಡಬಹುದು. ಮನೆ ಅಥವಾ ಕೆಲಸದ ಸ್ಥಳವನ್ನು ಬದಲಾಯಿಸುವ ಬಗ್ಗೆ ಚಿಂತಿಸುವಿರಿ.

ವೃಷಭ – ಕಚೇರಿ ಕೆಲಸದಲ್ಲಿ ಬಹಳಷ್ಟು ಹೊಸ ಅವಕಾಶಗಳು ನಿಮಗೆ ಒದಗಿ ಬರಲಿದೆ. ಇದರಿಂದ ನೀವು ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ. ಜೀವನ ಸಂಗಾತಿಯೊಂದಿಗೆ ವೈಮನಸ್ಯ ಮೂಡುವ ಸಾಧ್ಯತೆ ಇದೆ.

ಮಿಥುನ – ಮಾನಸಿಕ ನೆಮ್ಮದಿ ಸಿಗಲಿದೆ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿ ಲಾಭದಾಯಕವಾಗಿರಲಿದೆ. ಮಡದಿ, ಮಕ್ಕಳೊಂದಿಗೆ ಸಂತಸದಿಂದ ದಿನ ಕಳೆಯುವಿರಿ. ಅನಿರೀಕ್ಷಿತ ಪ್ರಯಾಣವನ್ನು ಮುಂದೂಡುವಿರಿ.

ಕಟಕ – ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ.

ಸಿಂಹ – ಕೆಲಸದ ಕಡೆಗೆ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಿಗಳು ತಮ್ಮ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಇಂದು ನೀವು ಲಾಭ ಗಳಿಸುವ ಅವಕಾಶವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

ಕನ್ಯಾ – ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಪರಿಸ್ಥಿತಿ ನಿಮ್ಮದಾಗಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇದರಿಂದ ನೀವು ವಿಚಲಿತರಾಗಲಿದ್ದೀರಿ.

ತುಲಾ – ಕೆಲಸದಲ್ಲಿ ಸಹೋದರರ ಸಹಕಾರ, ಹಣಕಾಸಿಗೆ ಪರದಾಟ, ಅನಿರೀಕ್ಷಿತ ಹಳೆ ಸಂಗಾತಿ ಭೇಟಿ. ಕುಟುಂಬದಲ್ಲಿ ಆಸ್ತಿ ಅಥವಾ ಹಣಕಾಸಿನ ಬಗ್ಗೆ ವಿವಾದಗಳಿದ್ದರೆ ಮಾತುಕತೆ ಮಾಡುವಿರಿ. ಇಂದು ನಿರ್ಧಾರಗಳು ನಿಮ್ಮ ಪರವಾಗಿರುತ್ತದೆ.

ವೃಶ್ಚಿಕ – ನೀವು ಆರ್ಥಿಕವಾಗಿ ಬೆಳವಣಿಗೆ ಕಾಣುವ ಸ್ಥಿತಿಗೆ ದೇವರು ಕೂಡ ಸಾಥ್​ ನೀಡಲಿದ್ದಾರೆ. ಇಂದು ನಿಮಗೆ ದಿಢೀರ್​ ಹಣ ಲಾಭವಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸಹೋದ್ಯೋಗಿಗಳು ಸಾಥ್​ ನೀಡಲಿದ್ದಾರೆ.

ಧನುಸ್ಸು – ತಂದೆಯ ಸಹಕಾರದಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ಕೆಲಸ ಕಾರ್ಯಗಳು ಕೈಗೂಡಲಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.

ಮಕರ – ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವದು. ಸಹನೆಯಿಂದ ವ್ಯವಹರಿಸಿರಿ.ಗುರುಬಲ ವೃದ್ಧಿಸುವದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವದು. ಹಿರಿಯರ ಮಾತಿನಂತೆ ನಡಯುವದು ಉತ್ತಮ.

ಕುಂಭ – ಉದ್ಯೋಗದಲ್ಲಿರುವವರಿಗೆ ಇಂದು ಅತ್ಯಂತ ಶುಭ ದಿನವಾಗಿದೆ. ದೀರ್ಘಕಾಲದವರೆಗೆ ನಡೆಯುತ್ತಿರುವ ನಿಮ್ಮ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು. ನೀವು ಬಡ್ತಿ ಪಡೆಯಬಹುದು.

ಮೀನ – ಆಹಾರ ಸೇವನೆ ವಿಚಾರದಲ್ಲಿ ಜಾಗೃತ ವಹಿಸಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ವ್ಯಾಪಾರಿಗಳಿಗೆ ಲಾಭದ ದಿನ. ಕೆಲಸದ ಒತ್ತಡಗಳು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು.

Leave a Reply

Your email address will not be published. Required fields are marked *

error: Content is protected !!