ಮೇಷ – ಕಳೆದ ವಸ್ತು ಲಭ್ಯ, ವ್ಯಾಪಾರದಲ್ಲಿ ಸಮೃದ್ಧಿ, ಪ್ರೇಮಿಗಳ ಭಾವನೆಗಳಲ್ಲಿ ವ್ಯತ್ಯಾಸ, ದುರ್ಜನರ ಸಹವಾಸದಿಂದ ಧನಹಾನಿ, ಗ್ರಾಹಕರಿಂದ ಧನಲಾಭ, ಉದ್ಯೋಗಿಗಳಿಗೆ ಧನಲಾಭ, ಜಾಗ್ರತೆ ಇರಲಿ, ಹಿತಶತ್ರುಗಳಿಂದ ಬೇಸರ, ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ
ವೃಷಭ – ಮಕ್ಕಳಿಂದ ಸಹಕಾರ, ಸಮಾಧಾನದ ದಿನ, ಖರ್ಚು ಹೆಚ್ಚಾಗಲಿದೆ, ರಾಶಿಯವರಿಗೆ ಯಶಸ್ಸಿನ ದಿನ ವೃತ್ತಿಜೀವನದಲ್ಲಿ ಅನೇಕ ಅವಕಾಶಗಳು ಸಿಗಲಿದೆ. ದಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಹೊಸ ವ್ಯಾಪಾರದಲ್ಲಿ ಹಣ ಹೂಡಿಕೆ ನಿರ್ಧಾರವನ್ನು ಮುಂದೂಡಿ.
ಮಿಥುನ – ಸಾಧು-ಸಂತರ ಪುಣ್ಯ ದರ್ಶನದಿಂದ ನಿಮ್ಮಲ್ಲಿ ನಿಗೂಢವಾದ ಚೈತನ್ಯ ಹೊರಹೊಮ್ಮುವ ಸಾಧ್ಯತೆಯಿದೆ. ಆಧ್ಯಾತ್ಮದ ತುಡಿತ ಹೆಚ್ಚಾಗಿ ಕಂಡುಬರಲಿದೆ. ಆಂತರಿಕ ಮನಸ್ಸಿನಲ್ಲಿರುವ ಗೊಂದಲಗಳು ನಿವಾರಣೆ ಯಾಗುತ್ತದೆ ಹಾಗೂ ಜೀವನದ ಸ್ಪಷ್ಟ ದಾರಿ ಗೋಚರವಾಗಲಿದೆ.
ಕಟಕ – ಸರಳತೆ ದುರುಪಯೋಗವಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿಯ ಕುಂದು ಕೊರತೆಗಳನ್ನು ನಿಭಾಯಿಸುವಿರಿ. ಮಹತ್ವದ ಅಧಿಕಾರ ದೊರೆಯುವ ಯೋಗವಿದೆ. ವ್ಯಾಪಾರದಲ್ಲಿ ಹೆಚ್ಚಿನ ಹಣ ಹೂಡಿಕೆ ಈಗ ಬೇಡ.
ಸಿಂಹ – ನಿಮ್ಮ ಕುಟುಂಬ ಜೀವನದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನೀವು ಇಂದು ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರೆ, ನಿಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.
ಕನ್ಯಾ – ಉದ್ಯಮ ಪ್ರಾರಂಭ ಮಾಡುವ ಮುನ್ನ ಸರಿಯಾದ ನಿರ್ಧಾರವನ್ನು ಕೈಗೊಳ್ಳಿ, ಪ್ರೇಮಿಗಳ ನಡುವೆ ಇದ್ದ ಮನಸ್ತಾಪಗಳು ದೂರವಾಗುವವು, ರಿಯಲ್ ಎಸ್ಟೇಟ್ ಉದ್ಯಮದಾರರ ಆರ್ಥಿಕ ಸ್ಥಿತಿಯು ಪುನಶ್ಚೇತನಗೊಳ್ಳುತ್ತದೆ.
ತುಲಾ – ವೃತ್ತಿಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ತೆಗೆದುಕೊಳ್ಳುವಿರಿ. ವೃತ್ತಿರಂಗ ಬದಲಾಯಿಸುವುದು ಬೇಡ. ನಿಮ್ಮ ಸಾಮರ್ಥ್ಯ ಗಮನದಲ್ಲಿಟ್ಟು ಸಾಲ ಪಡೆಯಿರಿ. ಹೊಸ ಉದ್ಯಮ ಆಯ್ಕೆ ಮಾಡುವಿರಿ.
ವೃಶ್ಚಿಕ – ಹಿತಶತ್ರುಗಳಿಂದಎಚ್ಚರಿಕೆವಹಿಸಿ .ಇಂದು ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಒತ್ತಡ-ಕಿರಿಕಿರಿ, ಸ್ತ್ರೀಯರಿಗೆ ಸಮಸ್ಯೆ ಎದುರಾಗುವುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ.
ಧನುಸ್ಸು – ಪದೇ ಪದೇ ಅನಾರೋಗ್ಯ ಕೈಕೊಡುತ್ತಿದೆ. ಇದರಿಂದ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಲಿದ್ದೀರಿ. ಕಷ್ಟದ ಸಮಯದಲ್ಲಿ ಜೊತೆ ನಿಲ್ಲಬೇಕಾದ ಸ್ನೇಹಿತರು ನಿಮ್ಮ ಕೈ ಬಿಡಲಿದ್ದಾರೆ. ಕಷ್ಟ ಕಾಲದಲ್ಲಿ ಸ್ನೇಹಿತರ ನಿಜ ಬಣ್ಣ ಏನೆಂದು ನಿಮಗೆ ತಿಳಿಯಲಿದೆ.
ಮಕರ – ಆರೋಗ್ಯದಲ್ಲಿ ಏರುಪೇರಾಗಲಿದೆ. ವೃತ್ತಿಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ. ಅಸ್ತಿ ವಿಚಾರದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ. ಹೊಸ ವ್ಯವಹಾರ ಆರಂಭಿಸುವ ಮುನ್ನ ಸಲಹೆ ಪಡೆಯಿರಿ.
ಕುಂಭ – ವ್ಯಾಪಾರಿಗಳಿಗೆ ಬೆಳಗ್ಗಿನ ಹೊತ್ತು ನಷ್ಟ ಉಂಟಾಗಲಿದೆ. ಹಾಗೆಂದು ವಿಚಲಿತರಾಗಬೇಡಿ. ಮಧ್ಯಾಹ್ನದ ಬಳಿಕ ವ್ಯವಹಾರದಲ್ಲಿ ಚೇತರಿಕೆ ಕಾಣಲಿದೆ. ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಜಯ ನಿಮ್ಮದಾಗಲಿದೆ.
ಮೀನ – ಬಹು ವಿಶ್ವಾಸದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಹೆಚ್ಚಿನ ಅವಕಾಶ ಹಾಗೂ ಉತ್ತಮ ಸ್ಥಾನ ಈ ದಿನ ನಿರೀಕ್ಷಿಸಬಹುದು. ಮನೆ ಕಟ್ಟುವ ವಿಷಯದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ.