ಘನವೆತ್ತ ಶಿಕ್ಷಕ ಡಾ.ಸರ್ವಪಲ್ಲಿರಾಧಾಕೃಷ್ಣನ್ ಇಂದು ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಗ್ನೇಯ ಪದವೀಧರ ಕ್ಷೇತ್ರದ ಶಾಸಕ ಚಿದಾನಂದ್ ಎಂ. ಗೌಡರು ಭಾರತದ ಬಡ ಕುಟುಂಬದಲ್ಲಿ ಜನಿಸಿ, ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ಶಿಕ್ಷಕ, ಶಿಕ್ಷಣತಜ್ಞ, ತತ್ವಜ್ಞಾನಿ, ಭಾರತದ ಮೊದಲ ಉಪರಾಷ್ಟ್ರಪತಿ *ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್* ಶಿಕ್ಷಕರ ಬಗ್ಗೆ ಅಪಾರ ಗೌರವ ಶಿಸ್ತು ಪ್ರೀತಿ ನಿಷ್ಠೆ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಮಾಡಿದ ಅಗ್ರಗಣ್ಯ ಶಿಕ್ಷಕ ಅಂತಲೇ ಅವರ ಜನ್ಮದಿನವನ್ನು *ಶಿಕ್ಷಕರ ದಿನ* ವನ್ನಾಗಿ ಆಚರಿಸುತ್ತ ಶಿಕ್ಷಕರ ಕ್ಷೇತ್ರಕ್ಕೆ ಅಗ್ರಗಣ್ಯ ಸ್ಥಾನ ನೀಡಿದ್ದೇವೆ. ಪ್ರಾಚೀನ ಕಾಲದಿಂದಲೂ ಗುರುವಿನ ಮಹಿಮೆ ತಿಳಿಯದವರಾರೂ ಇಲ್ಲ, ನಮ್ಮ ದೇಶದಲ್ಲಿ ಗುರುವಿಗೆ ಮೊದಲ ಸ್ಥಾನ ನೀಡಿರುವರು. ಅದು ಇಂದಿಗೂ ಆಚರಣೆಯಲ್ಲಿರುವುದನ್ನು ಶಿಕ್ಷಕ ದಿನಾಚರಣೆಯ ಮುಖಾಂತರ ನೋಡಬಹುದು. ತಮಗೆ ಕಲಿಸಿದ ಗುರುಗಳಿಗೆ ಗೌರವಿಸುವರು. ಕಾಣಿಕೆ ಕೊಡುವರು. *ಗುರು* ಎಂದರೆ ಅರಿವಿನ ದಾರಿಯನ್ನು ತೋರುವವ ಎಂಬ ಬಲವಾದ ನಂಬಿಕೆ *ಹರಮುನಿದರು ಗುರು ಕಾಯುವ* ಎಂಬ ಆತ್ಮವಿಶ್ವಾಸ ಜತೆಗೆ. ಗುರುವನ್ನು *ಬ್ರಹ, ವಿಷ್ಣು, ಮಹೇಶ್ವರ* ಎಂದು ಪೂಜಿಸುವರು. ಈ ಮೂಲಕ ಪ್ರಾಚೀನ ಕಾಲದ ಶಿಕ್ಷಣದ, ಶಿಕ್ಷಕರ ಮತ್ತು ಡಾ.ರಾಧಾಕೃಷ್ಣನ್ ರ ವಿಚಾರಗಳನ್ನು ಒಂದಿಷ್ಟು ಮೆಲುಕು ಹಾಕೋಣ.
*ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ** ಭಾರತದಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಅಪಾರವಾದ ಗೌರವ. ಭಕ್ತಿ, ಶೃದ್ಧೆ ಜೊತೆಗೆ ಉನ್ನತ ಸ್ಥಾನ ನೀಡಿರುವರು. ಮನುಷ್ಯನು ಗುರುವಿನಿಂದ ಶ್ರದ್ದಾಪೂರ್ವಕವಾಗಿ ಜ್ಞಾನ ಸಂಪಾದನೆ ಮಾಡಬೇಕು. ಮನುಷ್ಯನ ಜೀವನದ ಪರಮೋದ್ಯೇಶ ಬ್ರಹ್ಮ ಜ್ಞಾನವನ್ನು ಪಡೆದು ಕೊಳ್ಳುವುದೇ ಆಗಬೇಕು. ಆತ್ಮಗುಣಗಳನ್ನು ಸಂಪಾದಿಸಿಕೊಂಡು ಅಹಂಕಾರದಿಂದ ದೂರವಾಗಿ ಸತ್ಯ, ಧರ್ಮ, ಅಧ್ಯಯನ, ಅಧ್ಯಾಪನ, ದಾನ ಮೊದಲಾದ ಪರಮ ಧರ್ಮಗಳನ್ನು ರೂಢಿಸಿಕೊಂಡು ಈ ಬ್ರಹ್ಮ ಜ್ಞಾನವನ್ನು ಗುರುವಿನಿಂದಲೆ ಪಡೆಯುತ್ತಿದ್ದರು.
ವೇದ ಕಾಲದಿಂದಲೂ ಗುರುವಿನಿಂದ ಜ್ಞಾನಪಡೆದು ಎಲ್ಲರು ಸಾರ್ಥಕತೆ ಹೊಂದುತ್ತಿದ್ದರು. *ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ* ಎಂದು ಪುರಂದರ ದಾಸರು ಹೇಳಿರುವರು. ಈ ಜ್ಞಾನವನ್ನು ಹೊಂದಲು ಗುರು-ಶಿಷ್ಯ ಪರಂಪರೆಯು ವೇದ ಕಾಲದಿಂದಲೂ ದೇವಸ್ಥಾನ, ಕೋಟೆ, ಮಠ ಮಂದಿರಗಳಲ್ಲಿ ಜ್ಞಾನ ನೀಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ದೇಶದ ಭವಿಷ್ಯ ನಿರ್ಮಾಣವಾಗುವುದು ವರ್ಗಕೋಣೆಯಲ್ಲಿ ಎನ್ನುತ್ತಾರೆ ಅದು ಗುರುವಿನಿಂದ. *ಒಂದಕ್ಷರವಂ ಕಲಿಸಿದಾತ ಗುರುವಿಗೆ ಸಮಾನ.* . *ರೋಗಕಷ್ಟೇ ವೈದ್ಯನ ಅವಶ್ಯಕತೆ. ನ್ಯಾಯಕಷ್ಟೇ ವಕೀಲನ ಅವಶ್ಯಕತೆ. ಆದರೆ ಸುಂದರ ಬದುಕಿಗೆ ಜೀವನಪೂರ್ತಿ ಒಬ್ಬ ಗುರುವಿನ ಅವಶ್ಯಕತೆ ಬೇಕೇ ಬೇಕಾಗುತ್ತದೆ.* ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯರು *ಸಮಾಜದ ಎಲ್ಲಾ ಸಮಸ್ಯೆಗಳಿಗೆ, ಗುಣಾತ್ಮಕ , ಮೌಲ್ಯಧಾರಿತ ಶಿಕ್ಷಣವೊಂದೇ ಪರಿಹಾರ , ಜವಾಬ್ದಾರಿಯುತ ಶಿಕ್ಷಕನೊಬ್ಬನೇ ಸೂತ್ರಧಾರ..!* ಎಂದರು. ಶಿಕ್ಷಕರ ಶಕ್ತಿ ಜ್ಞಾನ ನಿಷ್ಠೆ ನಿಯಮಗಳ ಬಗ್ಗೆ ಕೊಂಡಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಸಿ ಎಂ. ರಾಜೇಶ್ ಗೌಡರು ನಾರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ರಾದ ಬಿ.ಕೆ ಮಂಜಣ್ಣ ರೇಷ್ಮೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ರಾದ ಎಸ್.ಆರ್ ಗೌಡರು ದಂಡಾದಿಕಾರಿಗಳಾದ ಶ್ರೀಮತಿ ಮಮತಾ ರವರು ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶಂಕರಪ್ಪ ನವರು ನೌಕರರ ಸಂಘದ ಅಧ್ಯಕ್ಷ ಲಕ್ಷೀಶ್ ರವರು ನೌಕರರ ಸಂಘದ ಕಾರ್ಯದರ್ಶಿಗಳು, ನಿರ್ದೇಶಕರುಗಳು ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದ ಹಾಜರಿದ್ದರು.