5108 ವರ್ಷ ಹಿಂದಿನ ವಿಗ್ರಹ. ಈ ಬಾಲಕೃಷ್ಣ ಮೂರ್ತಿಯನ್ನು ರುಕ್ಮಿಣಿಯ ಹಠ ತಣಿಸಲು ವಿಶ್ವಕರ್ಮನಿಂದ ಸ್ವಯಂ ಕೃಷ್ಣ ಮಾಡಿಸಿದ ಮೂರ್ತಿ ಇದು. ದ್ವಾಪರ ಯುಗ ಸಮಾಪ್ತಿಯ ಸಮಯದಲ್ಲಿ ದ್ವಾರಕೆ ಮುಳುಗುವಾಗ ಈ ಮೂರ್ತಿಯನ್ನು ರುಕ್ಮಿಣಿ ಭೂಗತ ಮಾಡಿರುತ್ತಾಳೆ. ಈ ಮೂರ್ತಿ ಹಡಗಿನಲ್ಲಿದೆ ಎಂಬುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಮಧ್ವಾಚಾರ್ಯರು, ಅದನ್ನು ಉಡುಪಿಗೆ ತಂದು ಪ್ರತಿಷ್ಠಾಪನೆ ಮಾಡುತ್ತಾರೆ.
ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ? ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?
ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ತಾರೆಯಿಂದ,
ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ,
ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ ?
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ.
ಕಡಗೋಲು ಕೈಯ ಕಡುನೀಡಿ ಮೈಯ ಈ ಬಾಲ ಗೋಪ ಕಂಡು,
ಕೊಡಮಡದ ಶಿರವೋ ಜೋಡಿಸದ ಕರವೋ ಬರಿ ಹುಲ್ಲು ಮಣ್ಣು ದುಂದು,
ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ,
ಶ್ರೀಮಧ್ವಗೊಲಿದ ಕೃಷ್ಣನನಿಗೆಲಿದ ವೆಗ್ಗಳದ ನಾಡು ಉಡುಪಿ.
ಪಡುಗಡಲ ತೀರದಿಂದೆದ್ದು ಬಾರ ಕಡಗೋಲು ಬೆತ್ತ ಹಿಡಿದು,
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು,
ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು,
ತಾ ನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು !
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)