ನೇತ್ರದಾನದ ಮೂಲಕ ಬೆಳಕು ನೀಡಲು ಸಾಧ್ಯ

ಮಧುಗಿರಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಹಲವಾರು ಕಾರಣಗಳಿಂದ ದೃಷ್ಟಿಹೀನರಾಗುತ್ತಿದ್ದಾರೆ. ಅಂತವರ ಪಾಲಿಗೆ ನೇತ್ರದಾನದ ಮೂಲಕ ಬೆಳಕು ನೀಡಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ತಮ್ಮ ಕಣ್ಣುದಾನ ಮಾಡಲು ಮುಂದಾಗಬೇಕು, ಮರಣದ ನಂತರ ಸುಮಾರು 6 ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ತಜ್ಞರಾದ ಡಾ.ಶೃತಿರವರು ತಿಳಿಸಿದರು.
ಮಧುಗಿರಿಯ ತಾಲ್ಲೂಕಿನಲ್ಲಿ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ಕವಣದಾಲ ಪ್ರಾಥಮಿಕ ಆರೋಗ್ಯ ತಪಾಸಣೆಯ ವೈದ್ಯಾಧಿಕಾರಿರವರು ಡಾ.ರೋಹಿತ್‌ರವರು ಮಾತನಾಡುತ್ತಾ ಮರಣಾನಂತರ ನೇತ್ರಗಳನ್ನು ದಾನ ಮಾಡುವುದರಿಂದ ಅಂಧರಿಬ್ಬರಿಗೆ ಬೆಳಕು ನೀಡಲು ಸಾಧ್ಯ ಎಂದು ತಿಳಿಸುತ್ತಾ ಆರ್ಥಿಕವಾಗಿ ಸಬಲರಲ್ಲದಿರುವವರು ನೇತ್ರದಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಮಕ್ಕಳಲ್ಲಿ ದೃಷ್ಟಿದೋಷಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ತಜ್ಞರಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ವಿವರಿಸುತ್ತಾ ನೇತ್ರದಾನ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. ಶಿಬಿರದಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಉಚಿತವಾಗಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವಿವರಿಸಿದರು.
ಈ ತಪಾಸಣಾ ಶಿಬಿರದಲ್ಲಿ ಶ್ರೀದೇವಿ ಆಸ್ಪತ್ರೆಯ ವೈದ್ಯರಾದ ಡಾ.ಶೃತಿ, ನೇತ್ರಾಧಿಕಾರಿ ಮಂಜುನಾಥ್, ಶ್ರೀದೇವಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ರಾಜೇಶ್, ಕಾರ್ತಿಕ್, ಹಾಗೂ ಆಶಾ ಕಾರ್ಯಕರ್ತರು, ಗ್ರಾಮಸ್ಥರು, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದರು.

 

Leave a Reply

Your email address will not be published. Required fields are marked *

error: Content is protected !!