ಇತಿಹಾಸ ಸಾರುವ ಸ್ಥಳಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು

ಪಾವಗಡ : ನಿಡಗಲ್ಲು ವಾಲ್ಮೀಕಿ ಅಶ್ರಮದ ಪೀಠಾಧ್ಯಕ್ಷರು ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜೀ ರವರು ಪರುಶುರಾಂಪುರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಅರ್ಶಿವಚನ ನೀಡಿ ಮಾತನಾಡಿದ ರವರು. ವಿದ್ಯಾರ್ಥಿಗಳು ದೇಶದ ಭವಿಷ್ಯ ಪ್ರಜೆಗಳು ನೀವು ದೇಶ ನಾಡು ಹಾಗೂ ಇತಿಹಾಸ ಉಳಿಸುವ ಕೆಲಸ ಮಾಡಬೇಕು ಸರ್ಕಾರ ನಿಡಗಲ್ಲು ಪ್ರವಾಸೋದ್ಯಮ ಕೇಂದ್ರ ಘೋಷಣೆ ಮಾಡಬೇಕು ರಾಜ್ಯದ ನೂರಾರು ರಾಜ ಮನೆತನಗಳ ಆಳ್ವಿಕೆ ಮಾಡಿದ ಐತಿಹಾಸಿಕ ಸ್ಥಳಗಳನ್ನು ರಕ್ಷಿಸುವಂತಗಬೇಕು ಎಂದು ತಿಳಿಸಿದರು.


ಇತಿಹಾಸ ಪ್ರಧ್ಯಾಪಕ ರಂಗನಾಥ್ ಮಾತನಾಡಿ ವಿದ್ಯಾರ್ಥಿಗಳಿಗಳು ಮತ್ತು ಭೋದಕ ವರ್ಗದವರು ಇಂದು ಐತಿಹಾಸಿಕ ನೀಡಗಲ್ಲು ದುರ್ಗ ವೀಕ್ಷಣೆ ಮತ್ತು ವಾಲ್ಮೀಕಿ ಮಠಕ್ಕೆ ಭೇಟಿ ಕೊಟ್ಟು ನೀಡಗಲ್ಲು ವಾಲ್ಮೀಕಿ ಪೀಠದ ಶ್ರೀ ಸಂಜಯ್ ಕುಮಾರ್ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಪ್ರಧ್ಯಾಪಕ ರಂಗನಾಥ ರವರು ನೀಡಗಲ್ಲು ಇತಿಹಾಸ ಸರಿ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಉಳ್ಳ ಮತ್ತು ಅತ್ಯಂತ ಶ್ರೀಮಂತ ರಾಜಾಮನೆತನ ಜೊತೆಗೆ ವೀರ ಶೌರ್ಯ ಪರಾಕ್ರಮ ಜೊತೆಗೆ ಪ್ರಾಚಿನ ಕಲೆ ಸಾಹಿತ್ಯ ಸಂಗೀತಕ್ಕೆ ಹೆಸರುವಾಸಿಯಾದ ಸ್ಥಳ ನೀಡಗಲ್ಲು ಇಲ್ಲಿನ ಪ್ರತಿ ಕಲ್ಲು ಬಂಡೆ ದೇವಾಲಯ ಕೋಟೆ ಶಾಸನಗಳು ಲಿಪಿಗಳು ಇಲ್ಲಿನ ಇತಿಹಾಸವನ್ನು ನಮಗೆ ತಿಳಿಸುತ್ತವೆ ಇವಾಗಿನ ಯುವ ಪೀಳಿಗೆಗೆ ಇದನ್ನು ಪರಿಚಯಿಸಲು ಮತ್ತು ಇತಿಹಾಸಿಕ ಸ್ಥಳಗಳ ಅಭಿರುದ್ದಿ ಪಡಿಸಲು ಸರ್ಕಾರ ಮತ್ತು ಪುರಾತತ್ವ ಇಲಾಖೆ ಅತಿ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ ಮಾತನಾಡಿ, ಕರ್ನಾಟಕ ರಾಜ್ಯದ ಎಪ್ಪತ್ತೆಳು ಪಾಳೇಪಟ್ಟಗಳಲ್ಲಿ ಅತ್ಯಂತ ವೈವಿದ್ಯಮಯ ನಾಡು ಸಿರಿ ಸಂಪತ್ತು ಚಿನ್ನ ವಜ್ರಗಳನ್ನು ನೀಡಗಲ್ಲಿನಿಂದ ಶ್ರೀಲಂಕಾ ವರೆಗೂ ಸಾಗಟ ವ್ಯಾಪಾರ ಮಾಡುತ್ತಿದ್ದರು ನಮ್ಮ ಇಂದಿನ ತಲೆಮಾರುಗಳು ಕಟ್ಟಿದ ನಾಡು ನುಡಿ ಕೋಟೆ ದೇವಾಲಯ ಮತ್ತಿತರರ ಕುರುಹುಗಳನ್ನು ಇವಾಗಿನ ಯುವ ಪೀಳಿಗೆಗೆ ವಿದ್ಯಾಭ್ಯಾಸದ ಜೊತೆಗೆ ವೀಕ್ಷಣೆ ಮತ್ತು ಸಂಶೋಧನೆ ಮಾಡಿ ಸಮಾಜಕ್ಕೆ ಸಾರುವ ಕೆಲಸಕ್ಕೆ ಮುಂದಾಗಬೇಕು ಕರೆ ನೀಡಿದರು ಈ ಸಂದರ್ಭದಲ್ಲಿ ನಿಡಗಲ್ ಹೋಬಳಿ ಅಧ್ಯಕ್ಷ ಓಂಕಾರ ನಾಯಕ ಪ್ರಧ್ಯಾಪಕರಾದ ವೀರಭದ್ರಯ್ಯ ಸತೀಶ್ ಕೆ ಟಿ ಹಳ್ಳಿ ರಾಮಣ್ಣ ನಿಡಗಲ್ಲು ಜಗದೀಶ್ ತಿಮ್ಮಯ್ಯ. ಮೋಹನ್ ರಮೇಶ್ ನಾಯಕ ಮಂಜುನಾಥ್ ಮಾರುತಿ ಮತ್ತಿರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!