ತುಮಕೂರು ಗ್ರಾಮಾಂತರ : ಕರೋನ ಮಹಾಮಾರಿ ಕಾಯಿಲೆಯಿಂದಾಗಿ ಸರ್ಕಾರದ ಆರ್ಥಿಕ ಸ್ಥಿತಿ ಸರಿ ಇಲ್ಲದಿದ್ದರೂ ಸಹ ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ಅವರು ಒಂದಲ್ಲಾ ಒಂದು ರೀತಿಯಲ್ಲಿ ಜನ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ಗ್ರಾಮಾಂತರ ಜನರ ಸೌಭಾಗ್ಯವೇ ಸರಿ, ವ್ಯಾಕ್ಸಿನೇಷನ್ ಹಾಕಿಸುವುದು, ಆಹಾರ ಕಿಟ್ ಹಂಚುವುದು, ಆರ್ಥಿಕ ಸಹಾಯ ಮಾಡುವುದು ಹೀಗೆ ಒಂದಾ ಎರಡಾ ಹಲವಾರು ರೀತಿಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸತತ ಪರಿಶ್ರಮದಿಂದ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.
ಹಾಗೆಯೇ ತುಮಕೂರು ಗ್ರಾಮಾಂತರ ಊರ್ಡಿಗೆರೆ ಹೋಬಳಿಯ ಸೀತಕಲ್ಲು ಗ್ರಾಮದಲ್ಲಿ ಸುಮಾರು 66 (ಅರವತ್ತ ಆರು) ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಶಾಲಾ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ನಂತರ ಅದೇ ಸೀತಕಲ್ಲು ಗ್ರಾಮದಲ್ಲಿ ಸುಮಾರು 35 (ಮೂವತ್ತೈದು) ಲಕ್ಷ ವೆಚ್ಚದ ನೂತನ ಆಯುಷ್ ಆಸ್ಪತ್ರೆಯ ಕಟ್ಟಡವನ್ನು ಮಂಗಳವಾರ ಇಲ್ಲಿನ ಜನರಿಗೆ ಅನುಕೂಲಕರವಾಗಲೆಂದು ಗ್ರಾಮಾಂತರ ಶಾಸಕರು ಉದ್ಘಾಟಿಸಿ, ಜನರು ಇನ್ಮುಂದೆ ಉಚಿತ ಮತ್ತು ಕಡಿಮೆ ವೆಚ್ಚದಲ್ಲಿ ತಮ್ಮ ಆರೋಗ್ಯ ತಪಾಸಣೆಯನ್ನು & ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗಿದ್ದಾರೆ.