ಬೆಂಗಳೂರು: ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಸಚಿವ ನಾಗೇಶ್ ನೇತೃತ್ವದಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ನಾಗೇಶ್, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ವಿಶೇಷ ನಿರ್ಣಯ. 19-22 ಎರಡು ದಿನ ಪರೀಕ್ಷೆ ನಡೆಸಲಾಯಿತು. ಕೋವಿಡ್ ಸಮಯದಲ್ಲಿ ಹೇಗೆ ಮಾಡ್ತಾರೆ ಅನ್ನೋ ಸಮಸ್ಯೆ ಇತ್ತು. ಇಂಥ ಸಮಯದಲ್ಲಿ ಎಲ್ಲಾ ಅಧಿಕಾರಿ ವರ್ಗ ಶ್ರಮವಹಿಸಿತ್ತು ಎಲ್ಲರಿಗೂ ಅಭಿನಂದನೆ ಎಂದಿದ್ದಾರೆ.
ಇನ್ನು ಈ ಬಾರಿ 8.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 99.9 ಮಕ್ಕಳು ಉತ್ತೀರ್ಣರಾಗಿದ್ದಾರೆ. 4,70,160 ಹುಡುಗರು ಪಾಸ್ ಆಗಿದ್ದು, 4,01281 ಹೆಣ್ಣು ಮಕ್ಕಳು ಪಾಸ್ ಆಗಿದ್ದಾರೆ.
90 ರಿಂದ 100 ಅಂಕ ಪಡೆದವರು
1,28,931 ವಿದ್ಯಾರ್ಥಿಗಳು ಪಾಸ್, 80-89 ಅಂಕ ಪಡೆದವರು 2,50,317 ವಿದ್ಯಾರ್ಥಿಗಳು, B ಗ್ರೇಡ್ ಪಡೆದವರು 2,87,684 ವಿದ್ಯಾರ್ಥಿಗಳು, 35-59 ಅಂಕ ಪಡೆದವರು 1,13,610 ವಿದ್ಯಾರ್ಥಿಗಳು, 9% ವಿದ್ಯಾರ್ಥಿಗಳು ಮಾತ್ರ ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ. ಒಂದು ವಿಷಯಕ್ಕೆ 28 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 13 ಮಕ್ಕಳಿಗೆ ಈ ರೀತಿ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ
ಔಟ್ ಆಫ್ ಮಾರ್ಕ್ಸ್ ಪಡೆದು 150 ಮಕ್ಕಳು ಪಾಸ್ ಆಗಿದ್ದಾರೆ. 623 ಮಾರ್ಕ್ಸ್ ಪಡೆದವರು 289 ವಿದ್ಯಾರ್ಥಿಗಳು, 622 ಅಂಕ ಪಡೆದವರು ಇಬ್ಬರು ವಿದ್ಯಾರ್ಥಿಗಳು, 621 ಅಂಕ ಪಡೆದವರು 449 ವಿದ್ಯಾರ್ಥಿಗಳು, 620 ಅಂಕ ಪಡೆದವರು 28 ವಿದ್ಯಾರ್ಥಿಗಳು.
ಭಾಷಾವಾರು ಪಾಸ್ ಆದವರ ಸಂಖ್ಯೆ
ಪ್ರಥಮ ಭಾಷೆಯಲ್ಲಿ 25,702 ವಿದ್ಯಾರ್ಥಿಗಳು ಪಾಸ್, ದ್ವಿತಿಯ ಭಾಷೆ -36628 ಮಕ್ಕಳು, ತೃತೀಯ ಭಾಷೆ 36,776 ವಿದ್ಯಾರ್ಥಿಗಳು, ಗಣಿತ 6321 ವಿದ್ಯಾರ್ಥಿಗಳು ಪಾಸ್, ವಿಜ್ಞಾನ 3649 ವಿದ್ಯಾರ್ಥಿಗಳು ಪಾಸ್, ಸೋಷಿಯಲ್ ಸೈನ್ಸ್ 9,367 ವಿದ್ಯಾರ್ಥಿಗಳು.
ಸರ್ಕಾರಿ ಶಾಲೆ ಮಕ್ಕಳು 30,7932 ಪಾಸ್, ಅನುದಾನಿತ 20,8515 ವಿದ್ಯಾರ್ಥಿಗಳು ಪಾಸ್, ಅನುದಾನರಹಿತ 26,4095 ವಿದ್ಯಾರ್ಥಿಗಳು ಪಾಸ್.