ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಜನಪದ ಕಲಾವಿದ ಡಿ.ನಾಗರಾಜ್ ಕರೆ

ಪಾವಗಡ.ಜಾನಪದ ಸಿರಿಗೆಜ್ಜೆ ಕಲಾ ಸಂಘ ಕತಿರಾಜನಹಳ್ಳಿ ಮಧುಗಿರಿ ತಾಲೂಕು ತಂಡದಿಂದ ,ಪಾವಗಡ ತಾಲ್ಲೂಕಿನ S. R. ಪಾಳ್ಯ ಗ್ರಾಮದಲ್ಲಿ ಸೋಮವಾರ ಇಡೀ ರಾತ್ರಿ,ಕರೀಭಂಟನ ಕಾಳಗ ಎಂಬ ಸುಂದರ ಬಯಲಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

 

 

 


ಕಾರ್ಯಕ್ರಮ ಉದ್ಘಾಟನೆಯನ್ನು,ಜಾನಪದ, ಬಯಲಾಟ ಕಲಾವಿದರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ವೀರ್ಲಗೊಂದಿ ಗ್ರಾಮದ ಡಿ. ನಾಗರಾಜು ರವರು ನೆರವೇರಿಸಿ, ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಅಪರೂಪದ ಜನಪದ ರಂಗಭೂಮಿ ಕಲೆ ಬಯಲಾಟವನ್ನು ಉಳಿಸಿ ಬೆಳೆಸಲು ಯುವಕರು, ವಿದ್ಯಾವಂತರು ಮುಂದೆ ಬರಬೇಕು. ಈ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಅಭಿಪ್ರಾಯಪಟ್ಟರು. ಅತಿಥಿಗಳಾಗಿ ಹಿರಿಯ ಕಲಾವಿದರಾದ ಮಲ್ಲನಾಯಕನಹಳ್ಳಿ ದ್ಯಾವರಪ್ಪ, ಚಿಕ್ಕಣ್ಣ, ವೀರ್ಲಗೊಂದಿ ಶಿವಗಂಗಪ್ಪ, ಬೆಳ್ಳಿಬಟ್ಲು ಬಲರಾಮ್,ಗ್ರಾಮಸ್ಥರಾದ ದಾಸಣ್ಣ, ನಿವೃತ್ತ ದೈಹಿಕ ಶಿಕ್ಷಕರಾದ ಹನುಮಂತರಾಯಪ್ಪ, ಶ್ರೀರಾಮಪ್ಪ, ಸಿರಿಗೆಜ್ಜೆ ಸಂಘದ ಶ್ರೀ ರಾಮಾಮೂರ್ತಿ ಮುಖವೀಣೆ ರಂಗನಾಥ, ಭಾಗವತರಾದ ಹನುಮಂತರಾಯಪ್ಪ, ಹಿರಿಯ ಕಲಾವಿದರು, ಗ್ರಾಮಸ್ಥರು ಪಾಲ್ಗೊಂಡಿದ್ದರು.ಎಲ್ಲಾ ಪಾತ್ರದಾರಿಗಳು ತಮ್ಮ ಕಲೆಯನ್ನು ಅದ್ಭುತವಾಗಿ ಪ್ರದರ್ಶಿಸಿ ಬಯಲಾಟ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!