ತುಮಕೂರು : ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚಾಗಿದ್ದು ಮಚ್ಚು, ಲಾಂಗು ಸೇರಿದಂತೆ ಇನ್ನಿತರೆ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ, ಜೊತೆಗೆ ಮೀಟರ್ ಬಡ್ಡಿ ವ್ಯವಹಾರವೂ ಸಹ ಮಿತಿ ಮೀರಿದ್ದು ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕಾಗಿದೆಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅತೀಕ್ ಅಹಮದ್ ರವರು ಬೇಸರ ವ್ಯಕ್ತಪಡಿಸಿದ್ದಾರೆ.
https://www.facebook.com/share/v/1AjEA5Q1xW/

ಅವರು ಬೇಸರ ವ್ಯಕ್ತಪಡಿಸಲು ಕಾರಣ ಮಂಗಳವಾರ ಮಧ್ಯಾಹ್ನ ತುಮಕೂರು ನಗರದ ಮೆಳೇಕೋಟೆ ಮುಖ್ಯರಸ್ಥೆಯ ಇಸ್ರಾ ಷಾದಿ ಮಹಲ್ ಬಳಿಯ ಗುಲ್ ಷನ್ ಬಟ್ಟೆ ಅಂಗಡಿ ಬಳಿಯ ಹೋಟೆಲ್ ಗ್ರೀನ್ ವೇಜಿಟೀರಿಯನ್ ಹೋಟಲ್ ಬಳಿ ಬೀಕರ ಹತ್ಯೆ ನಡೆದಿದೆ, ಮೃತ ಯುವಕನನ್ನು ಮುಬಾರಕ್ ಪಾಶ (28) ಎಂದು ತಿಳಿದು ಬಂದಿದ್ದು ಮೇಲ್ನೋಟಕ್ಕೆ ಬಡ್ಡಿ ಹಣದ ವ್ಯವಹಾರವೇ ಹತ್ಯೆಗೆ ಕಾರಣ ಎನ್ನಲಾಗಿದ್ದು ಮಧ್ಯಾಹ್ನ ಹೋಟೆಲ್ ಬಳಿಗೆ ಬಂದಾಗ ಯುವಕ ಮುಬಾರಕ್ ಮೇಲೆ ಎರಗಿದ ಪುಂಡರು ಕುತ್ತಿಗೆ ಹಾಗೂ ಮುಖಕ್ಕೆ ಇರಿದು ಪರಾರಿಯಾಗಿದ್ದಾರೆ, ಇಂತಹ ಕೃತ್ಯಗಳು ಹಾಡಹಗಲೇ ನಡೆಯುತ್ತಿವೆ ಎಂದರೆ ಜನಸಮಾನ್ಯರು ಯಾವ ರೀತಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಬೇಸರವನ್ನು ವ್ಯಕ್ತಪಡಿಸಿದರು.
https://www.facebook.com/share/v/1AjEA5Q1xW/
ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಜನತೆಯು ಡ್ರಗ್ಸ್ ಹಾವಳಿಗೆ ತುತ್ತಾಗುತ್ತಿದ್ದು ಇದರಿಂದ ಹೊರಬರಬೇಕಾಗಿದೆ, ಡ್ರಗ್ಸ್ ಇವತ್ತಿನ ದಿನಗಳಲ್ಲಿ ಸುಲಭವಾಗಿ ಸಿಗುತ್ತಿವೆ ಎಂಬ ಸುದ್ಧಿಗಳು ಕೇಳಿ ತುಂಬಾ ಬೇಸರವಾಗಿದೆ, ಈ ರೀತಿಯಾದ ಡ್ರಗ್ಸ್ ಗಳಿಗೆ ದಾಸರಾಗಿರುವವರೇ ಇಂತಹ ಅಹಿತಕರ ಘಟನಗೆಳಲ್ಲಿ ಭಾಗಿಗಳಾಗುತ್ತಿರುವುದು ತುಂಬಾ ನೋವಿನ ಸಂಗತಿ ಎಂದರು.

ಮುಂದುವರೆದು ಮಾತನಾಡುತ್ತಾ ನಮ್ಮ ಜಿಲ್ಲೆಯು ಶೈಕ್ಷಣಿಕ ತವರೂರಾಗಿದ್ದು ಇಂತಹ ದುಶ್ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ನಗರವು ತುಂಬಾ ಘೋರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಂದರು.