ಗುಬ್ಬಿ: ಕಳೆದ ಹದಿನೈದು ವರ್ಷಗಳಿಂದ ಹಾಲಿನ ಡೈರಿಗಳನ್ನೇ ಮಾಡದ ಸೋ ಕಾಲ್ಡ್ ಎನ್ ಡಿಎ ಮುಖಂಡರ ಊರುಗಳಲ್ಲೇ ಹಾಲಿನ ಡೈರಿ ತೆರೆದಿಲ್ಲ. ಇನ್ನೂ ಕೆಲ ಮುಖಂಡರು ಊರಲ್ಲಿ ಡೈರಿ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಗುಬ್ಬಿ ತಾಲ್ಲೂಕು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಆರೋಪ ಮಾಡಿದ್ದ ಮುಖಂಡರ ವಿರುದ್ಧ ಹರಿಹಾಯ್ದರು.
ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕದ ಆವರಣದಲ್ಲಿನ ಕಚೇರಿಯಲ್ಲಿ ಮಾತನಾಡಿದ ಅವರು ಎ ಗ್ರೇಡ್ ಇದ್ದ ಡೈರಿಗಳನ್ನು ಸಿ ಗ್ರೇಡ್ ಗೆ ತಂದ ಈ ಮುಖಂಡರು ಕಂಪ್ಯೂಟರ್ ಸಹ ಡೈರಿಯಲ್ಲಿಲ್ಲ. ಬಿಜೆಪಿ ಮುಖಂಡರ ತಾಯಿ ಡೈರಿಯ ಅಧ್ಯಕ್ಷರಾಗಿ ಅಭಿವೃದ್ದಿ ಕಂಡಿಲ್ಲ ಎಂದು ನೇರ ಆರೋಪ ಮಾಡಿದರು. ಜೆಡಿಎಸ್ ಮುಖಂಡ ನಾಗರಾಜು ಈ ಹಿಂದೆ ಜಿಲ್ಲಾ ಪಂಚಾಯಿತಿ ಆಯ್ಕೆಯಾಗಿದ್ದ ಹೇಗೆ ಎಂಬುದು ಮರೆಯಬಾರದು. ಅವರ ಗ್ರಾಮದ ರೈತರು ನಾಲ್ಕೈದು ಕಿಮೀ ಕ್ರಮಿಸಿ ಕಲ್ಲಹಳ್ಳಿ ಡೈರಿಗೆ ಹಾಲು ಹಾಕುತ್ತಾರೆ. ಲೀಡರ್ ಎಂದು ಬಿಂಬಿಸಿಕೊಳ್ಳುವ ಇವರಿಗೆ ನಮ್ಮೂರಿಗೆ ಡೈರಿ ತರುವ ಅಲೋಚನೆಯೇ ಇಲ್ಲ. ಚುನಾವಣೆ ಮಾಡಿಲ್ಲ. ಹಣ ಲೂಟಿ ಎಂದು ಆಧಾರವಿಲ್ಲದ ಆರೋಪ ಮಾಡಿದ ಮಾಜಿ ನಿರ್ದೇಶಕರು ಎಷ್ಟು ಡೈರಿ ಮುಚ್ಚಿದ್ದಾರೆ. ಎಷ್ಟು ರೈತರಿಗೆ ಶೇರ್ ನೀಡಿದ್ದಾರೆ. ತಮ್ಮ ನೆಂಟರಿಗೆ ಮಾತ್ರ ಡೈರಿ ಮಾಡಿದ್ದಾರೆ ಎಂಬುದು ಇಡೀ ತಾಲ್ಲೂಕಿಗೆ ತಿಳಿದಿದೆ. ಮಹಿಳೆಯೊಬ್ಬಳು ಆಡಳಿತ ಮಾಡುವುದು ಸಹಿಸದ ಈ ಮುಖಂಡರು ಎಸ್ಸಿ ಎಸ್ಟಿ ಒಬಿಸಿ ಜನಗಳಿಗೆ ಡೈರಿ ನೀಡಲು ಬಿಟ್ಟಿಲ್ಲ. ಹಣ ವಸೂಲಿ ಬಗ್ಗೆ ಆರೋಪ ಮಾಡುವವರು ಖುದ್ದು ಡೈರಿಗೆ ತೆರಳಿ ಪರಿಶೀಲಿಸಿ ಎಲ್ಲಾ ಆಡಿಟ್ ದಾಖಲೆ ಸಿಗುತ್ತದೆ ಎಂದು ಟಾಂಗ್ ನೀಡಿದರು.
ತಾಕತ್ತು ಇದ್ದರೆ ಎಂದು ಮತ್ತೇ ಮತ್ತೇ ಕೆಣಕಿ ಸೋಲುತ್ತಾರೆ. ಈಗಾಗಲೇ ಐದು ಬಾರಿ ಶಾಸಕರಾಗಿ ತಾಕತ್ತು ತೋರಿದ್ದೇವೆ. ಸುಖಾಸುಮ್ಮನೆ ಮಾಧ್ಯಮ ಮುಂದೆ ಸುಳ್ಳು ಆರೋಪ ಮಾಡುವುದು ಬಿಟ್ಟು ನಮ್ಮ ಕಾರ್ಯ ವೈಖರಿ ನೇರ ಡೈರಿಗೆ ತೆರಳಿ ತಿಳಿದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ ಅವರು ಪಶು ಆಹಾರ ಕಚ್ಚಾ ವಸ್ತುಗಳ ಪರಿಶೀಲನೆ ಖುದ್ದು ಮಾಡಿದ್ದೇನೆ. ಇಲ್ಲಿ ನಡೆಯುವ ಕ್ವಾಲಿಟಿ ಚೆಕ್ ಹೇಗೆ ನಡೆಯುತ್ತದೆ. ಇದೆಲ್ಲಾ ಎನ್ ಡಿಎ ಸಹಕಾರ ಇಲ್ಲದೆ ನಡೆಯುತ್ತಾ ಎಂಬುದು ತಿಳಿದ ಕೂಡಲೇ ವಿಚಾರ. ಇದೆಲ್ಲದಕ್ಕೂ ಮಾಸ್ಟರ್ ಮೈಂಡ್ ಯಾರು ಎಂಬುದು ಜಿಲ್ಲೆಗೆ ತಿಳಿದಿದೆ ಎಂದು ಮಾರ್ಮಿಕ ಪ್ರತಿಕ್ರಿಯೆ ನೀಡಿದರು.
ಜಾತಿ ಪಕ್ಷ ಮಾಡುತ್ತೇನೆ ಎಂದು ಆರೋಪ ಮಾಡಿದ ಮಾಜಿ ನಿರ್ದೇಶಕರು ಸ್ವಜಾತಿಯ ಪೆದ್ದನಹಳ್ಳಿ ಗ್ರಾಮದಲ್ಲಿ ಅವರ ಸಂಬಂಧಿಕರಿಲ್ಲ ಎಂದು ಡೈರಿ ತೆರೆಯದೇ ಜಾತಿ ಬುದ್ಧಿ ತೋರಿದ್ದಾರೆ. ಹಣ ವಸೂಲಿ ಬಗ್ಗೆ ಆರೋಪ ಮಾಡುವ ಅವರು ಬಿಟ್ಟುಗೊಂಡನಹಳ್ಳಿ ಡೈರಿಯಿಂದ ಎಷ್ಟು ಲಕ್ಷ ಪಡೆದಿದ್ದರೂ ಈಗ ನಾನು ಏನು ಮಾಡಿದೆ ತಿಳಿದುಕೊಳ್ಳಲಿ ಎಂದು ಕಿಡಿಕಾರಿದ ಅವರು ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆ ವಿಳಂಬ ಆದಲ್ಲಿ ಚುನಾವಣೆ ವಿಳಂಬ ಆಗಿದೆ. 25 ವರ್ಷ ಆಡಳಿತ ನಡೆಸಿದ ಅವರಿಗೆ ಕಾನೂನು ತಿಳಿಯಲಿಲ್ಲವೇ. ನನಗೆ ನಿರ್ದೇಶಕರ ಕೆಲಸ ಗೊತ್ತಿಲ್ಲ ಎನ್ನುವ ಇವರು ಎಷ್ಟು ಡೈರಿ ಮಂಜೂರು ಮಾಡಿದ್ದರು ಎಂಬುದು ರೈತರೇ ತಿಳಿಯಬೇಕಿದೆ. ನಾರನಹಳ್ಳಿ ಡೈರಿಯಲ್ಲಿ 23 ವರ್ಷದಿಂದ ಶೇರ್ ನೀಡಿಲ್ಲ ಎನ್ನುವ ರೈತರಿಗೆ ನ್ಯಾಯ ಕೊಡಬೇಕಿದ್ದ ಅವತ್ತಿನ ನಿರ್ದೇಶಕರು ಈಗ ಪತ್ರಿಕೆ ಮುಂದೆ ಹುರುಳಿಲ್ಲದ ಆರೋಪ ಮಾಡುತ್ತಾರೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಯ್ಯ, ಲೋಕೇಶ್ವರ್, ಯೋಗೇಶ್ ಇತರರು ಇದ್ದರು.