ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 2 ರಂದು ವಿಜಯ ದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರಲು ಕಾರಣ ಸಿಇಓ ಪ್ರಭು ಅವರ ಕಾಳಜಿ.

ತುಮಕೂರು ತಾಲ್ಲೂಕಿನ ಎರಡು ಪ್ರಮುಖ ಪ್ರವಾಸಿ ತಾಣಗಳಾದ ಜೈನರ ಯಾತ್ರಾಸ್ಥಳ ಮಂದರಗಿರಿ ಬಸದಿ ಬೆಟ್ಟದ ಪಿಂಚಿ ಮಾದರಿಯ ಧ್ಯಾನ ಮಂದಿರ,ಚಾರಿತ್ರಿಕ ಹಿನ್ನಲೆಯುಳ್ಳ ಸುಂದರವಾದ ಕೈದಾಳದ ಚನ್ನಕೇಶವ ಮೂರ್ತಿ ಮತ್ತು ತಿಪಟೂರು ತಾಲ್ಲೂಕಿನ ಅರಳುಗುಪ್ಪೆ ಪ್ರಾಚೀನ ಶಿಲ್ಪಕಲೆಯ ಚನ್ನಕೇಶವ ದೇವಾಲಯ ಸೇರಿದಂತೆ ಮೂರು ಪ್ರಮುಖ ಸ್ಥಳಗಳು ಒಂದೇ ಸ್ತಬ್ಧಚಿತ್ರದಲ್ಲಿ ಮೂಢಿ ಬರುವಂತೆ ಕಲಾವಿದರಿಗೆ ಸೂಚಿಸಿದ್ದಾರೆ

ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಮತ್ತು ಪರಿಜ್ಞಾನ ಹೊಂದಿರುವ ಜಿಲ್ಲಾ ಪಂಚಾಯತ್ ಸಿಇಓ ಜಿ ಪ್ರಭು ರವರು ಕಲಾವಿದರಿಗೆ ಮಾಹಿತಿ ಜೊತೆಗೆ ತಮ್ಮ ಕಲ್ಪನೆಯನ್ನು ವಿವರಿಸಿ, ಒಂದು ಸುಂದರ ವಿನ್ಯಾಸ ತಯಾರಿಸಿ ಸ್ತಬ್ಧಚಿತ್ರ ನಿರ್ಮಾಣದ ನೈಪುಣ್ಯ ಹೆಚ್ಚಿಸಿದ್ದು ಅವರ ಆಸಕ್ತಿ, ಉತ್ಸಾಹ, ಕ್ರಿಯಾಶೀಲತೆಗೆ ಒಂದು ಕನ್ನಡಿ.

ತುಮಕೂರು ದಸರಾ ಜವಾಬ್ಧಾರಿ ಜೊತೆಗೆ ಮೈಸೂರಿನ ಸ್ತಬ್ಧಚಿತ್ರವನ್ನು ಸುಂದರವಾಗಿ, ಆಕರ್ಷಕವಾಗಿ ನಿರ್ಮಾಣ ಮಾಡುವ ಬಗ್ಗೆ ಸದಾ ಸಂಪರ್ಕದಲ್ಲಿರುವ ಅವರ ಬಿಡುವಿಲ್ಲದ ಕಾರ್ಯಕ್ಷಮತೆ ಮೆಚ್ಚುವಂತಾದ್ದು.