ಆಗಸ್ಟ್ : ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾಉತ್ಸವವಾದ ಈಶ ಗ್ರಾಮೋತ್ಸವದ 17ನೇ ಆವೃತ್ತಿ ಆಗಸ್ಟ್ 10ರಂದುಕರ್ನಾಟಕದಲ್ಲಿ ಆರಂಭವಾಯಿತು. ಮೈಸೂರು ಪ್ರೆಸ್ ಕ್ಲಬ್ನಲ್ಲಿ ಇಂದುನಡೆದ ಪತ್ರಿಕಾಗೋಷ್ಠಿಯಲ್ಲಿ, ಗ್ರಾಮೋತ್ಸವ ತಂಡವು ಈ ವರ್ಷದಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿತು. 2024ರಲ್ಲಿ 5,000 ಕ್ಕೂಹೆಚ್ಚು ಆಟಗಾರರನ್ನು ದಾಖಲಿಸಿದ್ದ ಕರ್ನಾಟಕ ರಾಜ್ಯವು, ಈ ವರ್ಷ700ಕ್ಕೂ ಹೆಚ್ಚು ತಂಡಗಳೊಂದಿಗೆ 8,100ಕ್ಕೂ ಹೆಚ್ಚು ಆಟಗಾರರದಾಖಲೆಯ ಭಾಗವಹಿಸುವಿಕೆಯನ್ನು ಕಾಣಲಿದೆ, ಇದು ರಾಜ್ಯದಾದ್ಯಂತಉತ್ಸವದ ಬೆಳೆಯುತ್ತಿರುವ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಈಶ ಗ್ರಾಮೋತ್ಸವ ಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್ಗಳಲ್ಲಿನಡೆಯುತ್ತಿದೆ, ಇವುಗಳಲ್ಲಿ ಎಂಟು ಕ್ಲಸ್ಟರ್ಗಳಲ್ಲಿ ಥ್ರೋಬಾಲ್ಪಂದ್ಯಾವಳಿಗಳು ನಡೆಯುತ್ತವೆ. ಪುರುಷರ ವಿಭಾಗದಲ್ಲಿ ವಾಲಿಬಾಲ್ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್ ಇರುತ್ತದೆ, ಫೈನಲ್ನಲ್ಲಿಪ್ಯಾರಾ–ವಾಲಿಬಾಲ್ನ ಪ್ರದರ್ಶನ ಪಂದ್ಯವೂ ಜರುಗಲಿದೆ. ರಾಜ್ಯದಲ್ಲಿಕ್ಲಸ್ಟರ್ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ವಿಭಾಗೀಯಪಂದ್ಯಗಳು ಆಗಸ್ಟ್ 31ರಂದು ಉಡುಪಿಯಲ್ಲಿ ಮತ್ತು ಸೆಪ್ಟೆಂಬರ್7ರಂದು ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಿಗದಿಯಾಗಿವೆ.
ದೇಶದಾದ್ಯಂತ, ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳನ್ನುವ್ಯಾಪಿಸಲಿದೆ. ಈ ವರ್ಷ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು, 6,000ಕ್ಕೂಹೆಚ್ಚು ತಂಡಗಳು ರಚನೆಯಾಗಿವೆ.
ಗ್ರಾಮೋತ್ಸವವು ಮೂರು ಹಂತಗಳಲ್ಲಿ ನಡೆಯಲಿದೆ: ಕ್ಲಸ್ಟರ್ ಹಂತ, ವಿಭಾಗೀಯ ಹಂತ ಮತ್ತು ಫೈನಲ್. ಗ್ರಾಂಡ್ ಫೈನಲ್ ಸೆಪ್ಟೆಂಬರ್21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಪ್ರತಿಷ್ಠಿತಆದಿಯೋಗಿ ಮುಂದೆ ನಡೆಯಲಿದೆ. ಕಳೆದ ವರ್ಷ, ಕರ್ನಾಟಕ ಅದ್ಭುತಪ್ರದರ್ಶನ ನೀಡಿ, ಪುರುಷರ ವಾಲಿಬಾಲ್ನಲ್ಲಿ ಮೊದಲ, ಎರಡನೇಮತ್ತು ಮೂರನೇ ಬಹುಮಾನಗಳನ್ನು ಗೆದ್ದುಕೊಂಡಿತು ಮತ್ತುಮಹಿಳೆಯರ ಥ್ರೋಬಾಲ್ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.
ಈ ಉಪಕ್ರಮದ ಬಗ್ಗೆ ಮಾತನಾಡುತ್ತಾ, ಸದ್ಗುರುಗಳು, “ಈಶಗ್ರಾಮೋತ್ಸವವು ಕ್ರೀಡೆಯ ಮೂಲಕ ಜೀವನದಸಂಭ್ರಮಾಚರಣೆಯಾಗಿದೆ. ಕ್ರೀಡೆಯು ಸಾಮಾಜಿಕ ವಿಭಜನೆಗಳನ್ನುಮೀರಿ ಜನರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಇದುಆಟದ ಆನಂದದ ಮೂಲಕ ಜಾತಿ, ಧರ್ಮ ಮತ್ತು ಇತರ ಗುರುತುಗಳಗಡಿಗಳನ್ನು ಅಳಿಸಬಲ್ಲದು. ಇದು ಅದ್ಭುತ ಕ್ರೀಡಾಪಟುವಾಗುವ ಬಗ್ಗೆಅಲ್ಲದೆ ಜೀವನದುದ್ದಕ್ಕೂ ಆಟದ ಮನೋಭಾವದೊಂದಿಗೆ ಬದುಕುವಕುರಿತಾಗಿದೆ. ನೀವು ಸಂಪೂರ್ಣವಾದ ತೊಡಗಿಸಿಕೊಳ್ಳುವಿಕೆ ಮತ್ತುಉತ್ಸಾಹದಿಂದ ಚೆಂಡನ್ನು ಎಸೆಯಲು ಸಾಧ್ಯವಾದರೆ, ಆ ಚೆಂಡುಜಗತ್ತನ್ನೇ ಬದಲಾಯಿಸಬಲ್ಲದು. ನೀವು ನಿರಾಳತೆಯೊಂದಿಗೆ ಆಡುವಆನಂದವನ್ನು ಅನುಭವಿಸಬೇಕು” ಎಂದು ಹೇಳುತ್ತಾರೆ.
ಕ್ರೀಡೆಯ ಜೊತೆಗೆ, ಗ್ರಾಮೋತ್ಸವವು ಗ್ರಾಮೀಣ ಭಾರತದ ಶ್ರೀಮಂತಸಾಂಸ್ಕೃತಿಕ ವೈವಿಧ್ಯತೆಯನ್ನು ಕರ್ನಾಟಕದ ಹುಲಿ ವೇಷ, ತಮಿಳುನಾಡಿನ ತವಿಲ್–ನಾದಸ್ವರಂ, ವಳ್ಳಿ ಕುಮ್ಮಿ ಮತ್ತುಒಯಿಲಾಟ್ಟಂ, ಕೇರಳದ ಪಂಚಾರಿ ಮೇಳಂ ಮತ್ತು ಚೆಂಡಾ ಮೇಳಂಮತ್ತು ತೆಲಂಗಾಣದ ಆದಿವಾಸಿ ಗುಸಾಡಿ ನೃತ್ಯ ಸೇರಿದಂತೆ ವಿವಿಧರಾಜ್ಯಗಳ ಸಾಂಪ್ರದಾಯಿಕ ಪ್ರದರ್ಶನಗಳೊಂದಿಗೆ ಆಚರಿಸುತ್ತದೆ. ರಂಗೋಲಿ ಬಿಡಿಸುವುದು ಮತ್ತು ಸಿಲಂಬಂ ಮುಂತಾದ ಸಾರ್ವಜನಿಕಸ್ಪರ್ಧೆಗಳು ಹಬ್ಬದ ವಾತಾವರಣವನ್ನು ಇನ್ನಷ್ಟು ಮೆರುಗುಗೊಳಿಸಲಿದೆ.
ಗ್ರಾಮೀಣ ಜನರು ವ್ಯಸನಗಳಿಂದ ಮುಕ್ತರಾಗಲು, ಜಾತಿ, ಧರ್ಮ ಮತ್ತುಧಾರ್ಮಿಕ ವಿಭಜನೆಗಳನ್ನು ಮೀರಿ ನಿಲ್ಲಲು ಮತ್ತು ಸಮುದಾಯಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲುಭಾರತದ ಗ್ರಾಮೀಣ ಚೇತನವನ್ನು ಪುನರುಜ್ಜೀವನಗೊಳಿಸಲುಸದ್ಗುರುಗಳು 2004ರಲ್ಲಿ ಈಶ ಗ್ರಾಮೋತ್ಸವವನ್ನು ಪ್ರಾರಂಭಿಸಿದರು. ವೃತ್ತಿಪರ ಕ್ರೀಡಾ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಗ್ರಾಮೋತ್ಸವವುರೈತರು, ಸ್ವಚ್ಛತಾ ಕಾರ್ಯಕರ್ತರು, ಮೀನುಗಾರರು, ದಿನಗೂಲಿಕೆಲಸಗಾರರು ಮತ್ತು ಗೃಹಿಣಿಯರಂತಹ ಗ್ರಾಮೀಣಜನಸಾಮಾನ್ಯರನ್ನು ಉದ್ದೇಶಿಸಲಾಗಿದೆ, ಅವರಿಗೆ ಆಡಲು, ಭಾಗವಹಿಸಲು ಮತ್ತು ಸಂಭ್ರಮಾಚರಿಸಲು ವೇದಿಕೆಯನ್ನುಒದಗಿಸುತ್ತದೆ.
ಈಶ ಔಟ್ರೀಚ್ನಿಂದ ಆಯೋಜಿಸಲ್ಪಟ್ಟ ಈಶ ಗ್ರಾಮೋತ್ಸವವುಗ್ರಾಮೀಣ ಅಭಿವೃದ್ಧಿ ಮತ್ತು ಕ್ರೀಡಾ ಪ್ರೋತ್ಸಾಹದಲ್ಲಿ ಅದರಪ್ರಭಾವಕ್ಕಾಗಿ ರಾಷ್ಟ್ರೀಯ ಮಾನ್ಯತೆ ಗಳಿಸಿದೆ. ಇದು ಭಾರತ ಸರ್ಕಾರದಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ‘ನ್ಯಾಷನಲ್ಸ್ಪೋರ್ಟ್ಸ್ ಪ್ರಮೋಷನ್ ಆರ್ಗನೈಸೇಷನ್ (NSPO)’ ಎಂದು ಮಾನ್ಯತೆಪಡೆದಿದೆ. 2018ರಲ್ಲಿ, ಬೇರುಮಟ್ಟದಲ್ಲಿ ಕ್ರೀಡೆಗೆ ಅತ್ಯುತ್ತಮಕೊಡುಗೆಗಾಗಿ ಈ ಉಪಕ್ರಮಕ್ಕೆ ಪ್ರತಿಷ್ಠಿತ ‘ರಾಷ್ಟ್ರೀಯ ಖೇಲ್ಪ್ರೋತ್ಸಾಹನ್ ಪುರಸ್ಕಾರ್‘ ನೀಡಲಾಯಿತು.