ತುಮಕೂರು _ಮಹಾನಗರ ಪಾಲಿಕೆಯ ಗಾರ್ಬೇಜ್ ಟ್ರಾನ್ಸ್ಫರ್ ಸ್ಟೇಷನ್ ನ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ನಗರದ ರಿಂಗ್ ರಸ್ತೆ ಬಳಿಯ ರೈಲ್ವೇ ಅಂಡರ್ ಪಾಸ್ ಬಳಿ ಇರುವ ಕಸವನ್ನು ಕಂಪ್ರೆಸ್ ಮಾಡುವ ಯಂತ್ರಕ್ಕೆ ಸಿಲುಕಿ ಒರಿಸ್ಸಾ ಮೂಲದ ಟೆಕ್ನಿಷಿಯನ್ ಆಶಿಶ್ ರಂಜನ್ (30) ಎನ್ನುವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಂತ್ರದ ರಭಸಕ್ಕೆ ಮೃತ ಯುವಕ ಆಶಿಶ್ ತಲೆ ಜಜ್ಜಿ ಹೋಗಿದ್ದು ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ.
ಕಳೆದ ಆರು ತಿಂಗಳ ಹಿಂದೆ ಪಾಲಿಕೆ ವತಿಯಿಂದ ನೂತನವಾಗಿ ಯಂತ್ರವನ್ನು ಖರೀದಿಸಲಾಗಿದ್ದು ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಪಿ ಟಿ ಎಸ್ ಕಂಪನಿಗೆ ಯಂತ್ರ ಸರಿ ಪಡಿಸಲು ಕೆಲಸ ನೀಡಿದ್ದ ಪಾಲಿಕೆ . ಇಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಯಂತ್ರ ಸರಿ ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ. ಇದೇ ಸಂದರ್ಭಲ್ಲಿ ಸ್ಥಳದಲ್ಲಿದ್ದ ಬೇರೆ ನೌಕರರು ಗಮನಿಸಿ ಪಾಲಿಕೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಪಾಲಿಕೆಯ ಇಂಜಿನಿಯರ್ ಗಳು ಹಾಗೂ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ತುಮಕೂರು ಡಿವೈಎಸ್ಪಿ ಚಂದ್ರಶೇಖರ್ ಸರ್ಕಲ್ ಇನ್ಸ್ಪೆಕ್ಟರ್ ಪುರುಷೋತ್ತಮ್ ತಿಲಕ್ ಪಾರ್ಕ್ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸಂಜಯ್ ಕಾಂಬಳೆ NEPS ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಸೇರಿದಂತೆ ಬೆರಳಚ್ಚು ತಜ್ಞರು ಬೇಟಿ ಕೊಟ್ಟಿದ್ದು ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.