ತುಮಕೂರು : ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿರುವ ತುಮಕೂರು ತಾಲ್ಲೂಕು ತಹಶೀಲ್ದಾರ್ ರವರ ಕಛೇರಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ತುಮಕೂರು ತಾಲ್ಲೂಕು ಕಛೇರಿಯಲ್ಲಿ ಸಾಕಷ್ಟು ಅವ್ಯವಹಾರ ಸೇರಿದಂತೆ, ಭ್ರಷ್ಠಾಚಾರ ಅತೀ ರೇಖಕ್ಕೆ ಹೋಗಿದೆ ಎಂದು ಗುಸು ಗುಸು ಮಾತುಗಳು ಕೇಳಿ ಬರುತ್ತಿತ್ತು, ಇದರ ಜಾಡನ್ನೇ ಹಿಡಿದ ಅಧಿಕಾರಿಗಳು ಇಂದು ಕಂದಾಯ ಇಲಾಖೆ ಸೇರಿದಂತೆ ತಹಶೀಲ್ದಾರ್ ಕಛೇರಿಯ ಹಲವು ವಿಭಾಗಗಳ ಇಲಾಖೆಯಲ್ಲಿನ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.