ತುಮಕೂರು: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಯ ಹಣ ಪಡೆದ ರೈತ ಮತ್ತೆ ಹಣ ನೀಡುವಂತೆ ಸರ್ವಿಸ್ ರಸ್ತೆ ಮುಚ್ಚಿ ಕಾಮಗಾರಿಗೆ ಅಡ್ಡಿ ಮಾಡಿರುವ ಘಟನೆ ತುಮಕೂರು ತಾಲೂಕಿನ ಕೋರಾ ಹೋಬಳಿ ಜಕ್ಕೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಕೋರಾ ಹೋಬಳಿ ಬೆಳಧರ ಗ್ರಾಮ ಪಂಚಾಯಿತಿಯ ಜಕ್ಕೆನಹಳ್ಳಿ ಗ್ರಾಮದಲ್ಲಿ ಹಾದೂ ಹೋಗಿರುವ ಎತ್ತಿನಹೊಳೆ ಕಾಮಗಾರಿಯಲ್ಲಿ ಜಮೀನು ಕಳೆದು ಕೊಂಡಿದ್ದ ರೈತ ಮಂಜುನಾಥ್( ಗೌಡ್ರು ಮಂಜ) ಎತ್ತಿನಹೊಳೆ ಯೋಜನೆಯಿಂದ ಬಂದ ಹಣವನ್ನು ಪಡೆದು ಸದ್ಯ ಎತ್ತಿನಹೊಳೆ ಯೋಜನೆ ಹಣ ಕಡಿಮೆಯಾಗಿದೆ ಎಂದು ತನ್ನ ಮೂಲ ಜಮೀನನಲ್ಲಿ ನಿರ್ಮಾಣ ಮಾಡಿರುವ ಸರ್ವಿಸ್ ರಸ್ತೆಯನ್ನು ಮುಚ್ಚಿದ್ದಾನೆ. ಇನ್ನೂ ಈ ಬಗ್ಗೆ ಎತ್ತಿನಹೊಳೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು ಸರ್ವಿಸ್ ರಸ್ತೆ ಮುಚ್ಚಿದ್ದರಿಂದಾಗಿ ಜಕ್ಕೆನಹಳ್ಳಿ ಬೆಟ್ಟದ ಮುತ್ತುರಾಯಸ್ವಾಮಿ ಹಾಗೂ ಚನ್ನಮುದ್ದನಹಳ್ಳಿ ಗ್ರಾಮಗಳಿಗೆ ಸಾಗಲು ಜನರು ಪರದಾಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ಹಣ ಪಡೆದರು ಸಹ ಸರ್ವಿಸ್ ರಸ್ತೆಗೆ ಮಣ್ಣು ಹಾಕಿ ರಸ್ತೆ ಸಂಪೂರ್ಣ ಮುಚ್ಚಿ ಹುಚ್ಚಾಟವಾಡುತ್ತಿರುವ ಮಂಜುನಾಥ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.