ತುಮಕೂರು : ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳಿಗೆ ಶಿಷ್ಠಾಚಾರದ ಹೆಸರಿನಲ್ಲಿ ಕಡೆಗಣಿಸಿರುವ ಆರೋಪ ಭಕ್ತವಲಯದಲ್ಲಿ ಕೇಳಿ ಬರುತ್ತಿದೆ.

ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪೀಠಾಧ್ಯಕ್ಷರಿಗೆ ವೇದಿಕೆಯ ತುದಿಯಲ್ಲಿ ಆಸನದ ವ್ಯವಸ್ಥೆಯನ್ನು ಕಲ್ಪಿಸಿರುವುದೇ ಇದೀಗ ಬಹು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದ್ದು, ಶಿಷ್ಠಾಚಾರವೆಂದರೇನು? ಕಾರ್ಯಕ್ರಮದ ರೂವಾರಿಗಳನ್ನು ಕಡೆಗಣಿಸುವುದಾ? ಇದು ಸರ್ಕಾರಿ ಕಾರ್ಯಕ್ರಮವೇ? ಇದರ ಉದ್ದೇಶವೇನು? ಇದಕ್ಕೆ ಯಾರು ಕಾರಣ? ಪೀಠಾಧ್ಯಕ್ಷರಿಗೂ ಶಿಷ್ಠಾಚಾರವೇ? ಯಾರ್ಯಾರು ಎಲ್ಲಿ ಇದ್ದಾರೆ? ಹೆಚ್ಚು ವಿವರಣೆ ಬೇಕಿಲ್ಲ ಎಂದು ಶ್ರೀಮಠದ ಭಕ್ತರೊಬ್ಬರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಈ ಹಿಂದಿನ ಕಾರ್ಯಕ್ರಮಗಳಲ್ಲಿ ಪೂಜ್ಯರಿಗೆ ವೇದಿಕೆಯ ಮಧ್ಯಭಾಗದಲ್ಲಿ ಅಂದರೇ ಅತೀ ಗಣ್ಯರು / ಗಣ್ಯರ ಪಕ್ಕದ ಆಸನವನ್ನು ಮೀಸಲಿರಸಲಾಗುತ್ತಿತ್ತು, ಆದರೆ ಈ ಭಾರಿ ವೇದಿಕೆಯ ಅಂಚಿನಲ್ಲಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಿಗೆ ಆಸನ ಮೀಸಲಿರಿಸಿರುವುದು ಎಷ್ಟು ಸಮಂಜಸಕರ? ಎಂಬುದು ಭಕ್ತಾಧಿಗಳ ಪ್ರಶ್ನೆಯಾಗಿದೆ.