ಕುಣಿಗಲ್: ಯಾವ ಸರ್ಕಾರಿ ಅಧಿಕಾರಿಗಳೊಂದಿಗೂ ನಾನು ಎಣ್ಣೆ ಪಾರ್ಟಿಮಾಡಿಲ್ಲ ಬದಲಾಗಿ ಮಗಳು ರಾಜ್ಯಕ್ಕೆ ಐದನೇ ರ್ಯಾಂಕ್ ಬಂದ ಖುಷಿಯಲ್ಲಿ ಸಾಮಾನ್ಯವಾಗಿ ಊಟ ಮಾಡಿದ್ದೇನೆ ಅದನ್ನು ವಿರೋಧ ಪಕ್ಷದವರು ಎಣ್ಣೆ ಪಾರ್ಟಿ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಾ ಊಟ ಮಾಡಿರುವ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ ಎಂದು ಕುಣಿಗಲ್ ತಾಲೂಕು ಕಾಂಗ್ರೆಸ್ ಮುಖಂಡ ಬೇಗೂರು ಮೂರ್ತಿ ಸ್ಪಷ್ಟನೆ ನೀಡಿದರು.
https://www.facebook.com/share/v/15hRbXEKBNx/?mibextid=wwXIfr
ಅವರು ಕುಣಿಗಲ್ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೇಗೂರು ಡೈರಿಗೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ಅಧಿಕಾರಿಗಳು ಕರೆಸಿದ್ದು ಅದರ ಸಂಬಂಧ ಎಲ್ಲಾ ವಿಚಾರಣೆ ಹಾಗೂ ಕಾರ್ಯಕಲಾಪಗಳು ಮುಗಿದಿದ್ದು ಅಲ್ಲಿಂದ ವಾಪಸ್ ಬರುವ ವೇಳೆ ಮಧ್ಯಾಹ್ನದ ಊಟದ ಸಮಯವಾಗಿತ್ತು. ಅಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ನನ್ನ ಮಗಳಾದ ಚೇತನ ಮೂರ್ತಿ 99% ಅಂಕಗಳನ್ನು ಗಳಿಸಿದ್ದು ರಾಜ್ಯಕ್ಕೆ ಐದನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಪರೀಕ್ಷೆಯಲ್ಲಿ ಮಗಳು ಸಾಧನೆ ಮಾಡಿದ ಖುಷಿಯಲ್ಲಿ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಊಟದ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ವೇಳೆ ಅಧಿಕಾರಿಗಳನ್ನು ಸಹ ಊಟಕ್ಕೆ ಆಹ್ವಾನಿಸಿದ್ದು ಅಧಿಕಾರಿಗಳು ಕೇವಲ ಮೊಸರನ್ನ ಸೇವಿಸಿ ಅಲ್ಲಿಂದ ತೆರಳಿರುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಕೆಲವು ಬಿಜೆಪಿ ಮುಖಂಡರು ಹೋಟೆಲ್ ನ ಸರ್ವರ್ ಗೆ ಹಣ ನೀಡಿ ಖಾಲಿ ಮಧ್ಯದ ಬಾಟಲಿಗಳಿರುವ ವಿಡಿಯೋ ಮಾಡಿಸಿ ಅಧಿಕಾರಿಗಳೊಂದಿಗೆ ಮೂರ್ತಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ವಿಡಿಯೋ ವೈರಲ್ ಮಾಡಿರುತ್ತಾರೆ.

ಇದು ಸತ್ಯಕ್ಕೆ ದೂರವಾದದ್ದು ಕುಣಿಗಲ್ ತಾಲೂಕಿಗೆ ಗೊತ್ತು ನನ್ನ ವ್ಯಕ್ತಿತ್ವ ಎಂತದ್ದು ಎಂದು ನಾನು ಎಂದಿಗೂ ಸಹ ಮಧ್ಯ ಸೇವಿಸುವುದಿಲ್ಲ ಹಾಗೂ ಇತರರಿಗೂ ಮಧ್ಯವನ್ನು ಕುಡಿಸುವುದಿಲ್ಲ. ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ನನ್ನ ಮೇಲೆ ಈ ಆರೋಪಹರಿಸುತ್ತಿದ್ದು ಜೆಡಿಎಸ್ ಪಕ್ಷದ ಜಗದೀಶ್ ಹಾಗೂ ಬಿಜೆಪಿಯ ದಿಲೀಪ್ ಎಂಬುವರು ಅತ್ಯಂತ ತುಚ್ಚವಾಗಿ ನಮಗೆ ಮಾತನಾಡಿದ್ದು ಅವರಿಗೆ ವೈಯಕ್ತಿಕ ನಿಂದನೆ ಮಾಡಿದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.