ಯುಗಾದಿ ಹಬ್ಬದ ಮರುದಿನವೇ ನೇಣಿಗೆ ಶರಣಾದ ಸಮಾಜಕಲ್ಯಾಣ ಇಲಾಖೇ ಅಧಿಕಾರಿ; ಜಂಟಿ ನಿರ್ದೇಶಕರ ಕಿರುಕುಳವೇ ಆತ್ಮಹತೆ ಕಾರಣವಂತೆ?

ತುಮಕೂರು – ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ  ಮಲ್ಲಿಕಾರ್ಜುನಯ್ಯ ರವರು ಕಚೇರಿಯ ಸಭಾಂಗಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

 

 

 

 

 

ಯುಗಾದಿ ಹಬ್ಬ ಕಳೆದು  ಹೊಸತಡಕಿನ  ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಲ್ಲಿಕಾರ್ಜುನಯ್ಯ ರವರ ಆತ್ಮಹತ್ಯೆಯ ವಿಷಯ ಕುಟುಂಬಕ್ಕೆ ಬರ ಸಿಡಿಲಿನಂತೆ ಎರಗಿದ್ದು ಇಡೀ ಕುಟುಂಬ ಹಾಗೂ  ಮಲ್ಲಿಕಾರ್ಜುನಯ್ಯ ರವರ  ಆತ್ಮೀಯ ವಲಯದಲ್ಲಿ  ತೀವ್ರ ಆತಂಕ ತಂದೊಡ್ಡಿದೆ.

 

 

 

 

 

 

 

ಇನ್ನು ಪಾವಗಡ ಪಟ್ಟಣದ ಅಪ್ ಬಂಡೆ ಪ್ರದೇಶದಲ್ಲಿರುವ  ಕಚೇರಿಯ ಸಭಾಂಗಣದಲ್ಲಿ ಫ್ಯಾನಿಗೆ ನೇಣು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಲ್ಲಿಕಾರ್ಜುನಯ್ಯ ರವರು ಸಾವಿಗೂ ಮುನ್ನ ವಿಡಿಯೋ ಸಂದೇಶವನ್ನು  ಆತ್ಮೀಯರು ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸಿರುವುದು ಪ್ರಕರಣಕ್ಕೆ ಹೊಸ ತಿರುವು ತಂದುಕೊಟ್ಟಿದೆ.

 

 

 

 

 

 

 

 

 

ಇನ್ನು ವಿಡಿಯೋದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ ರವರು ನೀಡುತ್ತಿದ್ದ ಕಿರುಕುಳವೆ ತಮ್ಮ ಸಾವಿಗೆ ಕಾರಣ ಎಂದು ವಿಡಿಯೋದಲ್ಲಿ ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಕಳೆದ ಮೂರು ವರ್ಷಗಳಿಂದ ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಬೇಕಿತ್ತು ಇನ್ನು ನಿವೃತ್ತಿ ಅಂಚಿನಲ್ಲಿದ್ದ ಮಲ್ಲಿಕಾರ್ಜುನ ರವರ ಆತ್ಮಹತ್ಯೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 

 

 

 

 

 

 

ಮಲ್ಲಿಕಾರ್ಜುನಯ್ಯ ರವರು ಮೂಲತಹ ಪಾವಗಡ ತಾಲೂಕಿನ ಗುಂಡಾರ್ಲಾಹಳ್ಳಿ ಗ್ರಾಮದವರಾಗಿದ್ದು ಜನಸ್ನೇಹಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಸಾಕಷ್ಟು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು.

 

 

 

 

 

 

ಇನ್ನು ವಿಡಿಯೋ ಸಂದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಲ್ಲಿಕಾರ್ಜುನ ರವರು.

 

 

 

 

 

 

 

 

 

ನಮ್ಮ ತಾಯಿ ಹೆಂಡತಿ ಮಕ್ಕಳು ನನ್ನನ್ನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಅವರಿಗೆ ನಾನು ಇನ್ನೂ ಸಹಾಯ ಮಾಡಬೇಕಿತ್ತು, ಆದರೆ ಅದು ಆಗುತ್ತಿಲ್ಲ. ಜಂಟಿ ನಿರ್ದೇಶಕ ಕೃಷ್ಣಪ್ಪ ರವರು ನನಗೆ ತೊಂದರೆ ಕೊಟ್ಟ ಕಾರಣದಿಂದಲೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ.

 

 

 

 

 

 

 

 

 

ಅವನು ತುಂಬಾ ತರ್ಲೆ ಇರುವುದರಿಂದ ನಮ್ಮ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ ಅವನಿಗೆ ದೇವರು ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತದೆ ಎಂದು ವಿಡಿಯೋದಲ್ಲಿ ತಮ್ಮ ಕೊನೆ ಮಾತುಗಳನ್ನ ಹಂಚಿಕೊಂಡು  ವಿಡಿಯೋವನ್ನು ಸಹೋದ್ಯೋಗಿಗಳಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

 

 

 

 

 

 

 

 

ಅದೇನೇ ಇರಲಿ ಒಬ್ಬ ಜನಸ್ನೇಹಿ ಅಧಿಕಾರಿ  ನಿವೃತ್ತಿ ಹೊಂದಿ ನೆಮ್ಮದಿ ಜೀವನ ಸಾಗಿಸಬೇಕೆಂದ ಅಧಿಕಾರಿ ಸಾವಿನ ಮನೆಯ ಕದ ತಟ್ಟಿರುವುದು ನಿಜಕ್ಕೂ ಆತಂಕ ತಂದೊಡ್ಡಿದ್ದು. ಘಟನೆಗೆ ಜಂಟಿ ನಿರ್ದೇಶಕರ ಕಿರುಕುಳವೇ ಕಾರಣ ಎಂದು  ಆರೋಪಿಸಿ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು ಕೂಡಲೇ ಪೊಲೀಸರು ತನಿಖೆ ಮಾಡಿ ಘಟನೆಗೆ ಕಾರಣ ಬಹಿರಂಗ ಪಡಿಸಬೇಕಾಗಿದೆ.

 

 

 

 

 

 

2e538a93-f27f-4182-9bdd-08373ae7b2db

ಪಾವಗಡ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಅಮೃತರ ಶರೀರವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!