ತುಮಕೂರು ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಕಂದಾಯ ಇಲಾಖೆ ನಿದ್ರೆಗೆ ಜಾರಿದೆ,ಸರ್ಕಾರಿ ಖರಾಬು,ಗೋಮಾಳ ಜಮೀನುಗಳನ್ನು ಅಕ್ರಮ ಮಣ್ಣು ದಂಧೆಕೋರರು ಆಪೋಷನ ಮಾಡುತ್ತಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋರಾ ಹೋಬಳಿ ಬೊಮ್ಮನಹಳ್ಳಿ,ಬಿಟ್ಟಿನಕುರಿಕೆ ಭಾಗದಲ್ಲಿ ಅಕ್ರಮ ಮಣ್ಣು ದಂದೆ ಎಗ್ಗಿಲ್ಲದೆ ನಡೆಯುತ್ತಿದ್ದು ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಙಾನ ಇಲಾಖೆ ಕ್ರಮಕ್ಕೆ ಮುಂದಾಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬೊಮ್ಮನಹಳ್ಳಿ ಗೋಮಾಳ,ಅರಣ್ಯ ಭೂಮಿಗಳಲ್ಲಿ ಮಣ್ಣು ದಂದೆ ಕೋರರು ಭೂತಾಯಿಯ ಒಡಲಿಗೆ ಕನ್ನ ಹಾಕಿ ಲಕ್ಷಾಂತರ ರೂ ಬೆಲೆ ಬಾಳುವ ಮಣ್ಣು ಲೂಟಿ ಮಾಡಿದ್ದಾರೆ,ಅದೇ ರೀತಿ ಬಿಟ್ಟಿನ ಕುರಿಕೆ ಭಾಗದಲ್ಲಿಯೂ ಸಹ ಮಣ್ಣು ದಂದೆ ಅವ್ಯಾಹತವಾಗಿದ್ದು ಗ್ರಾಮಲೆಕ್ಕಿಗರಾಗಲೀ ,ಗಣಿ ಮತ್ತು ಭೂ ವಿಜ್ಙಾನ ಇಲಾಖೆಯಾಗಲೀ ಈ ಬಗ್ಗೆ ಚಕಾರ ಎತ್ತಿ ದಂದೆಗೆ ಕಡಿವಾಣ ಹಾಕಲು ಮುಂದಾಗಿಲ್ಲ ಎಂದು ಪರಿಸರವಾದಿಗಳು ಸ್ತಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೂ ಈ ಅಕ್ರಮ ಮಣ್ಣು ದಂದೆ ನಡೆಯುತ್ತದೆ ಕೆಲ ಭಾಗಗಗಳಲ್ಲಿ ಗ್ರಾಮಲೆಕ್ಕಿಗರೇ ಮಣ್ಣು ದಂದೆಕೋರರ ಜೊತೆ ಕೈಜೋಡಿಸಿ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸ್ತಳೀಯರು ಆರೋಪಿಸಿದ್ದಾರೆ
ತಾಲ್ಲೂಕು ಆಡಳಿತ ಮೌನ…..
ಕೋರಾ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ದಂದೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ತಾಲ್ಲೂಕು ಆಡಳಿತ ದಂದೆ ಕೋರರಿಗೆ ಚುರುಕುಮುಟ್ಟಿಸುವ ಕೆಲಸ ಮಾಡುತ್ತಿಲ್ಲ,ಮಣ್ಣು ದಂದೆಕೋರರು
ರಾಜಸ್ವ ನಿರೀಕ್ಷಕರು ಹಾಗೂ ಕೆಲ ಗ್ರಾಮಲಕ್ಕಿಗರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ದಂದೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆರೋಪಗಳೂ ಕೇಳಿಬರುತ್ತಿವೆ,ಬೇಲಿಯೇ ಎದ್ದು ಹೊಲ ಮೇಯುವ ಸ್ತಿತಿ ನಿರ್ಮಾಣವಾಗಿದ್ದು,ಸರ್ಕಾರಿ ಗೋಮಾಳ,ಖರಾಬು ಜಮೀನುಗಳ ಮಣ್ಣು ಆಪೋಷನವಾಗುತ್ತಿದ್ದರೂ ಸಹ ತಾಲ್ಲೂಕು ಆಡಳಿತ ಮೌನಕ್ಕೆ ಜಾರಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.