ತುಮಕೂರು ತಾಲ್ಲೂಕಿನ ಕೆರೆಗಳಲ್ಲಿ ಅಕ್ರಮ ಮಣ್ಣು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು,ದಂದೆಕೋರರಿಗೆ ಕಡಿವಾಣ ಹಾಕುವವರೇ ದಿಕ್ಕಿಲ್ಲದಂತಾಗಿದೆ,ಸಣ್ಣನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೇ ದಂದೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಗೃಹಸಚಿವರು ಪ್ರತಿನಿಧಿಸುವ ಕೋರ ಹೋಬಳಿಯಲ್ಲಿ ಮಣ್ಣು ದಂದೆ ಎಗ್ಗಿಲ್ಲದೆ ನಡೆಯುತ್ತಿದೆ,ಕೆರೆಗಳ ಮಣ್ಣು ದಂದೆಕೋರರು ಆಪೋಷನ ಮಾಡುತ್ತಿದ್ದಾರೆ,ಕಂದಾಯ ಅಧಿಕಾರಿಗಳು,ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ಮಣ್ಣು ದಂದೆಗೆ ಕಡಿವಾಣ ಹಾಕದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋರ ಹೋಬಳಿ ಬೊಮ್ಮನಹಳ್ಳಿ,ಬೆಳಧರ, ಹಿರೇತೊಟ್ಲುಕೆರೆ,ದೇವಲಾಪುರ,ಗಂಗನಾಲ ಇನ್ನು ಹಲವು ಕೆರೆಗಳಲ್ಲಿ ಹಲವಾರು ದಿನಗಳಿಂದ ಮಣ್ಣು ದಂದೆ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ,ರೈತರ ಜಮೀನಿಗೆ ಮಣ್ಣು ಸಾಗಿಸುತ್ತಿದ್ದೇವೆ ಎಂದು ಹೇಳಿ ಇಟ್ಟಿಗೆ ಕಾರ್ಖಾನೆ,ಖಾಸಗೀ ಲೇ ಔಟ್ ಗಳಿಗೆ ಮಣ್ಣು ಸಾಗಿಸಲಾಗುತ್ತಿದೆ,ಮಣ್ಣು ದಂದೆ ಕೋರರಿಗೆ ಕಡಿವಾಣ ಹಾಕಲು ಪರಿಸರ ಪ್ರೇಮಿಗಳು ಹಾಗೂ ಪ್ರಜ್ಙಾವಂತರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಹಿತಿ ನೀಡಿದರೆ,ಅಧಿಕಾರಿಗಳೇ ಮಣ್ಣು ದಂದೆಕೋರರಿಗೆ ಮಾಹಿತಿ ರವಾನಿಸಿ ಅಕ್ರಮಕ್ಕೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.
ಬೆಳಧರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಖರಾಬು ಜಮೀನುಗಳಲ್ಲಿ ರಾಜಾರೋಷವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ,ಸರ್ಕಾರಿ ಹಳ್ಳ ಕೊಳ್ಳ ಖರಾಬುಗಳನ್ನು ಮಣ್ಣು ಮಾಫಿಯಾ ಆಪೋಷನ ಮಾಡುತ್ತಿದ್ದು ತಾಲ್ಲೂಕು ಆಡಳಿತ ಚಿರನಿದ್ರೆಗೆ ಜಾರಿದೆ ಎಂದು ಪ್ರಜ್ಙಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಂಧೆಕೋರರೊಂದಿಗೆ ಶಾಮೀಲಾಗಿದೆಯಾ ಸಣ್ಣ ನೀರಾವರಿ ಇಲಾಖೆ …..
ಕೆರೆಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಗೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದು ತಮಗೆ ಸಂಭಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ,ಮಣ್ಣು ಮಾಫಿಯಾದ ಬಗ್ಗೆ ಮಾಹಿತಿ ಕೊಟ್ಟರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟವರ ವಿವರಗಳನ್ನು ಮಾಫಿಯಾದವರ ಜೊತೆ ಹಂಚಿಕೊಳ್ಳುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ, ಅಕ್ರಮ ಮಣ್ಣು ಧಂದೆ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕ್ರಮ ವಹಿಸದಿರುವುದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ. ಒಂದೆಡೆ ಕಂದಾಯ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದರೆ ,ಸ್ತಳೀಯ ಪೊಲೀಸ್ ಇಲಾಖೆ ನಿದ್ರೆಗೆ ಜಾರಿದೆ ಎಂಬುದು ಪರಿಸರ ಪ್ರೇಮಿಗಳು ಆಪಾದಿಸಿದ್ದಾರೆ