ಸಮಾಜ ಸೇವಕರು ಹಾಗೂ ಗ್ರಾಮಾಂತರ ರಾಜಕೀಯ ಮುಖಂಡರಾದ ಪಾಲನೇತ್ರಯ್ಯ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆಯೇ?

ತುಮಕೂರು : ಗ್ರಾಮೀಣ ಮಹಿಳೆಯರಿಗೆ ಮನೆ ಬಾಗಿಲಿನಲ್ಲಿ ಉದ್ಯೋಗ ಒದಗಿಸಿ, ಅವರ ಅರ್ಥಿಕ ಸ್ವಾವಲಂಬನೆಗೆ ದಾರಿಯಾಗಿರುವ ಪ್ರಿಯಾ ಗಾರ್ಮೆಂಟ್ಸ್ ಬಗ್ಗೆ ಕೆಲವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು,ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರಿಯಾ ಗಾರ್ಮೇಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗೂಳೂರು ಹೋಬಳಿ ಕಾಂಗ್ರೆಸ್ ಮುಖಂಡ ಪಾಲನೇತ್ರಯ್ಯ ತಿಳಿಸಿದ್ದಾರೆ.

 

 

ತಮ್ಮ ಗಾರ್ಮೇಂಟ್ಸ್ ಬಗ್ಗೆ ಇತ್ತೀಚಗೆ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಸ್ಪಷ್ಟನೇ ನೀಡಿದ ಅವರು, ನಾನು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ. ಬಡ ಕುಟುಂಬದಲ್ಲಿಯೇ ಹುಟ್ಟಿ, ಮಠದ ಓದಿ, ಶ್ರೀಗಳ ಆಶೀರ್ವಾದಿಂದ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗಕ್ಕಾಗಿ ಬೆಂಗಳೂರಿನAತಹ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ತಲಾ 200 ಜನರಂತೆ ಮೂರು ಪಾಳಿಯಲ್ಲಿ ಕೆಲಸ ಮಾಡಬಹುದಾದ ಪ್ರಿಯಾ ಗಾರ್ಮೆಂಟ್ಸ್ ತೆರೆದು, ಕಳೆದ ಒಂದುವರೆ ವರ್ಷದಿಂದ ಕಾರ್ಯನಿರ್ವಹಿಸುತಿದ್ದೇವೆ ಎಂದರು.

 

 

 

ವ್ಯಾಪಾರ, ವ್ಯವಹಾರ ಎಂದಾಗ ಲಾಭ, ನಷ್ಟ ಸಾಮಾನ್ಯ.ಇದನ್ನೇ ಕೆಲವರು ನೆಪ ಮಾಡಿಕೊಂಡು ನಮ್ಮಲ್ಲಿ ಕೆಲಸ ಮಾಡುತಿದ್ದು, ಕೆಲಸ ತೊರೆದ ಮಾಜಿ ಕಾರ್ಮಿಕರನ್ನೇ ಉಪಯೋಗಿಸಿಕೊಂಡು ವೇತನ ನೀಡಿಲ್ಲ.ಪಿ.ಎಫ್ ಕಟ್ಟಿಲ್ಲ ಇನ್ನಿತರ ಆರೋಪಗಳನ್ನು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಸುವ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.ನನ್ನ ವಿರುದ್ದ ಷಡ್ಯಂತ್ರ ರೂಪಿಸಿರುವ ವ್ಯಕ್ತಿಗಳಿಗೆ ನಾನು ಹೇಳ ಬಯಸುವುದು ಇಷ್ಟೇ. ನಿಜವಾಗಿಯೂ ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಕಾಳಜಿ ಇದ್ದರೆ ನೀವು ಒಂದು ಪ್ಯಾಕ್ಟರಿ ತೆರೆದು, ನಾಲ್ಕಾರು ಜನರಿಗೆ ಕೆಲಸ ನೀಡಿ, ಅದನ್ನು ಬಿಟ್ಟು, ಮನೆ ಬಾಗಿಲಿನಲ್ಲಿಯೇ ಕೆಲಸ ಮಾಡುತ್ತಾ ಬದುಕು ಕಂಡುಕೊಳ್ಳುತ್ತಿರುವ ಮಹಿಳೆಯರನ್ನು ದಾರಿ ತಪಿಸುವ ಕೆಲಸ ಮಾಡಬೇಡಿ ಎಂದು ಪಾಲನೇತ್ರಯ್ಯ ತಿಳಿಸಿದರು.
ಪ್ರಿಯಾ ಗ್ರಾರ್ಮೆಂಟ್ಸ್ನ ಮಾಲೀಕರಾದ ವಿಜಯಕುಮಾರಿ ಮಾತನಾಡಿ,ತುಮಕೂರು ಗ್ರಾಮಾಂತರ ಭಾಗದ ಮಹಿಳೆಯರ ಉದ್ಯೋಗ ಭವಣೆ ನೀಗಿಸುವ ಉದ್ದೇಶದಿಂದ 24 ಕೋಟಿ ಹಣ ಸಾಲ ಮಾಡಿ ಗಾರ್ಮೆಂಟ್ಸ್ ಆರಂಭಿಸಿದ್ದೇವೆ,ಈ ಉದ್ಯಮದ ಬಗ್ಗೆ ನಮಗೆ ಅಷ್ಟೊಂದು ಮಾಹಿತಿ ಇಲ್ಲದ ಕಾರಣ ಇಲ್ಲಿ ಕೆಲಸಕ್ಕೆ ಸೇರಿದ ಹಲವರು ನಮಗೆ ಲಕ್ಷಾಂತರ ರೂ ಮೋಸ ಮಾಡಿದ್ದಾರೆ.ನಾವು ಎದೆಗುಂದದೆ ನಮ್ಮನ್ನು ನಂಬಿ ಬಂದವರಿಗಾಗಿ ಗಾರ್ಮೆಂಟ್ಸ್ ನಡೆಸುತ್ತಿದ್ದೇವೆ,ಎಲ್ಲರಿಗೂ ಬಸ್ ಸೌಲಭ್ಯ ಕಲ್ಪಿಸಿದ್ದೇವೆ,ಮದ್ಯಾಹ್ನದ ವೇಳೆಯಲ್ಲಿ ಎಲ್ಲರಿಗೂ ಊಟದ ವ್ಯವಸ್ತೆ ಕಲ್ಪಿಸಿದ್ದೇವೆ ಯಾವುದಕ್ಕೂ ಹಣ ಪಡೆಯುತ್ತಿಲ್ಲ,ರಾಜಕೀಯ ಹಿನ್ನಲೆಯಿಂದ ಬಂದಿರುವುದು ವಿರೋಧಿಗಳು ಹೆಜ್ಜೆ ಹೆಜ್ಜೆಗೂ ಕಿರುಕುಳ ನೀಡುತ್ತಿದ್ದಾರೆ.ಆದರೂ ಎದೆಗುಂದಿಲ್ಲ,ನಮ್ಮ ಗಾರ್ಮೆಂಟ್ಸ್ ಬಳಿ ಪ್ರತಿಭಟನೆ ಮಾಡಿರುವ ಮಹಿಳೆಯರೂ ಕೂಡ ಇಎಸ್‌ಐ,ಪಿಎಪ್ ಕಟ್ಟಿದರೆ ಕಟ್ಟಿ ಇಲ್ಲವಾದರೆ ಬೇಡ ಸಂಭಳವೂ ಬೇಡ ಎಂದು ಬರೆದುಕೊಟ್ಟು ಹೋಗಿ,ಈಗ ಏಕಾಏಕಿ ಗಲಾಟೆ ಮಾಡುತ್ತಿದ್ದಾರೆ,ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ನಮ್ಮ ವಿರುದ್ದ ಷಡ್ಯಂತ್ರ ರೂಪಿಸುತ್ತಿದ್ದಾರೆ,ಇಲ್ಲಿಗೆ ಪ್ರತಿಭಟನೆಗೆ ಬಂದಿದ್ದ ಎಲ್ಲಾ ಹೆಣ್ಣು ಮಕ್ಕಳು ಗ್ರಾಮಾಂತರ ಶಾಸಕರ ಬಳಿ ಹೋಗಿದ್ದಾರೆ.ಅವರ ಅಹವಾಲು ಆಲಿಸಿ ನಮಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಕೇಳಬಹುದಿತ್ತು,ಆ ಹೆಣ್ಣು ಮಕ್ಕಳಂತೆ ನಾನು ಹೆಣ್ಣು ಮಗಳು ಉದ್ಯಮ ನಡೆಸುತ್ತಿದ್ದೇನೆ,ನನ್ನ ಸಮಸ್ಯೆ ಕೇಳಬಹುದಿತ್ತು ನಾನೇನು ಬೇರೆ ದೇಶದಲ್ಲಿ ವಾಸವಾಗಿದ್ದೀನಾ ಎಂದು ಖಾರವಾಗಿ ಪ್ರಶ್ನಿಸಿದರು.

 

 


ಗ್ರಾಮಾಂತರ ಪ್ರದೇಶದ ಬಡಮಕ್ಕಳಿಗೆ ಪ್ರಿಯದರ್ಶಿನಿ ಚಾರಿಟಬಲ್ ಟ್ರಸ್ಟ್ ಮೂಲಕ ಸಮವಸ್ತ್ರ ,ಬ್ಯಾಗ್,ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ.ಅದಕ್ಕೂ ಬಿಜೆಪಿಯವರು ಅಡ್ಡಿ ಮಾಡುತ್ತಿದ್ದಾರೆ,ಈಗ ಬಡ ಹೆಣ್ಣು ಮಕ್ಕಳು ಕೆಲಸ ಮಾಡುವ ಗಾರ್ಮೆಂಟ್ಸ್ ಮೇಲೂ ಕಣ್ಣು ಹಾಕಿ ಕಿರುಕುಳ ನೀಡುತ್ತಿದ್ದಾರೆ,ನಾವು ಯಾರಿಗೂ ಮೋಸ ಮಾಡಿಲ್ಲ,ಮೋಸ ಮಾಡುವ ಅವಶ್ಯಕತೆಯೂ ಇಲ್ಲ ಇವೆಲ್ಲಾ ಷಡ್ಯಂತರಗಳು ದುರುದ್ದೇಶಪೂರಿತವಾದವು ಎಂದು ಆಪಾಧಿಸಿದರು.

 

 

 

 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾ ಗ್ರಾರ್ಮೆಂಟ್ಸ್ನ ಉದ್ಯೋಗಿಗಳು, ಮಾಲೀಕರು ನಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಉಚಿತವಾಗಿ ನಮ್ಮ ಮನೆ ಬಾಗಿಲಿಗೆ ವಾಹನ ಕಳುಹಿಸಿ ಕರೆಯಿಸಿಕೊಳ್ಳುತ್ತಾರೆ, ಮಧ್ಯಾಹ್ನ ಊಟ ನೀಡುತ್ತಾರೆ.ಮಾಜಿ ಉದ್ಯೋಗಿಗಳು ಕಮಿಷನ್ ಆಸೆಗೆ ಇಲ್ಲಿ ಕೆಲಸ ಮಾಡುತ್ತಿರುವ ನುರಿತ ಟೈಲರ್‌ಗಳನ್ನು ಇನ್ನೊಂದು ಗ್ರಾರ್ಮೆಂಟ್ಸ್ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದರು.ಆದರೆ ಹೆಚ್ಚಿನವರು ಹೋಗದ ಕಾರಣ,ಪ್ಯಾಕ್ಟರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!