ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ದೀಕ್ಷಾ ಮಹೋತ್ಸವ: ಕೆ.ಜಿ. ದೇವಪಟ್ಟಣದ ಶ್ರೀ ಬಾಲಮಂಜುನಾಥ ಸ್ವಾಮಿಗಳಿಗೆ’ಶ್ರೀ ವಿದ್ಯಾನಂದ ಸ್ವಾಮಿಗಳು ಎಂದು ಶೃಂಗೇರಿ ಜಗದ್ಗುರುಗಳಿಂದ’ ನಾಮಾಂಕಿತ

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ವಸಂತ ಪಂಚಮಿಯ ಪೂರ್ವಭಾವಿಯಾಗಿ ನಡೆದ ವಿಶೇಷ ಧಾರ್ಮಿಕ ಸಮಾರಂಭದಲ್ಲಿ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದ ಶ್ರೀ ಬಾಲಮಂಜುನಾಥ ಸ್ವಾಮೀಜಿಯವರು ಶೃಂಗೇರಿ ಜಗದ್ಗುರುಗಳಿಂದ ದೀಕ್ಷೆಯನ್ನು ಸ್ವೀಕರಿಸಿದರು.

 

 

 

ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಳವರು ಶ್ರೀ ಬಾಲಮಂಜುನಾಥ ಸ್ವಾಮೀಜಿಯವರಿಗೆ ದೀಕ್ಷೆಯನ್ನು ಅನುಗ್ರಹಿಸಿ, ಅವರಿಗೆ “ಶ್ರೀ ವಿದ್ಯಾನಂದ ಸ್ವಾಮಿಗಳು” ಎಂದು ನೂತನವಾಗಿ ನಾಮಂಕಿತ ಅನುಗ್ರಹಿಸಿದರು.

 

 

ಸ್ಫಟಿಕ ಮಾಲೆ ಪ್ರದಾನ ಮತ್ತು ಅನುಗ್ರಹ ಸಂದೇಶ:
ಈ ಪುಣ್ಯ ಸಂದರ್ಭದಲ್ಲಿ ವಿಶೇಷ ಘಳಿಗೆಯೊಂದು ನೆರವೇರಿತು. ಶ್ರೀ ಜಗದ್ಗುರು ವಿಧುಶೇಖರ ಭಾರತಿ ಸನ್ನಿಧಾನಂಗಳವರು ಶ್ರೀಚಂದ್ರಮೌಳೇಶ್ವರ ಶಾರದ ಅಮ್ಮನವರ ಪ್ರಸಾದವಾಗಿ ತಾವು ಅನುಷ್ಠಾನ ಮಾಡಿದ ಗೌರಿಶಂಕರ ರುದ್ರಾಕ್ಷಿ ಮಾಲೆ ತಮ್ಮ ಗುರುಗಳ ಕೊರಳಲಿ ಇದ್ದ ‘ಸ್ಫಟಿಕ ಮಾಲೆಯನ್ನ ಪ್ರಸಾದ ರೂಪದಲ್ಲಿ ಶ್ರೀ ವಿದ್ಯಾನಂದ ಸ್ವಾಮಿಗಳವರಿಗೆ ನೀಡಿ ಅನುಗ್ರಹಿಸಿ ಶ್ರೀ ಗಳಿಗೆ ಧರ್ಮ ಮಾರ್ಗ, ತಪಸ್ಸು ಮತ್ತು ಲೋಕ ಕಲ್ಯಾಣದ ಕುರಿತು ಜಗದ್ಗುರುಗಳು ವಿಶೇಷ ಅನುಗ್ರಹಿಸಿದರು.

 

 

ಶೃಂಗೇರಿಯ ಪವಿತ್ರ ಸನ್ನಿಧಿಯಲ್ಲಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ದೀಕ್ಷಾ ಕಾರ್ಯಕ್ರಮ ಮತ್ತು ನಾಮಕರಣ ಮಹೋತ್ಸವವು ಕೆ.ಜಿ. ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕ್ಷಣವಾಗಿದೆ ಎಂದು ಭಕ್ತವೃಂದ ಹರ್ಷ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!