ಬಳ್ಳಾರಿಯಲ್ಲಿ ಅಮಾನತ್ತು ಆದ ಎಸ್.ಪಿ. ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಯತ್ನ !?

ಬಳ್ಳಾರಿ ಗಲಾಟೆ & ಫೈರಿಂಗ್ ಪ್ರಕರಣದಲ್ಲಿ  ಸಸ್ಪೆಂಡ್ ಆಗಿದ್ದ SP ಪವನ್ ನಜ್ಜುರು ನಿದ್ರೆ ಮಾತ್ರೆ ನುಂಗಿ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಳ್ಳಾರಿಯಲ್ಲಿ ಬ್ಯಾನರ್  ವಿಚಾರವಾಗಿ ಗುರುವಾರ ನಡೆದ ಗಲಾಟೆ ಪ್ರಕರಣದಲ್ಲಿ ಫೈರಿಂಗ್ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು ಈ ಸಂಬಂಧ ಎಸ್.ಪಿ. ಪವನ್ ನಜ್ಜುರು ಅವರನ್ನು ಕರ್ತವ್ಯ ಲೋಪ ಆರೋಪದ ಅಡಿ ಸಸ್ಪೆಂಡ್ ಮಾಡಲಾಗಿತ್ತು ಇದೀಗ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅಧಿಕಾರವಹಿಸಿಕೊಂಡ ದಿನವೇ ಗಲಭೆ ನಡೆದಿದ್ದು ಅವರ ಮನಸ್ಸಿಗೆ ಬಹಳ ನೋವುಂಟು ಮಾಡಿತ್ತು ಎಂದು ಹೇಳಲಾಗಿದೆ.

 

 

 

 


ಈ ಸಂಬಂಧ ಶಿರಾ ತಾಲ್ಲೂಕಿನ ಬರಗೂರು ಸಮೀಪದಲ್ಲಿರುವ ಹಂದಿಕುಂಟೆ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಪವನ್ ಚಿಕಿತ್ಸೆ ಪಡೆಯುತ್ತಿದ್ತಿದ್ಳು, ಹ್ದೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಬಹುದು ಎಂಬ ಮಾಹಿತಿ ದೊರೆತಿರುತ್ತದೆ.

 

ಸಧ್ಯ ಈ ಫಾರ್ಮ ಹೌಸ್ ಬಳಿ ಯಾರನ್ನು ಬಿಡಲಾಗುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು ಕಳೆದ ರಾತ್ರಿಯೇ ಇವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!