ತಾ.11-12-2025ರ ಗುರುವಾರದಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀಮಾತೆ ಶಾರದಾದೇವಿಯವರ 173ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಮುಂಜಾನೆಯಿಂದಲೇ ವೇದಪಾಠ, ಸುಪ್ರಭಾತ, ನಾಮಸಂಕೀರ್ತನೆಗಳಿಂದ ಆರಂಭವಾಗಿದ್ದು, ಮಧ್ಯಾನ್ಹ ದೇವಿಸ್ತುತಿ ಹಾಗೂ ಶ್ರೀ ಶಾರದಾದೇವಿ ನಾಮಸಂಕೀರ್ತನೆ ಮತ್ತಿತರ ಭಕ್ತಿ ಗೀತೆಗಳನ್ನು ಸಮರ್ಪಿಸಲಾಯಿತು. ಸಂಜೆ 5.30ಕ್ಕೆ ಸರಿಯಾಗಿ ದೇವಿ ನಾಮಸಂಕೀರ್ತನೆ ಹಾಗೂ ಕರುಣಾರೂಪಿಣಿ ಶ್ರೀ ಶಾರದೆ ಎಂಬ ವಿಷಯದ ಮೇಲೆ ಉಪನ್ಯಾಸ ನೆರವೇರಿತು. ಶ್ರೀ ಶಾರದಾದೇವಿಯವರ ಜೀವನ ಸಂದೇಶವನ್ನು ಅತ್ಯಂತ ಮನೋಜ್ಞಕರವಾಗಿ ಗಾನ-ಪ್ರವಚನದ ಮೂಲಕ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ನೆರವೇರಿಸಿಕೊಟ್ಟರು.

ಒಟ್ಟಿನಲ್ಲಿ ಸಂಗ ಜನನಿ ಹಾಗೂ ಶ್ರೀಮಾತೆ ಶಾರದಾದೇವಿಯವರ ಜಯಂತಿಯು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷತೆ.