ತುಮಕೂರು : ಕಳೆದ ಒಂದು ವರ್ಷದ ಹಿಂದೆ ತುಮಕೂರಿನ ಆರ್‌ಟಿಓ ಕಚೇರಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಿಗೆ ನಕಲಿ ಬೋನೋ ಫೈಡ್ ನೀಡಿ ಕೋಟ್ಯಂತರ ರೂಗಳ ಹಗರಣವಾಗಿದೆಂದು ಬಹಳ ದೊಡ್ಡ ಸುದ್ದಿಯಾಗಿದ್ದು, ಆ ಪ್ರಯುಕ್ತ ತುಮಕೂರಿನ ಲೋಕಾಯುಕ್ತ ಅಧಿಕಾರಿಗಳು ಆರ್.ಟಿ.ಓ. ಕಛೇರಿಯಲ್ಲಿ ತೀವ್ರ ತಪಾಸಣೆಯನ್ನು ನಡೆಸಿ ಅಪಾರ ಪ್ರಮಾಣದ ದಾಖಲಾತಿಗಳನ್ನು ಸಹ ಸಂಗ್ರಹಿಸಿಕೊಂಡು ಹೋಗಿದ್ದರು.

ಈ ಸಂಬಂಧ ತುಮಕೂರಿನ ಸಾರಿಗೆ ಇಲಾಖೆ (ಆರ್.ಟಿ.ಓ) ಕಚೇರಿಯ ಅಧಿಕಾರಿಗಳು ಹಾಗೂ ಕೆಲವು ಆರ್.ಟಿ.ಓ. ಮಧ್ಯವರ್ತಿಗಳ ಮನೆಯ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿ ಒಂದು ಕೊಠಡಿಯಲ್ಲಿ ಇಟ್ಟು ಬೀಗ ಹಾಕಿದ್ದರು. ಆದರೆ ಅಧಿಕಾರಿಗಳು ಯಾವುದೇ ಮುಂದಿನ ತನಿಖೆ ನಡೆಸದೆ ಸುಮ್ಮನಾಗಿದ್ದರ ಪರಿಣಾಮ ಲೋಕಾಯುಕ್ತ ಇಲಾಖೆಯು ಸಹ ಸಾರಿಗೆ ಇಲಾಖೆಯೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆಯೇ? ಎಂಬ ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದ ಹಿನ್ನಲೆಯಲ್ಲಿಯೇ……….

ತುಮಕೂರು ಜಿಲ್ಲೆಯ ಆರ್. ಟಿ. ಐ ಕಾರ್ಯಕರ್ತರಾದ ಹೆಚ್.ಜಿ.ರಮೇಶ್ ಎಂಬುವವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿ ತುಮಕೂರಿನ ಆರ್‌ಟಿಓ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು. ಆದರೆ ಈ ದೂರು ಸಲಿಕೆಯಾಗಿ ಹಲವು ತಿಂಗಳುಗಳು ಕಳೆದರು ಪ್ರಕರಣದ ತನಿಕೆ ಕೈಗೊಂಡಿರದ ಲೋಕಾಯುಕ್ತ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ಸುಮ್ಮನಾಗಿದ್ದ ಸಂದರ್ಭದಲ್ಲಿ ಪ್ರಕರಣದ ಗಂಭೀರತೆಯನ್ನು ಅರಿತ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ತುಮಕೂರಿಗೆ ದಿಢೀರ್ ಭೇಟಿ ನೀಡಿ ಆರ್‌ಟಿಓ ಕಚೇರಿಯಲ್ಲಿನ ಕಲೆವು ಮಹತ್ತರವಾದ ದಾಖಲೆಗಳನ್ನು ಪರಿಶೀಲಿಸಲಾಗಿ ಬೋನೊಫೈಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.
ಬೆಂಗಳೂರು ಹಾಗೂ ತುಮಕೂರಿನ ಲೋಕಾಯುಕ್ತ ಅಧಿಕಾರಿಗಳು ಒಟ್ಟಾರೆಯಾಗಿ 15ಕ್ಕೂ ಹೆಚ್ಚು ಸಿಬ್ಬಂದಿ ಈ ತನಿಖೆಯಲ್ಲಿ ಭಾಗಿಗಳಾಗಿದ್ದು, ಸತ್ಯಾಸತ್ಯತೆಯು ಹೊರ ಬರಬೇಕಾಗಿದೆ. ಈ ತನಿಖೆಯ ನೇತೃತ್ವವನ್ನು ಲೋಕಾಯುಕ್ತ ಅಧಿಕಾರಿಗಳಾದ ಸಂತೋಷ್, ಮಂಜುನಾಥ್, ರಾಜು ಸೇರಿದಂತೆ ಹಲವು ಅಧಿಕಾರಿಗಳು ವಹಿಸಿಕೊಂಡಿದ್ದಾರೆ.