ಹುಲಿಯೂರಮ್ಮ ದೇವಿಯ ಶಕ್ತಿ ಕುಂದಿಸಲು ನಡೆಯುತ್ತಿದೆಯಾ ಷಡ್ಯಂತ್ರ

 

ಕುಣಿಗಲ್‌: ತಾಲ್ಲೂಕಿನ ಹಳೇವೂರಮ್ಮ ದೇವಾಲಯದಲ್ಲಿ ಅಧಿಕಾರಿಗಳ ಅನುಮತಿ ಪಡೆಯದೆ ದೇವಿಯ ವಿಗ್ರಹದ ಅಚ್ಚು ಪಡೆಯಲಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

 

ತಾಲ್ಲೂಕಿನ ಪ್ರಸಿದ್ಧ ಹುಲಿಯೂರುದುರ್ಗ ಹಳೇವೂರಮ್ಮ ದೇವಾಲಯದ ವಿಗ್ರಹಕ್ಕೆ ಮುಖವಾಡ ಮಾಡಿಸುವ ನೆಪದಲ್ಲಿ ಅಧಿಕಾರಿಗಳ ಅನುಮತಿ ಪಡೆಯದೆ ಡಿಸೆಂಬರ್ 24 ರಂದು ರಾತ್ರಿ ಭಕ್ತರೊಬ್ಬರ ಅಪೇಕ್ಷೆಯಂತೆ ಅರ್ಚಕ ಮನು ಹಾಗೂ ಮತ್ತೆ ಕೆಲವರು ವಿಗ್ರಹದ ಅಚ್ಚು ಪಡೆಯಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಆಡಳಿತಾಧಿಕಾರಿ ಮಂಜೇಶ ಉಪವಿಭಾಗಾಧಿಕಾರಿಗೆ ವರದಿ ನೀಡಿದ್ದಾರೆ.

 

a6df2d36-9b1d-4568-a4b8-95121bafbaed

 

‘ದೇವಿ ವಿಗ್ರಹದ ಅಚ್ಚು ತೆಗೆದು ಪರ್ಯಾಯ ದೇವಿ ವಿಗ್ರಹ ನಿರ್ಮಿಸಿ ಬೇರಡೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಸಂಚು ನಡೆದಿದೆ’ ಎಂದು ಗ್ರಾಮಸ್ಥರು ಆರೋಪಿಸಿರುವುದು ಒಂದೆಡೆಯಾದರೆ .

 

 

 

a6df2d36-9b1d-4568-a4b8-95121bafbaed
ಮತ್ತ್ತೊಂಡೆದೆ ತಾಲೂಕಿನ ಪ್ರಮುಖ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಾಲಯವಾಗಿ ಗುರುತಿಸಿಕೊಂಡಿರುವ ಹಳೆ ಊರಮ್ಮ ದೇವಾಲಯ ಆರ್ಥಿಕವಾಗಿಯೂ ಸಾಕಷ್ಟು ಮುಂದುವರೆದರು ಆಡಳಿತಧಿಕಾರಿಗಳು ಸಾರ್ವಜನಿಕರ ದುರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವು ಕೇಳಿಬಂದಿದೆ ಇದುವರೆಗೂ ದೇವಾಲಯದ ಸಿಸಿ ಕ್ಯಾಮರಾ ಸರಿಮಾಡಿಸಿ ಎಂದು ಈಗಾಗಲೇ ಮಾನವಿ ಮಾಡಿದ್ದರು ಸಹ ಸ್ಪಂದಿಸುತ್ತಿಲ್ಲ .

 

 

ಅದಕ್ಕೆ ಪ್ರಮುಖ ಕಾರಣ ಆಡಳಿತ ಅಧಿಕಾರಿಗಳು ಸಹ ದೇವಾಲಯದ ಅಚ್ಚು ಕದಿಯಲು ಕೆಲವರಿಗೆ ಸಹಾಯ ಮಾಡಿ ಈಗ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಚ್ಚು ಪಡೆಯಲು ಬಂದ ಕೆಲಸಗಾರರು ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದನ್ನು ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ.

ಇನ್ನು ದೇವಾಲಯದಲ್ಲಿ ಸಾಕಷ್ಟು ಲೋಪದೋಷಗಳು ನಡೆಯುತ್ತಿದ್ದರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ದೇವಾಲಯದ ಗರ್ಭಗುಡಿಗೆ ಯಾರಿಗೂ ಪ್ರವೇಶ ಇಲ್ಲದಿದ್ದರೂ ಸಹ ಬೆಂಗಳೂರು ಮೂಲದ ಕೆಲ ಪೂಜಾರಿಗಳು ಹಾಗೂ ಕೆಲವರು ದೇವಾಲಯದ ಗರ್ಭಗುಡಿಯ ಪ್ರವೇಶ ಮಾಡಿ ಪೂಜೆ ಮಾಡಲು ದೇವಾಲಯದ ಕೆಲವರು ಬೆಂಬಲ ನೀಡಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದಿದ್ದಾರೆ.

ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಸಹ ಇದುವರೆಗೂ ದೇವಾಲಯದ ಆಡಳಿತಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೆ ಕರ್ತವ್ಯ ಲೋಪ ಎಸಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಗ್ರಾಮಸ್ಥರೊಬ್ಬರೂ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

 

ಅದೇನೇ ಇರಲಿ ಸಾಕಷ್ಟು ಆರ್ಥಿಕವಾಗಿ ಆದಾಯ ಹೊಂದಿರುವ ದೇವಾಲಯದ ಮೂಲ ವಿಗ್ರಹದ ಅಚ್ಚು ಪಡೆದು ಅಕ್ರಮಗಳಿಗೆ ಬೆನ್ನೆಲುಬಾಗಿರುವ ಅಧಿಕಾರಿ ಹಾಗೂ ದೇವಾಲಯದ ಅರ್ಚಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುತ್ತಾರೆಯೇ ಕಾದು ನೋಡಬೇಕಿದೆ…..??

Leave a Reply

Your email address will not be published. Required fields are marked *

error: Content is protected !!