ಹನುಮ ಜಯಂತಿ ಹಬ್ಬದ ವಿಶೇಷವಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತಾದಿಗಳು ಸಾಗರೊಪಾದಿಯಲ್ಲಿ ಶ್ರೀ ರಾಮ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಹೋಗಿ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಿರುವುದು ಕಂಡು ಬಂತು. ಆಂಜನೇಯ ಸ್ವಾಮಿ ದೇವಾಲಯಗಳಾದ ಅಭಯ ಆಂಜನೇಯ, ಪಂಚಮುಖಿ ಆಂಜನೇಯ, ಬಿದ್ದಂಜಾನೆಯ, ಸಂಧಿ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕಾರ್ಯಗಳು, ಹೋಮ ಹವನ, ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಜಾ ವಿಧಾನಗಳು ನೆರವೇರಿದವು. ಪೂಜೆಯ ನಂತರ ಸಹಸ್ರಾರು ಮಂದಿ ಅನ್ನ ಪ್ರಸಾದವನ್ನು ಸವಿದು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಕಾರು ಮಾಲೀಕರು ಹಾಗೂ ಚಾಲಕರುಗಳಾದ ಸಿ. ರವಿಶಂಕರ್ ಗೌಡ್ರು, ನಾಗರಾಜು, ಅಫ್ರೋಜ್, ಅನಿಲ್ ಕುಮಾರ್, ದೇವರಾಜು, ರಾಘವೇಂದ್ರ ಕೆ. ಎಸ್, ವಿಶ್ವನಾಥ್, ಬಸವರಾಜು, ಸುಕೇಶ್ ಜೈನ್ಸ್, ಮಹದೇವ್, ಕುಮಾರ್, ಜಗದೀಶ್, ನಾಗರಾಜು, ಮಹೇಶ್, ಮಂಜುನಾಥ್,ನಾಗಣ್ಣ, ರಾಜಣ್ಣ, ಹನುಮಂತರಾಜು, ಜಯಕುಮಾರ್, ಕೃಷ್ಣಪ್ಪ, ಸಾಧಿಕ್ ಪಾಷ, ಅರ್ಚಕರು ಸಂತೋಷ್, ಉಪಸ್ಥಿತರಿದ್ದರು.