ಇತ್ತೀಚಿನ ಕಾಲದಲ್ಲಿ ಸಿನಿಮಾರಂಗದಲ್ಲಿ ಮಹಿಳೆಯರನ್ನ ಅಗೌರವ ವಾಗಿ ತೋರಿಸುವುದಲ್ಲದೆ ಕೇವಲ ಆಕರ್ಷಣೀಯ ವಸ್ತುವಾಗಿ ತೋರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಇದನ್ನು ಕುರಿತು ಹೆಚ್ಚಿನ ಚರ್ಚೆಗಳು ನಡೆಯದಿರುವುದರಿಂದ ಯುವಪೀಳಿಗೆ ಅದನ್ನು ನೈಜ ಜೀವನದ ಮಾದರಿಯೊಂದು ಭಾವಿಸುತ್ತಿದ್ದಾರೆ , ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರವಲ್ಲ ಸಮಾಜಕ್ಕಾಗಿ ದಾರಿದೀಪವಾಗಿಯೂ ಕಾರ್ಯನಿರ್ವಹಿಸಬೇಕಾಗಿದೆ ಮಹಿಳೆಯರನ್ನು ಗೌರವಿಸುವ ಅವರ ವ್ಯಕ್ತಿತ್ವವನ್ನು ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸುವ ಕಥೆ ಗಳು ಬರಬೇಕಾಗಿದೆ ಇದು ಕೇವಲ ಮಹಿಳೆಯರ ಹಿತಕ್ಕಾಗಿ ಮಾತ್ರವಲ್ಲ ಸಮಾಜದ ಸಮಗ್ರ ಆರೋಗ್ಯಕ್ಕಾಗಿ ಅತ್ಯಂತ ಮುಖ್ಯವಾಗಿದೆ ನಮ್ಮ ಭಾರತೀಯ ಸಂಸ್ಕೃತಿ ಯಲ್ಲಿ ಹೆಣ್ಣಿಗೆ ಉನ್ನತ ಸ್ಥಾನ ಕೊಟ್ಟು ಪೂಜನೀಯ ವಾಗಿ ಹೇಳಿದ್ದಾರೆ ,ಆದರೆ ಇಂದಿನ ಯುವ ಪೀಳಿಗೆ ತಮ್ಮನ್ನು ತಾವೇ ಚಿಕ್ಕ ಚಿಕ್ಕ ಬಟ್ಟೆಗಳನ್ನು ಧರಿಸಿ ಕೀಳಾಗಿ ಪ್ರತಿಬಿಂಬಿಸುತ್ತಿದ್ದಾರೆ , ಇದು ಬದಲಾಗ ಬೇಕಿದೆ , ಇಂಗ್ಲೀಷ್ ಭಾಷೆ ಕಲಿಯ ಬೇಕೆ ಹೊರತು,ಪಾಶ್ಚಾತ್ಯರ ಸಂಸ್ಕೃತಿ ಅಲ್ಲಾ ಇದು ನಿಲ್ಲಬೇಕು,ತಮಗೆ ತಾವು ಆತ್ಮ ಗೌರವ,ಬರುವಂತೆ ಮಾಡಿಕೊಳ್ಳಬೇಕು ಯುವತಿಯರೇ ಮತ್ತು ಯುವಕರೇ, ನಿಮ್ಮ ಮನೆಯಲ್ಲಿ ಮಕ್ಕಳು ,ಅದರಲ್ಲೂ ಹೆಣ್ಣು ಮಕ್ಕಳು ಸರಿಯಾಗಿ ನಡೆದು ಕೊಳ್ಳದಿದ್ದರೆ , ಅವರು ನಮ್ಮ ಮಾತುಗಳನ್ನ ಕೇಳುವುದಿಲ್ಲ ಎಂದು ನೀವೇ ನಿರ್ಧರಿಸಬೇಡಿ , ಶಾಂತ ವಾಗಿ ನಿಧಾನ ವಾಗಿ ಅವರಿಗೆ ತಿಳಿಸಿ ಹೇಳಿ ಅನ್ಯತಾ ತೊಂದರೆಗೆ ಬೀಳಬೇಡಿ ಎಂದು ನಯವಾಗಿ ಹೇಳಿ , ಮತ್ತು ನಮ್ಮ ಸಂಸ್ಕೃತಿ ಯನ್ನು ಗೌರವಿಸಿ ಕಾಪಾಡಿ

From
Sou Shruthi Madhukar
Tumkur jille