ತುಮಕೂರು : ತುಮಕೂರು ಜಿಲ್ಲಾ ಶಕ್ತಿ ಕೇಂದ್ರವಾದ ಜಿಲ್ಲಾಧಿಕಾರಿಗಳ ಕಛೇರಿಗೆ ಅನಾಮಧೇಯ ಬಾಂಬ್ ಬೆದರಿಕೆ ಇಟ್ಟಿರುವಂತಹ ಮೈಲ್ ಸಂದೇಶ ರವಾನೆಯಾಗಿದೆ ಪ್ರಯುಕ್ತ ಇಂದು ತುಮಕೂರು ಜಿಲ್ಲಾ ಪೊಲೀಸರಿಂದ ತೀವ್ರ ತಪಾಸಣೆ ಮತ್ತು ಶೋಧ ಕಾರ್ಯ ನಡೆಯುತ್ತಿದೆ.

ಎಂದಿನಂತೆ ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಸರ್ಕಾರಿ ಅಧಿಕಾರಿಗಳನ್ನು ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ ನಂತರ ಒಳಗೆ ಕಳುಹಿಸುತ್ತಿರುವ ಸನ್ನಿವೇಶಗಳು ಕಾಣಿಸಿದವು. ತಕ್ಷಣವೇ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್ ಇಲಾಖೆ ಮೆಟಲ್ ಡಿಟೆಕ್ಟರ್ ಗಳು ಸೇರಿದಂತೆ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನಾಮಧೇಯ ಮೈಲ್ / ಕರೆ ಬಂದ ಹಿನ್ನಲೆಯಲ್ಲಿ ಈ ರೀತಿಯಾದ ತಪಾಸಣೆ ಕಾರ್ಯ ನಡೆಯುತ್ತಿದೆ, ಜನರು ಸಹ ಆತಂಕವನ್ನು ವ್ಯಕ್ತಪಡಿಸಿದರಲ್ಲದೇ, ಅಲ್ಲೇ ಸುತ್ತಮುತ್ತಲಿನ ವ್ಯಾಪಾರಿಗಳು ಅತ್ಯಂತ ಭಯದ ವಾತಾವರಣದಲ್ಲಿ ತಮ್ಮ ದೈನಂದಿನ ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.