ಗುಬ್ಬಿ:-ಶಾಸಕ ಎಸ್ ಆರ್ ಶ್ರೀನಿವಾಸ್ ರವರ ಕ್ಷೇತ್ರ ಹಾಗೂ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬಸ್ ಇಲ್ಲವೆಂದು ನೂರಾರು ವಿದ್ಯಾರ್ಥಿಗಳು ಸೇರಿ ಬಸ್ ತಡೆದು ಧಿಕ್ಕಾರ ಕೂಗಿದ ಘಟನೆ ಕಂಡು ಬಂತು.
ತಾಲೂಕಿನ ನಿಟ್ಟೂರು ನಿಂದ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಡಬ.ಕಲ್ಲೂರ್ ಕ್ರಾಸ್ ಸಂಪರ್ಕಿಸಲು ಹೆಚ್ಚಿನ ಕೆ ಎಸ್ ಆರ್ ಟಿ ಸಿ ಬಸ್ ಕಲ್ಪಿಸಿ ಕೊಡಬೇಕೆಂದು ಎಂದು ಎ ಬಿ ವಿ ಪಿ ವಿದ್ಯಾರ್ಥಿಗಳು ಆಗ್ರಹಿಸಿದರು.

ಪ್ರತಿ ದಿನ ಕಲ್ಲೂರು ಕ್ರಾಸ್ ನಿಂದ ಗುಬ್ಬಿ ಹಾಗೂ ತುಮಕೂರಿಗೆ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಕೆ ಎಸ್ ಆರ್ ಟಿ ಸಿ ನಲ್ಲಿ ಪ್ರಯಾಣ ಮಾಡುತ್ತಿದ್ದು ಈ ಸಮಯದಲ್ಲಿ ಅತಿ ಹೆಚ್ಚು ಬಸ್ ಬಿಡಬೇಕು.
ಮೈಸೂರು-ತುಮಕೂರು ಸಂಚರಿಸುವ ಬಸ್ ಕೆಲವು ಸಮಯದಲ್ಲಿ ಪೂರ್ತಿ ಭರ್ತಿಯಾಗಿ ಬರುವುದರಿಂದ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಬೆಳಿಗ್ಗೆ 6 ರಿಂದ 11ರ ಸಮಯದವರೆಗೂ ಹೆಚ್ಚುವರಿಯಾಗಿ ನಾಲ್ಕು ಬಸ್ ಗಳನ್ನು ನೀಡಬೇಕು ಅದೇ ರೀತಿ ತುಮಕೂರಿನಿಂದ ಮಧ್ಯಾಹ್ನ ನಾಲ್ಕರಿಂದ ರಾತ್ರಿ 8 ಗಂಟೆಯ ತನಕ ಹೆಚ್ಚುವರಿ ಬಸ್ ಸಂಚಾರ ಮಾಡುವಂತೆ ಮಾರ್ಗದರ್ಶನ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಪ್ರಾರಂಭವಾಗಿದ್ದು ಕೆಲವು ವಿದ್ಯಾರ್ಥಿಗಳು ಬಸ್ ಇಲ್ಲದ ಕಾರಣ ತೊಂದರೆಗೆ ಒಳಪಡುತ್ತಿದ್ದಾರೆ ಹಾಗಾಗಿ ಕೂಡಲೇ ಬಸ್ ಮಾರ್ಗ ಸೂಚಿಸುವಂತೆ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಬಸ್ ತಡೆದು ಧಿಕ್ಕಾರ ಕೂಗಿ ತಮ್ಮ ಬೇಡಿಕೆಗಳನ್ನು ಹೊರ ಹಾಕಿದರು.

ಈ ರಸ್ತೆಯಲ್ಲಿ ಸಂಚರಿಸುವ ಬಸ್ ಗಳು ತುಂಬಾ ಹಳೆಯದಾಗಿದ್ದು ದಾರಿ ಮಧ್ಯದಲ್ಲಿ ನಿಂತು ಹೋಗುತ್ತಿವೆ .
ಕೆಲವು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಕುಂಠಿತ ಕಂಡುಬರುತ್ತಿದೆ ಎಂದು ತಮ್ಮ ನೋವನ್ನು ವಿದ್ಯಾರ್ಥಿಗಳು ತೋಡಿಕೊಂಡರು.

___________
ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಹೆಚ್ಚಿನ ಬಸ್ಸನ್ನು ಕಲ್ಲೂರು ಕ್ರಾಸ್ ನಿಂದ ತುಮಕೂರಿಗೆ ಮತ್ತು ತುಮಕೂರಿ ನಿಂದ ಕಲ್ಲೂರ್ ಕ್ರಾಸ್ ಗೆ ಬಸ್ ಗಳು ಸಂಚರಿಸುವಂತೆ ಮಾಡಬೇಕು.
ವಿದ್ಯಾರ್ಥಿಗಳು
___________
ಕೆಲವು ದಿನಗಳ ಹಿಂದೆ ಕಲ್ಲೂರ್ ಕ್ರಾಸ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ ಬಸ್ ಕಲ್ಪಿಸಲಾಗಿತ್ತು ಆದರೆ ಮತ್ತೆ ಅದೇ ರೀತಿ ನಮಗೆ ತೊಂದರೆಯಾಗಿದೆ ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಅಧಿಕಾರಿಗಳು ಕಣ್ಣಮುಚ್ಚಾಲೆ ಆಟ ಆಡುತ್ತಿದ್ದಾರೆ ಎಂದು ಆಕ್ರೋಶವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರು
(ವರದಿ:-ಸಂತೋಷ ಗುಬ್ಬಿ)