ತುಮಕೂರು ಜಿಲ್ಲೆಗೆ ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ ಮತ್ತೆ ವಕ್ಕರಿಸಿದೆ.
ಗೃಹಸಚಿವರ ತವರುಕ್ಷೇತ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯಲ್ಲಿ ರೋಗ ದಿನೇ ಉಲ್ಬಣವಾಗುತ್ತಿದ್ದು ಮಾರಕ ರೋಗ ಜಾನುವಾರುಗಳ ಜೀವ ಕಸಿಯುತ್ತಿದೆ.
ಈಗಾಗಲೇ ಕೋರ ಹೋಬಳಿ ಬ್ರಹ್ಮಸಂದ್ರ,ಚಿಕ್ಕತೊಟ್ಲುಕರೆ,ಕಲ್ಸಟ್ ಕುಂಟೆ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿದೆ ಈಗಾಗಲೇ ಎರಡು ಮೂರು ಹಸುಗಳು ಮಾರಕ ರೋಗಕ್ಕೆ ಜೀವ ಬಿಟ್ಟಿವೆ.

ರೋಗ ಲಕ್ಷಣ ಕಾಣಿಸಿಕೊಂಡು ಹದಿನೈದು ದಿನಕಳೆದರೂ ಸ್ತಳೀಯ ಪಶುಪಾಲನಾ ಇಲಾಖಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೋರಾ ಪಶು ಆಸ್ಪತ್ರೆ ವೈದ್ಯಾಧಿಕಾರಿ ಸೂಕ್ತ ಸಮಯಕ್ಕೆ ಬಂದು ಚಿಕಿತ್ಸೆ ನೀಡುವುದಿಲ್ಲ,ಬೇಜವಾಬ್ದಾರಿ ಉಢಾಪೆ ಉತ್ತರ ನೀಡುತ್ತಾರೆ,ನಮ್ಮ ಗೋಳು ಕೇಳೋರೆ ದಿಕ್ಕಿಲ್ಲ ಎಂದು ರೈತಾಪಿ ವರ್ಗ ಆಕ್ರೋಶ ಹೊರಹಾಕಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು, ಹೋಬಳಿ ಎಲ್ಲಾ ಹಸುಗಳಿಗೆ ವ್ಯಾಕ್ಸಿನೇಷನ್ ಹಾಕಿಸಿ ಜಾನುವಾರುಗಳ ಜೀವ ಕಾಪಾಡುವಂತೆ ಒತ್ತಾಯಿಸಿದ್ದಾರೆ.