ಶಿಕ್ಷಕರ–ಪೋಷಕರ ಮಹಾಸಭೆ ಗದ್ದಲಕ್ಕೆ ತಿರುಗಿದ ಘಟನೆ

 

ಗುಬ್ಬಿ  ತಾಲೂಕಿನ ಸರ್ಕಾರಿ ಪಾಠಶಾಲೆಯಲ್ಲಿ ನಡೆದ ಶಿಕ್ಷಕರ ಮತ್ತು ಪೋಷಕರ ಮಹಾಸಭೆ ಕಾರ್ಯಕ್ರಮ ಅನಿರೀಕ್ಷಿತ ಘಟನೆಗೆ ವೇದಿಕೆಯಾಯಿತು. ಶಾಲಾ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಶಿಕ್ಷಕ ಪುರುಷೋತ್ತಮ್ ಅವರು ಏಕಾಏಕಿ ಪೋಷಕರ ಮೇಲೆರಗಿ ಮಾತಿನ ಚಕಮಕಿ ನಡೆಸಿದ ಘಟನೆ ಸ್ಥಳದಲ್ಲಿದ್ದವರಲ್ಲಿ ಆತಂಕ ಮೂಡಿಸಿತು.

 

 

ಸಭೆಯಲ್ಲಿ ಶಾಲೆಯ ವಿವಿಧ ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಮತ್ತು ದಿನನಿತ್ಯದ ಆಡಳಿತಾತ್ಮಕ ಅಸಹಕಾರದ ವಿಷಯಗಳು ಪೋಷಕರಿಂದ ಎತ್ತಿಹಿಡಿಯಲ್ಪಟ್ಟವು. ಈ ವೇಳೆ ಪೋಷಕರೊಬ್ಬರ ಮಾತಿನ ಪ್ರತಿಕ್ರಿಯೆ ಸಂದರ್ಭದಲ್ಲಿ ಶಿಕ್ಷಕ ಪುರುಷೋತ್ತಮ್ ಅವರು ತೀವ್ರ ನಡವಳಿ ಪ್ರದರ್ಶಿಸಿ ಹಲ್ಲೆಗೆ ಮುಂದಾಗಲು ಯತ್ನಿಸಿದರೆಂದು ಸಭೆಗೆ ಹಾಜರಿದ್ದವರು ತಿಳಿಸಿದ್ದಾರೆ.

 

ಘಟನೆಯ ನಂತರ ಅಸಮಾಧಾನಗೊಂಡ ಪೋಷಕರು ದುಂಡವರ್ತನೆ ತೋರಿದ ಪುರುಷೋತ್ತಮ್ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಶಾಲೆಯ ಗೌರವಕ್ಕೆ ಧಕ್ಕೆ ತರುವುದಾಗಿ ಪೋಷಕರು ಹೇಳಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಾಲಾ ಶಿಸ್ತು ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

*ಶಾಲೆಯಲ್ಲಿ ಕರ್ತವ್ಯಲೋಪದ ಆರೋಪ – ಪೋಷಕರಿಂದ ಶಿಕ್ಷಕಿ ಸುಮಿತ್ರಾ ಅಮಾನತು ಮಾಡುವಂತೆ ಒತ್ತಾಯ*

ತಾಲೂಕಿನ ಸರ್ಕಾರಿ ಪಾಠಶಾಲೆಯಲ್ಲಿ ನಡೆದ ಶಿಕ್ಷಕರ–ಪೋಷಕರ ಸಭೆಯಲ್ಲಿ ಮತ್ತೊಂದು ಗಂಭೀರ ಆರೋಪ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕಿ ಮಂಜುಳಾ ಅವರು 7ನೇ ತರಗತಿಗೆ ಹಿಂದಿ ವಿಷಯ ಬೋಧನೆಗಾಗಿ ಶಿಕ್ಷಕಿ ಸುಮಿತ್ರಾ ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಿದರೂ, ಅವರು ಪಾಠ ಬೋಧನೆ ನಡೆಸದೆ ಕರ್ತವ್ಯ ಲೋಪ ಮಾಡಿದ್ದಾರೆ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ.

ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟಕ್ಕೆ ಹಾನಿಯಾಗಿರುವುದರಿಂದ ಹಾಗೂ ಪಾಠಶಾಲೆಯ ಶಿಸ್ತಿಗೆ ಧಕ್ಕೆ ಉಂಟಾಗಿದೆ ಎಂಬ ಕಾರಣಕ್ಕೆ, ಸಭೆಗೆ ಹಾಜರಾಗಿದ್ದ ಅನೇಕ ಪೋಷಕರು ಶಿಕ್ಷಕಿ ಸುಮಿತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತಕ್ಕೆ ಒತ್ತಾಯ ವ್ಯಕ್ತಪಡಿಸಿದರು. ವಿಶೇಷವಾಗಿ, ಕರ್ತವ್ಯ ಲೋಪ ಗಂಭೀರವಾಗಿರುವುದರಿಂದ ಅವರನ್ನು ಅಮಾನತು ಮಾಡಬೇಕು ಎಂಬ ಬೇಡಿಕೆಯನ್ನು ಪೋಷಕರು ಸ್ಪಷ್ಟವಾಗಿ ಮಂಡಿಸಿದ್ದಾರೆ.

ಈ ಘಟನೆ ಪಾಠಶಾಲೆಯ ಕಾರ್ಯನಿರ್ವಹಣೆಯ ಗುಣಮಟ್ಟದ ಬಗ್ಗೆ ಪೋಷಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದ್ದು, ವಿದ್ಯಾರ್ಥಿಗಳ ಕಲಿಕೆ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅಗತ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

*ಶಿಕ್ಷಕಿ ಸುಮಿತ್ರಾ ಅವರ ಕರ್ತವ್ಯ ಲೋಪ – ಇಲಾಖೆಯ ನಿರ್ಲಕ್ಷ್ಯಕ್ಕೆ ಪೋಷಕರ ಅಸಮಾಧಾನ

ಸರ್ಕಾರಿ ಪಿ ಎಂ ಶ್ರೀ ಪಾಠಶಾಲೆಯಲ್ಲಿ ಶಿಕ್ಷಕಿ ಸುಮಿತ್ರಾ ಅವರು 7ನೇ ತರಗತಿ ಕನ್ನಡ ಮಾಧ್ಯಮ ವಿಭಾಗಕ್ಕೆ ಹಿಂದಿ ವಿಷಯ ಬೋಧನೆ ಮಾಡದೇ ಕರ್ತವ್ಯ ಲೋಪ ಮಾಡಿದ್ದಾರೆ ಎಂಬ ಆರೋಪ ಹೊಸ ರೂಪ ಪಡೆದಿದೆ. ಈ ಕುರಿತು ಪೋಷಕ ಕೆಂಪರಾಜು ಜಿ.ಆರ್. ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಕಲಿಕಾ ಹಿತಕ್ಕೆ ಭಂಗ ಉಂಟುಮಾಡುವ ರೀತಿಯಲ್ಲಿ ಪಾಠ ಬೋಧನೆ ನಿರ್ಲಕ್ಷ್ಯಗೊಳಿಸಿರುವುದು ಗಂಭೀರ ವಿಷಯವಾಗಿದ್ದು, ಶಾಲಾ ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ದೂರು ಸಲ್ಲಿಸಿ ಹಲವು ದಿನಗಳು ಕಳೆದರೂ, ತನಿಖೆ ಅಥವಾ ನೋಟಿಸ್ ನೀಡುವ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲವೆಂದು ಕೆಂಪರಾಜು ಜಿ.ಆರ್ ಅಸಮಾಧಾನ ಹೊರ ಹಾಕಿದರು. ಶಾಲೆಯೊಳಗಿನ ಶಿಸ್ತಿನ ಬಲಹೀನತೆ, ಪಾಠದ ಗುಣಮಟ್ಟ ಕುಸಿತ ಹಾಗೂ ಶಿಕ್ಷಕರ ಕರ್ತವ್ಯ ಪಾಲನೆ ಕುರಿತು ಇಲಾಖೆಯ ಸ್ಪಂದನೀಯತೆ ಪ್ರಶ್ನೆಗೆ ಒಳಪಟ್ಟಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟು ಶಿಕ್ಷಕಿ ಸುಮಿತ್ರಾ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ.

ಸಭೆಯಲ್ಲಿ ಮಾತನಾಡಿದ SDMC ಅಧ್ಯಕ್ಷ ಆನಂದ್ ಎಸ್ ಅವರು ಶಿಕ್ಷಕಿ ಸುಮಿತ್ರಾ ಅವರ ಪಾಠ ಬೋಧನೆಯ ನಿರ್ಲಕ್ಷ್ಯ ಹಾಗೂ ಶಿಕ್ಷಕ ಪುರುಷೋತ್ತಮ್ ಅವರ ದುಂಡು ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಪ. ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಮಧು, ಸದಸ್ಯರು, ಇ ಸಿ ಓ ನಿಜನಂದ ಮೂರ್ತಿ,
ಸಿ ಆರ್ ಪಿ ನಾಗಭೂಷಣ್, ಮುಖ್ಯ ಶಿಕ್ಷಕಿ ಮಂಜುಳಾ, ಹಿರಿಯ ಶಿಕ್ಷಕರಾದ ನಟರಾಜು, ಈರಮ್ಮ, ಸಹ ಶಿಕ್ಷಕರಾದ ಸಮೀರ್, ಚಂದನ, ಪುಷ್ಪಲತಾ, ಸವಿತಾ, ಪೋಷಕರು,ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!