ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿಯವರ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಅದ್ದೂರಿಯಾಗಿ ನೆರವೇರಿತು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಹಾಸಂಸ್ಥ ಗೋಡೆಕೆರೆ ಜಗದ್ಗುರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿಯವರ ಕಾರ್ತಿಕ ಮಾಸದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಅದ್ದೂರಿಯಾಗಿ ನೆರವೇರಿತು.
ನಂದಿದ್ವಜ.ತಾಳವಾದ್ಯ. ಬಸವನ ಸವಾರಿ. ವಿವಿಧ ರೀತಿಯ ದೀಪಾಲಂಕಾರ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳು ನೆರವೇರಿತು.
ಪ್ರತಿದಿನ ದಾಸೋಹ ಜೊತೆಗೆ ಕಾರ್ತಿಕ ಮೋಸದ ದಿನದಂದು ವಿಶೇಷ ಪೂಜೆಯ ಜೊತೆಗೆ ದಾಸೋಹ ನೆರವೇರುತ್ತದೆ.
ಸಾವಿರಾರು ಭಕ್ತಾದಿಗಳು ಬೇರೆ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸಿ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ದರ್ಶನ ಪಡೆದರು.

ವಿವಿಧ ರೀತಿಯ ಹೂವುಗಳಿಂದ ಜಗದ್ಗುರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮಿಯನ್ನು ಅಲಂಕೃತ ಮಾಡಿರುವುದು ಕಂಡುಬಂತು.
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಿರಂತರ ದಾಸೋಹದ ಜೊತೆ ವಿವಿಧ ರೀತಿಯ ಕಬ್ಬಡಿ ನಂದಿ ದ್ವಜ ಹಾಗೂ ಇನ್ನೂ ಅನೇಕ ಮನೋರಂಜನೆ ಕಾರ್ಯಕ್ರಮಗಳು ನೆರವೇರುವುದು ಕಂಡುಬಂತು.