ಗುಬ್ಬಿ:- ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವುದು ಕಂಡುಬಂದಿರುತ್ತದೆ.
ತಾಲೂಕಿನ ಮಾರಶೆಟ್ಟಿಹಳ್ಳಿ ಸಮೀಪದಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಯಲ್ಲಿ ಸುಮಾರು 30 ರಿಂದ 35 ವರ್ಷವುಳ್ಳ ದುಂಡು ಮುಖ ಹೊಂದಿರುವ ಸಾಧಾರಣ ಮೈಕಟ್ಟು ಎಣ್ಣೆ ಕೆಂಪು ಬಣ್ಣ ಸುಮಾರು 5 ಅಡಿ ಎತ್ತರ ವುಳ್ಳ ವಿವಾಹಿತ ಮಹಿಳೆ ಶವ ಪತ್ತೆಯಾಗಿರುವುದು ಕಂಡು ಬಂದಿರುತ್ತದೆ.

ಸ್ಥಳಕ್ಕೆ ಗುಬ್ಬಿ ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಹೇಮಾವತಿ ನಾಲೆಯಿಂದ ಶವವನ್ನು ಹೊರತೆಗೆದು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ವಾರಸುದಾರರಿಗಾಗಿ ಕಾಯ್ದಿರಿಸಲಾಗಿದ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆಯ ಹೆಸರು ವಿಳಾಸ ಪತ್ತೆಯಾದಲ್ಲಿ ಗುಬ್ಬಿ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ.
ಮೊಬೈಲ್ ಸಂಖ್ಯೆ :-9480802959
ವರದಿ : ಸಂತೋಶ್, ಗುಬ್ಬಿ