ತುಮಕೂರು : ತುಮಕೂರಿನ ವಾಸನ್ ಐ ಕೇರ್ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಣ್ಣಿನ ಆಸ್ಪತ್ರೆಯಲ್ಲಿ ಸಮಗ್ರ ಕಣ್ಣಿನ ಆರೈಕೆ ಲಭ್ಯವಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದರು. ಪಟಾಕಿಗಳಿಂದ ಸ್ಫೋಟಗಳಿಂದ ಉಂಟಾಗುವ ಕಣ್ಣಿನ ಗಾಯಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದರೆ ಶಾಶ್ವತ ದೃಷ್ಟಿನಷ್ಟವನ್ನು ತಪ್ಪಿಸಬಹುದು. ಇಂತಹ ತುರ್ತು ಪ್ರಕರಣಗಳನ್ನು ನಿಭಾಯಿಸಲು ನಮ್ಮ ಪರಿಣಿತ ನೇತ್ರ ತಜ್ಞರ ತಂಡ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ವಾಸನ್ ಐ ಕೇರ್ ಆಸ್ಪತ್ರೆಯ ನುರಿತ ನೇತ್ರ ತಜ್ಞರಾದ ಡಾ.ಸ್ಮಿತಾರವರು ತಿಳಿಸಿದರು.
ನಗರದ ಎಸ್.ಎಸ್.ಪುರಂದ ವಾಸನ್ ಐ ಕೇರ್‌ನಲ್ಲಿ ಅ.18ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಕೌಸರ್‌ರವರು ಮಾತನಾಡುತ್ತಾ ವಾಸನ್ ಐ ಕೇರ್ ಸಂಸ್ಥೆಯೂ ಸುಮಾರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳಿಗೆ ಉಚಿತ ನೇತ್ರ ತಪಾಸಣೆ ನೀಡುವ ವಿಶೇಷ ಸಾಮಾಜಿಕ ಉಪಕ್ರಮವನ್ನು ಘೋಷಿಸಲಾಗಿದೆ. ಈ ಅಭಿಯಾನವು ಅ 15 ರಿಂದ 24ರವರೆಗೆ ಎಲ್ಲಾ ರೀತಿಯ ವಾಸನ್ ಐ ಕೇರ್ ಕೇಂದ್ರಗಳಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಾಸನ್ ಐ ಕೇರ್‌ನ ವೈದ್ಯರಾದ ಡಾ.ಕೇಶವಮೂರ್ತಿರವರು ಮಾತನಾಡುತ್ತಾ ಪೋಷಕರು ಮತ್ತು ಸಾರ್ವಜನಿಕರನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯಿಂದ ಹಬ್ಬ ಆಚರಿಸಲು, ಹಾಗೆಯೇ ಕಣ್ಣಿನಲ್ಲಿ ಯಾವುದೇ ಅಸೌಕರ್ಯ ಅಥವಾ ಗಾಯ ಕಂಡು ಬಂದರೆ ತಕ್ಷಣ ತಜ್ಞರ ಸಲಹೆ ಹಾಗೂ ವಾಸನ್ ಐ ಕೇರ್ ಸಂಸ್ಥೆಗೆ ಭೇಟಿ ನೀಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಡಾ.ಶೃತಿರವರು ಮಾತನಾಡುತ್ತಾ ಈ ಉಪಕ್ರಮವು ಸಮುದಾಯ ನೇತ್ರ ಆರೈಕೆ, ತುರ್ತು ಸೇವೆ ಹಾಗೂ ಮುನ್ನೆಚ್ಚರಿಕಾ ಜಾಗೃತಿ ಬಗ್ಗೆ ವಾಸನ್ ಐ ಕೇರ್ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಸಹಾಯಕ್ಕಾಗಿ, ನಿಮ್ಮ ಸಮೀಪದ ವಾಸನ್ ಐ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ 1800 571 3333 ಸಂಖ್ಯೆಗೆ ಕರೆ ಮಾಡಿ. ಪತ್ರಿಕಾಗೋಷ್ಟಿಯಲ್ಲಿ ವಾಸನ್ ಐ ಕೇರ್ ಆಸ್ಪತ್ರೆಯ ನುರಿತ ನೇತ್ರ ತಜ್ಞರಾದ ಡಾ.ಸ್ಮಿತಾ, ಡಾ.ಕೌಸರ್, ವಾಸನ್ ಐ ಕೇರ್‌ನ ವೈದ್ಯರಾದ ಡಾ.ಕೇಶವಮೂರ್ತಿ, ಡಾ.ಶೃತಿ, ಡಾ.ಸಂಧ್ಯಾ, ವ್ಯವಸ್ಥಾಪಕರಾದ ನವೀನ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ನಾಗೇಂದ್ರ ಹಾಗೂ ವಾಸನ್ ಐ ಕೇರ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.