ಗುಬ್ಬಿ:-ಶ್ರೀ ಗ್ರಾಮ ದೇವತಾ ನೂತನ ದೇವಾಲಯ ಜೀರ್ಣೋದ್ಧಾರ ಪ್ರಾರಂಭೋತ್ಸವ ಮತ್ತು ಸಂಪ್ರೋಕ್ಷಣೆ ಹಾಗೂ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ. ಮಹಾ ಕುಂಭಾಭಿಷೇಕ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ತಾಲೂಕಿನ ಕಸಬಾ ಹೋಬಳಿ ಬಿಕ್ಕೇಗುಡ್ಡ ಎರಡನೇ ಕಾವಲ್ ನ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ಗ್ರಾಮದೇವತೆಯ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ಗಂಗಾ ಪೂಜೆ.ಧ್ವಜಾರೋಹಣ.
ದೇವತಾ ಪ್ರಾರ್ಥನೆ. ಮಹಾ ಗಣಪತಿ ಮಹಾಸಂಕಲ್ಪ ಪೂಜಾ.ವಾಸ್ತುಪೂಜೆ.ಗಣಪತಿ ಹೋಮ.ಕುಂಭಾಭಿಷೇಕ. ಪಂಚಾಮೃತ ಅಭಿಷೇಕ. ಹಲವು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಎರಡು ದಿನಗಳ ಕಾಲ ನಿರಂತರ ಪೂಜಾ ಕಾರ್ಯಕ್ರಮದೊಂದಿಗೆ ದಾಸೋಹ ಸೇವೆ ನಡೆಸಲಾಯಿತು. ಮುಂದಿನ 48 ದಿನಗಳಲ್ಲಿ ಪ್ರತಿದಿನ ಪೂಜಾ ಕಾರ್ಯಕ್ರಮಗಳು ನೆರವೇರುತ್ತವೆ ಎಂದು ಗ್ರಾಮಸ್ಥರು ತಿಳಿಸಿದರು. ಶುಕ್ರವಾರ ರಾತ್ರಿ ಶ್ರೀದೇವಿ ಮಹಾತ್ಮೆ ಹರಿಕಥೆ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್, ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಗ್ರಾಮ ಪಂ ಸದಸ್ಯರಾದ ವಿದ್ಯಾಸಾಗರ್. ಚಿಕ್ಕಮ್ಮ. ಮುಖಂಡರಾದ ಕೃಷ್ಣಪ್ಪ .ಮುಳ್ಕಟ್ಟಯ್ಯ.
ಕರಣ್ ಕೌಶಿಕ್. ಪಾಂಡುರಂಗಯ್ಯ.ಹೋಟೆಲ್ ಮಂಜು. ರಮೇಶ್. ಹನುಮಂತಪ್ಪ .ಬಸವರಾಜು. ಧನಂಜಯ್. ಸುರೇಶ್. ಹಾಜರಿದ್ದರು.