ತುಮಕೂರು : ನಗರದ ಮಹಾನಗರ ಪಾಲಿಕೆ ವಾರ್ಡ್ 01 ರ ಸದಸ್ಯರಾಗಿದ್ದ ಶ್ರೀಮತಿ ನಳಿನ ಇಂದ್ರಕುಮಾರ್ ಹಾಗೂ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕರು ಪ್ರಭಾವಿ ರಾಜಕಾರಣಿಯಾದ ಇಂದ್ರಕುಮಾರ್ ರವರ ಮಗ ಯಶಸ್ವಿ ಐ ಮೇಲೆ ಅವರ ಸೊಸೆಯೇ ಕಳೆದ ರಾತ್ರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿರುವ ಸುದ್ಧಿ ಕೇಳಿ ಬರುತ್ತಿದೆ.

ಸದರಿ ಇಂದ್ರಕುಮಾರ್ ಮತ್ತು ಶ್ರೀಮತಿ ಇಂದ್ರಕುಮಾರ್ ರವರ ಸುಪುತ್ರ ಯಶಸ್ವಿ ಐ ರವರು ಕುರುಬ ಸಮುದಾಯಕ್ಕೆ ಸೇರಿದ್ದು ಆತ ಶೈಲಜ ಎಂಬ ಪ.ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ, ಜೊತೆಗೆ ತಾನು ಪ್ರೀತಿಸಿ ಮದುವೆಯಾಗಿದ್ದ ಯಶಸ್ವಿ ಮೇಲೆಯೇ ದೌರ್ಜನ್ಯ ಮಾಡಿರುವುದು, ಖಾಸಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಿ ನೊಂದ ಮಹಿಳೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆಂಬ ಮಾಹಿತಿ ಇದೀಗ ಹೊರಬಂದಿದೆ.

ಕೆಲವರು ಹೇಳುವ ಪ್ರಕಾರ ಪ.ಜಾತಿಯ ಹೆಣ್ಣು ಮಗಳನ್ನು ತಮ್ಮ ಸೊಸೆಯಾಗಿ ಸ್ವೀಕಾರ ಮಾಡಲು ಸ್ವತಃ ಮಾಜಿ ಸದಸ್ಯರುಗಳಾದ ಅಂದರೆ ಯಶಸ್ವಿ ಐ ಅವರ ತಂದೆ ತಾಯಿಯವರಿಗೆ ಇಷ್ಟವಿರಲಿಲ್ಲ, ಹಾಗಾಗಿ ಆಕೆಗೆ ಮನೆಯಲ್ಲಿ ಹಿಂಸೆ ನೀಡುತ್ತಿದ್ದರು ಎಂದು ಸಹ ಗುಸು ಗುಸು ಸುದ್ಧಿ ಕೇಳಿ ಬರುತ್ತಿದೆ, ಯಾವುದು ಏನೇ ಆಗಲಿ ಹಿರಿಯ ಮುಖಂಡರು ಹಾಗೂ ಮಾಜಿ ಪಾಲಿಕೆ ಸದಸ್ಯರ ಮನೆ ಜಗಳ ಇದೀಗ ಬೀದಿಗೆ ಬಂದಿದೆ.