ನೀರು ಕೇಳಿದ ದಲಿತ ಸಮುದಾಯದ (ಆದಿ ಕರ್ನಾಟಕ ಸಮುದಾಯಕ್ಕೆ) ಸೇರಿದ ಆನಂದ್ ಬಿನ್ ರಾಮಾಂಜಿನಪ್ಪ ಇವರನ್ನು ಘನ ಘೋರವಾಗಿ ಕೊಲೆಗೈದ ಘಟನೆ ನಡೆದಿದೆ,
ಮಧುಗಿರಿ ತಾಲ್ಲೂಕು, ಪೋಲೆನಹಳ್ಳಿ ಗ್ರಾಮದ ವಾಸಿ ಆನಂದ್ ಅವರ ಮನೆಯ ಬಳಿ ಇರುವ ಕುಡಿಯುವ ನೀರಿನ ನಲ್ಲಿಯಲ್ಲಿ ನೀರು ಬರುತ್ತಿಲ್ಲ ಹಾಗೂ ಗ್ರಾಮ ಪಂಚಾಯತಿಯಿಂದ ಮನೆ ಮಂಜೂರು ಮಾಡಿಕೊಡಿ ಎಂದು ಬಿಲ್ ಕಲೆಕ್ಟರ್ ರಾಮಕೃಷ್ಣಯ್ಯ ಹಾಗೂ ಅವರ ಮಗ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್ ಅವರನ್ನ ಅವರ ಮನೆಯ ಬಳಿ ಹೋಗಿ ಏರು ಧ್ವನಿಯಿಂದ ಕೇಳಿದಾಗ ಸಿಟ್ಟಾಗಿ ಕೊಲೆ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ, ಕುಡಿಯುವ ನೀರಿನ ವಿಚಾರವಾಗಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಮಕೃಷ್ಣಪ್ಪ ಹಾಗೂ ಮಗ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ, ನಾಗಮಣಿ ಇತರರು ಸೇರಿ ಮಚ್ಚು ದೊಣ್ಣೆಗಳಿಂದ ಹಲ್ಲೆ ಮಾಡಿ ಜೈ ಶ್ರೀ ರಾಮ್ ಎಂದು ಹೆಸರು ಇರುವ ಬೊಲೆರೋ ಜೀಪ್‌ನಿಂದ ಗುದ್ದಿ ಕೊಲೆ ಮಾಡಲಾಗಿದೆ ಎನ್ನಲಾದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಕೊಡಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಲೆನಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಿಶಿಷ್ಠ ಪಂಗಡ ಸಮುದಾಯದ ಗ್ರಾಮ ಪಂಚಾಯಿತಿ ಮೆಂಬರ್ ಇದೇ ಗ್ರಾಮದ ದಲಿತ ಮಾದಿಗ ಸಮುದಾಯದ ಹುಡುಗರು ಮನೆ ಮಂಜೂರು ಮಾಡಿ ಕುಡಿಯುವ ನೀರು ಕಲ್ಪಿಸಿ ಕೊಡಲು ಕೇಳಿದ್ದಕ್ಕೆ ಮುಚ್ಚು ದೊಣ್ಣೆ ಒಡೆದು ಕೊಲೆ ಮಾಡಿ ತದನಂತರ ಜೈ ಶ್ರೀ ರಾಮ್ ಎಂದು ಬರೆದ ಬೊಲೆರೋ ವಾಹನದಿಂದ ಗುದ್ದಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಲಿತರೇ ಹೆಚ್ಚು ಜನಸಂಖ್ಯೆ ಇರುವ ಮತಕ್ಷೇತ್ರಗಳಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಮಾಜಿ ಸಹಕಾರ ಸಚಿವ ಮಾನ್ಯ ಕೆ ಎನ್ ರಾಜಣ್ಣ ರವರ ಹೆಸರನ್ನ ದುರುಪಯೋಗ ಮಾಡಿಕೊಂಡು ಎಸ್ಟಿ ಸಮುದಾಯದ (ಕೆಲವು) ಜಾತಿವಾದಿಗಳು ಕೆಳ ವರ್ಗದ ಆದಿ ಕರ್ನಾಟಕ ಸಮಾಜದ ಮೇಲೆ ಹಾಗೂ ಸವರ್ಣೀಯರ ಮೇಲು ಗುಂಡಾವರ್ತನೆ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.

ಕೊಡಗೇನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಗೇಶ್ ಎಂಬಾತನನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದ್ದು ಮಾನ್ಯ ಗೃಹ ಸಚಿವರು ಹಾಗೂ ಮಾನ್ಯ ಮಾಜಿ ಸಹಕಾರಿ ಸಚಿವರು ಆದ ಕೆಎನ್ ರಾಜಣ್ಣನವರು ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಗೃಹ ಸಚಿವರು ಆದ ಮಾನ್ಯ ಡಾಕ್ಟರ್ ಜಿ ಪರಮೇಶ್ವರ್ ಅವರು ಕೆಲವರ್ಗದ ಶೋಷಿತರ ಪರ ನಿಂತು ಅವರ ಮೇಲೆ ನಿತ್ಯ ನಿರಂತರ ನಡೆಯುತ್ತಿರುವ ಶೋಷಣೆ ದಬ್ಬಾಳಿಕೆಯನ್ನು ತಡೆಗಟ್ಟಬೇಕು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.