ತುಮಕೂರಿನಲ್ಲಿ ಕೊಲೆ ಮಾಡಿ ಧರ್ಮಸ್ಥಳಕ್ಕೆ ಪರಾರಿಯಾಗಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾದ ತುಮಕೂರು ಜಿಲ್ಲಾ ಪೊಲೀಸರು

ಮಹಿಳೆ ಭೀಕರ ಕೊಲೆ , ಮೂರು ದಿನದಲ್ಲಿ ಪ್ರಕರಣ ಭೇದಿಸಿದ ತುಮಕೂರು ಜಿಲ್ಲಾ ಪೊಲೀಸ್, ಧರ್ಮಸ್ಥಳದಲ್ಲಿ ಆರೋಪಿಗಳ ಸೆರೆ.

 

 

 

ಕಳೆದ ನಾಲ್ಕು ದಿನಗಳ ಹಿಂದೆ ಕೊರಟಗೆರೆ ಬಳಿಯ ಚಿಂಪುಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಹಾಗೂ ಮುತ್ಯಾಲಮ್ಮ ದೇವಸ್ಥಾನದ ಬಳಿ ಮಾನವನ ಮೃತದೇಹ ದ ಅಂಗಾಂಗಗಳು ಪತ್ತೆಯಾದ ಪ್ರಕರಣವನ್ನು ತುಮಕೂರು ಜಿಲ್ಲಾ ಪೊಲೀಸರು ಮೂರು ದಿನದಲ್ಲಿ ಪತ್ತೆ ಮಾಡುವ ಮೂಲಕ ಕೊಲೆಯಲ್ಲಿ ಭಾಗಿಯಾದ ಆರೋಪಿಗಳನ್ನ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರು ಮಾಹಿತಿ ನೀಡಿದ್ದು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ಪ್ರಮುಖ ಆರೋಪಿ ಡಾ. ರಾಮಚಂದ್ರಯ್ಯ ಪ್ರಕರಣದ ಪ್ರಮುಖ ಕಿಂಗ್ಫಿನ್ ಆಗಿದ್ದು ತನ್ನ ಹೆಂಡತಿಯ ತಾಯಿಯನ್ನು ಕೊಲೆ ಮಾಡಲು ಡಾಕ್ಟರ್ ರಾಮಚಂದ್ರಯ್ಯ ಇತರ ಆರೋಪಿಗಳೊಂದಿಗೆ ಸೇರಿ ಮೃತಪಟ್ಟ ಲಕ್ಷ್ಮಿ ದೇವಿಯನ್ನ ಕಾರಿನಲ್ಲಿ ಅಪಹರಿಸಿ ಭೀಕರವಾಗಿ ಕೊಲೆಗೈದು ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ಮೃತ ದೇಹದ ಅಂಗಾಂಗಗಳನ್ನು ರಸ್ತೆಯಲ್ಲಿ ಅಲ್ಲಲ್ಲಿ ಎಸೆದಿದ್ದ ಪ್ರಕರಣದ ಸಂಬಂಧ ಕೊರಟಗೆರೆಯಲ್ಲಿ ಪ್ರಕರಣ ದಾಖಲಾಗಿತ್ತು.

 

 

 

ಪ್ರಕರಣ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು ಇದರ ಬೆನ್ನಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿ ಹಾಗೂ ಹೊರ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲಾಗಿತ್ತು ಆದರೆ ಕೊನೆಗಳಿಗೆ ಮೃತಪಟ್ಟ ಲಕ್ಷ್ಮಿ ದೇವಿಯ ಗಂಡ ಬಸವರಾಜು ಬೆಳ್ಳಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರಕರಣದ ಮಾಹಿತಿ ತಿಳಿದು ಆ ಪ್ರಕರಣದ ಬೆನ್ನು ಹತ್ತಿದ್ದ ಜಿಲ್ಲಾ ಪೊಲೀಸರು ಪ್ರಕರಣವನ್ನು ವಿವಿಧ ಆಯಮಗಳಲ್ಲಿ ತನಿಖೆ ನಡೆಸಿ ಕೊನೆಗೂ ಪ್ರಕರಣದ ಕೊಲೆ ಹಿಂದಿನ ಸತ್ಯವನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಡಾಕ್ಟರ್ ರಾಮಚಂದ್ರಯ್ಯ ವೃತಿಯಲ್ಲಿ ದಂತ ವೈದ್ಯನಾಗಿದ್ದು ತುಮಕೂರಿನಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದು. ಆತನ ಹೆಂಡತಿ ವಯಸ್ಸಿನಲ್ಲಿ ಕಿರಿಯಳಾಗಿದ್ದು ಸಂಸಾರದಲ್ಲಿ ಒಡಕು ಉಂಟಾಗಿದ್ದು ಇದಕ್ಕೆ ಕಾರಣ ತನ್ನ ಅತ್ತೆ ಎಂದು ಕುಪಿತಗೊಂಡಿದ್ದ ರಾಮಚಂದ್ರಯ್ಯ ಇತರೆ ಆರೋಪಿಗಳಾದ ಸತೀಶ್ ಹಾಗೂ ಕಿರಣ್ ಸಹಾಯ ಪಡೆದು ಉರ್ಡಿಗೆರೆ ಬಳಿಯ ಕಲ್ಲಳ್ಳಿ ಗ್ರಾಮದಲ್ಲಿರುವ ಆರೋಪಿ ಸತೀಶ್ ತೋಟದ ಮನೆಯಲ್ಲಿ ಮೃತ ಲಕ್ಷ್ಮಿ ದೇವಮ್ಮಾಳನ್ನ ಭೀಕರವಾಗಿ ಕೊಲೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದೇಹ ಯಾರಿಗೂ ಗುರುತು ಸಿಗಬಾರದೆಂಬ ಉದ್ದೇಶದಿಂದ ರಸ್ತೆಯಲ್ಲಿ ವಿವಿಧ ಜಾಗಗಳಲ್ಲಿ ಎಸೆದು ಹೋಗಿದ್ದರು.

 

 

 

ಇನ್ನು ಪ್ರಕರಣ ಹೊರಬಂದ ಕೂಡಲೇ ಜಿಲ್ಲೆಯ ಜನರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವನ್ನು ಕೇವಲ ಮೂರು ದಿನದಲ್ಲಿ ಪತ್ತೆ ಹಚ್ಚುವ ಮೂಲಕ ಜಿಲ್ಲಾ ಪೊಲೀಸರು ಕೊಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಇನ್ನು ಪ್ರಕರಣದ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ವಿಶೇಷ ತಂಡವನ್ನ ರಚಿಸಲಾಗಿತ್ತು .ಪ್ರಕರಣದ ಪತ್ತೆಗೆ ಸಾಕ್ಷಿಯಾದದ್ದು ಒಂದು ಬ್ರೆಜ ಕಾರು. ಇನ್ನು ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಕೃತ್ಯ ನಡೆದ ವಿವಿಧ ಭಾಗಗಳಲ್ಲಿ ಹಲವು ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನ ಪಡೆದು ತನಿಖೆ ಕೈಗೊಂಡಿದ್ದ ವೇಳೆ ಪ್ರಕರಣದಲ್ಲಿ ಭಾಗಿಯಾದದ್ದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕಾರಿನ ಮಾಲೀಕನ ವಿಳಾಸ ಪಡೆದು ತನಿಖೆ ಕೈಗೊಂಡಾಗ ಪ್ರಕರಣದ ಸತ್ಯ ಹೊರ ಬಿದ್ದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಆರೋಪಿಗಳ ಸೆರೆ. ಕೃತ್ಯದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡಿದ್ದ ಕೆಲ ಆರೋಪಿಗಳು ಕೆಲ ದಿನಗಳಿಂದ ಧರ್ಮಸ್ಥಳದ ಬಳಿ ಇದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಧರ್ಮಸ್ಥಳದಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿ ತುಮಕೂರಿಗೆ ಕರೆತಂದಿದ್ದಾರೆ.

 

 

 

ಪ್ರಕರಣದ ತನಿಖೆಗಾಗಿ ರಚಿಸಿದ್ದ ತಂಡದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್, ಪುರುಷೋತ್ತಮ್ ರವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ತುಮಕೂರು ಡಿವೈಎಸ್ಪಿ ಚಂದ್ರಶೇಖರ್, ಸಿರಾ ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ , ತುಮಕೂರು ನಗರ ಠಾಣೆ ಪಿಐ ಅವಿನಾಶ್ ,ಕೊರಟಗೆರೆ ಪಿಎಸ್ಐ ಅನಿಲ್ ಸೇರಿ ಹಲವು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇದೇ ಸಂದರ್ಭದಲ್ಲಿ ತನಿಖಾ ತಂಡದ ನೇತೃತ್ವ ವಹಿಸಿದ್ದ ಅಧಿಕಾರಿಗಳಿಗೆ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!