ಗುಬ್ಬಿ:- ವಯೋನಿವೃತ್ತಿ ಹೊಂದುತ್ತಿರುವ ಮುಖ್ಯಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಕೊಪ್ಪ ಗ್ರಾಮಸ್ಥರು ಹಾಗೂ ಹಾಜು-ಬಾಜಿನ ಗ್ರಾಮಸ್ಥರು ಸ್ನೇಹಿತರಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ.
ತಾಲೂಕಿನ ಶ್ರೀ ಜ್ಞಾನಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಸುಮಾರು 35 ವರ್ಷ ನಿರಂತರ ಸೇವೆ ಸಲ್ಲಿಸಿ ಸುತ್ತಮುತ್ತಲಿನ ಗ್ರಾಮದ ನಾಗರೀಕರ ಮನಸ್ಸು ಗೆದ್ದ ಹಾಗೂ ಉತ್ತಮ ಮುಖ್ಯ ಶಿಕ್ಷಕರು ಎಂದೇ ಖ್ಯಾತಿ ಪಡೆದಿರುವ ಕೆ ಎಸ್ ಅಶ್ವಥ್ ಕೊಪ್ಪ ರವರಿಗೆ ಆಗಸ್ಟ್ 30 ರಂದು ಶನಿವಾರ ಬೆಳಿಗ್ಗೆ 10:00 ಗಂಟೆಗೆ ಶ್ರೀ ಗುರು ಸಿದ್ದರಾಮೇಶ್ವರ ದೇವಾಲಯದ ಸನ್ನಿಧಿ ಕೊಪ್ಪ ಗ್ರಾಮದಲ್ಲಿ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಹಳೇ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.

ತಾಲೂಕಿನ ಕಡಬಾ ಹೋಬಳಿ ಕೊಪ್ಪ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಏಕೈಕ ಪ್ರೌಢಶಾಲೆ ತೆರೆದಿದ್ದು ಈ ಶಾಲೆ ಪ್ರಾರಂಭದ ದಿನದಿಂದಲೂ ಮುಖ್ಯ ಶಿಕ್ಷಕರಾದ ಕೆ ಎಸ್ ಅಶ್ವತ್ ರವರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಶ್ರೀ ಜ್ಞಾನಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿತು ಕೆಲವು ವಿದ್ಯಾರ್ಥಿಗಳು ಸರ್ಕಾರಿ ನೌಕರಿ,ರಾಜಕೀಯ, ಪತ್ರಿಕೋದ್ಯಮ ಮತ್ತು ಸ್ವಂತ ಉದ್ಯೋಗ ಹಾಗೂ ಇನ್ನು ಅನೇಕ ಸಾಧನೆ ಮಾಡಿ ಉನ್ನತ ಮಟ್ಟಕ್ಕೇರಿ ಮುಂದುವರೆಯುತ್ತಿದ್ದಾರೆ. ಹಾಗಾಗಿ ಕೆ ಎಸ್ ಅಶ್ವಥ್ ರವರು ಮೂಲತಹ ಕೊಪ್ಪ ಗ್ರಾಮದವರೇ ಆಗಿದ್ದು ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸದ ಕಡೆ ಗಮನಹರಿಸಲು ಹೆಚ್ಚು ಹೊತ್ತು ನೀಡಿ ವಯೋನಿವೃತ್ತಿ ಹೊಂದುತ್ತಿರುವುದು ಮನಗಂಡ ಕೊಪ್ಪ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಈ ಮುಖ್ಯ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಬೇಕೆಂದು ತೀರ್ಮಾನಿಸಿ ಆಗಸ್ಟ್ 30 ಶನಿವಾರ ಸಮಾರಂಭವನ್ನು ಏರ್ಪಡಿಸಲಾಗಿದೆ, ಎಲ್ಲಾ ಹಳೆ ವಿದ್ಯಾರ್ಥಿಗಳು ಸ್ನೇಹಿತರು ಹಾಜು-ಬಾಜಿನ ಗ್ರಾಮಸ್ಥರು ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭವನ್ನು ನೆರವೇರಿಸಿ ಕೊಡಬೇಕೆಂದು ಹಳೆ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.

ಸುಮಾರು 35 ವರ್ಷಗಳ ಕಾಲ ನಿರಂತರ ಸುಧೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಮುಖ್ಯ ಶಿಕ್ಷಕರಾದ ಕೆ ಎಸ್ ಅಶ್ವಥ್ ರವರು ನಾನು ಓದಿದ ಶ್ರೀ ಜ್ಞಾನಗಂಗಾ ಗ್ರಾಮಾಂತರ ಪ್ರೌಢಶಾಲೆಯನ್ನು ಮುನ್ನಡೆಸುವಲ್ಲಿ ತನ್ನ ಸ್ವಂತ ಜೇಬಿನ ಹಣವನ್ನು ತೆಗೆದು ಖರ್ಚು ಮಾಡಿ ಶಾಲಾ ನಡೆಸಿದ್ದಾರೆ ಇಂತಹ ಉತ್ತಮ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಲ್ಲಾ ಹಳೇ ವಿದ್ಯಾರ್ಥಿಗಳು ಸ್ನೇಹಿತರು ಪೋಷಕರು ಹಾಜು-ಬಾಜಿನ ಗ್ರಾಮಸ್ಥರು ಸಮಾರಂಭಕ್ಕೆ ಆಗಮಿಸುವಂತೆ ಕರೆ ನೀಡಲಾಗಿದೆ.
ಹಳೆ ವಿದ್ಯಾರ್ಥಿ ಸಂಘ, ಕೊಪ್ಪ