ಗುಬ್ಬಿ :-ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಿ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು.. ತಾಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಸುಮಾರು 35 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಾದ ಕೆ ಎಸ್ ಅಶ್ವಥ್ ರವರಿಗೆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮ ನೆರವೇರಿತು.
1990ರಲ್ಲಿ ಪ್ರಾರಂಭವಾದ ಭೈರವೇಶ್ವರ ವಿದ್ಯಾಸಂಸ್ಥೆ ತದನಂತರ 93- 94ನೇ ಸಾಲಿನಲ್ಲಿ ಗಂಗಾ ವಿದ್ಯಾ ಸಂಸ್ಥೆ ಸರ್ಕಾರದಿಂದ ಮಾನ್ಯತೆ ಪಡೆದು ಶ್ರೀ ಜ್ಞಾನಗಂಗಾ ಪ್ರೌಢಶಾಲೆ ಪರಿವರ್ತನೆಗೊಂಡು ಸುಮಾರು 35 ವರ್ಷಗಳ ಕಾಲ ಸುಧೀರ್ಘವಾಗಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲಾಗಿದೆ.

ಯಾವುದೇ ರೀತಿ ಸಂಬಳವಿಲ್ಲದೆ ವೇತನ ರಹಿತ 22 ವರ್ಷಗಳ ಕಾಲ ನಿರಂತರವಾಗಿ ತಮ್ಮ ಜೇಬಿನ ಹಣವನ್ನು ಖರ್ಚು ಮಾಡಿ ಮೂರು ಕಿಲೋ ಮೀಟರ್ ಕೊಪ್ಪ ಗೇಟ್ -ನಿಂದು ಕೊಪ್ಪ ಗ್ರಾಮದವರೆಗೂ ಕಾಲ್ನಡಿಗೆ ಮೂಲಕ ನಡೆದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಶಿಕ್ಷಕರು ನೀಡಿದ್ದಾರೆ. ಅದರ ಜೊತೆಯಾಗಿ ಶ್ರೀ ಜ್ಞಾನ ಗಂಗಾ ಪ್ರೌಢಶಾಲೆಯನ್ನು ಮುನ್ನಡೆಸಲು ಶಾಲಾ ಮುಖ್ಯೋಪಾಧ್ಯಾಯರಾದ ಕೆ ಎಸ್ ಅಶ್ವಥ್ ರವರು ತನು.ಮನ.ಧನ. ಹಾಗೂ ಶ್ರಮವನ್ನು ವಹಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡಿದ್ದಾರೆ.

ಈ ಪ್ರೌಢಶಾಲೆ ಖಾಸಗಿ ಶಾಲೆಯಾಗಿದ್ದು ಈ ಶಾಲೆ 22 ವರ್ಷ ಅನುದಾನ ರಹಿತವಾಗಿ ಕೂಡಿರುತ್ತದೆ ತದನಂತರ 03.11.2012 ರಂದು ಶಾಲೆ ಅನುದಾನಕ್ಕೆ ಸರ್ಕಾರ ಮಾನ್ಯತೆ ನೀಡಿರುತ್ತದೆ.
22 ವರ್ಷಗಳ ಕಾಲ ಅನುದಾನ ರಹಿತವಾಗಿ ಮುಖ್ಯೋಪಾಧ್ಯಾಯರಾದ ಕೆ ಎಸ್ ಅಶ್ವಥ್ ರವರು ಹಾಗೂ ಶಿಕ್ಷಕರುಗಳಾದ ನಾಗರತ್ನಮ್ಮ. ಲಕ್ಷ್ಮಯ್ಯ.ರಾಜಶೇಖರ್.ನರಸಿಂಹಮೂರ್ತಿ ನಿರಂತರವಾಗಿ ಸೇವೆ ಸಲ್ಲಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೂತನ ಶಿಕ್ಷಕರುಗಳು ಆಗಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ.

1990-91ನೇ ಸಾಲಿನಿಂದ 2024 -25ನೇ ಸಾಲಿನ ವಿದ್ಯಾರ್ಥಿಗಳ ತನಕ ಪ್ರತಿ ಒಂದೊಂದು ತರಗತಿಯ ವಿದ್ಯಾರ್ಥಿಗಳು ವಿವಿಧ ರೀತಿಯ ವಸ್ತುಗಳನ್ನು ಬೆಳ್ಳಿ ಕಿರೀಟ.ಬೆಳ್ಳಿ ಗಣೇಶ ವಿಗ್ರಹ.ಬೆಳ್ಳಿ ಕಾಯನ್.ಹಾಗೂ ಶಾಲೆಯ ವ್ಯವಸ್ಥೆಗೆ ಒಂದು ಲಕ್ಷ ರೂಗಳನ್ನು ಹಳೆ ವಿದ್ಯಾರ್ಥಿಗಳಿಂದ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಉಪನಿರ್ದೇಶಕರಾದ ರಘುಚಂದ್ರ. ನಿವೃತ್ತ ಜಂಟಿ ನಿರ್ದೇಶಕರಾದ ಈಶ್ವರಯ್ಯ.ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಟರಾಜ್ ಮತ್ತು ಬಿ ಆರ್ ಸಿ ಮಧುಸೂದನ್ ಅಕ್ಷರ ದಾಸೋಹ ಅಧಿಕಾರಿಯದ ಜಗದೀಶ್. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪಟೇಲ್ ದೇವರಾಜ್. ಹಾಗೂ ಇನ್ನೂ ಅನೇಕ ಶಿಕ್ಷಕರು ರಾಜಕಾರಣಿಗಳು ಪೋಷಕರು ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ -ಸಂತೋಷ ಗುಬ್ಬಿ