ತುಮಕೂರು ಗ್ರಾಮಾಂತರ ಕ್ಷೇತ್ರ ಊರ್ಡಿಗೆರೆ ಹೋಬಳಿ ಸೇಟೂ ಪಾಳ್ಯ ಗ್ರಾಮದ ರಸ್ತೆಗೆ ಕೆಲಕಿಡಿಗೇಡಿಗಳು ಕಲ್ಲುಕಂಬ ನೆಟ್ಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವನ್ನೇ ಬಂದ್ ಮಾಡಿದ್ದು ಇದನ್ನು ತೆರವು ಮಾಡುವಂತೆ ಗ್ರಾಮಸ್ತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
30 ವರ್ಷಗಳಿಂದಲೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿಯನ್ನು ಸ.ನಂ.10, 11 ರ ಮಾಲೀಕರಾದ ಅಪ್ಪಾಜಿರಾವ್, ಭೈರೋಜಿರಾವ್, ಗಂಗೋಜಿ ರಾವ್ ಇತರರು ರಸ್ತೆ ಮಧ್ಯೆ ಭಾಗಕ್ಕೆ ಕಲ್ಲು ಕಂಬ ನೆಟ್ಟು ಈದಾರಿ ನಮ್ಮ ಸ್ವಂತದ್ದು ಇಲ್ಲಿ ಯಾರೂ ಓಡಾಡಕೂಡದು ಎಂದು ಅಡ್ಡಿಪಡಿಸುತ್ತಿದ್ದರೆ ಶಾಲಾ ವಾಹನ, ಆಂಬ್ಯುಲೆನ್ಸ್,ವಯೋವೃದ್ದರನ್ನು ಆಸ್ಪತ್ರೆಗೆ ಕರೆದೊಯ್ಯಲು ದುಸ್ತರವಾಗಿದೆ ಇದನ್ನು ತುರ್ತಾಗಿ ತೆರವುಗೊಳಿಸುವಂತೆ ಗ್ರಾಮಸ್ತರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸದರಿ ರಸ್ತೆಯನ್ನು ಸರ್ಕಾರದ ಅನುದಾನದಲ್ಲಿ 50 ಲಕ್ಷ ವೆಚ್ಚದಲ್ಲಿ ಡಾಂಬರು ರಸ್ತೆಯಾಗಿ ಅಭಿವೃದ್ದಿಪಡಿಸಲಾಗಿದೆ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯಲು ಗ್ರಾಮಸ್ತರು ಪರಿತಪಿಸುವಂತಾಗಿದೆ,ಇದನ್ನು ಪ್ರಶ್ನಿಸಿದರೆ ಮಚ್ಚು ದೊಣ್ಣೆ ಗಳಿಂದ ಹಲ್ಲೆ ನಡೆಸುತ್ತೇವೆ ಎಂದು ಧಮಕಿ ಹಾಕುತ್ತಾರೆ,ಗೂಂಡಾವರ್ತನೆ ನಡೆಯುತ್ತಿದದೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಸ್ತಳಕ್ಕೆ ಧಾವಿಸಿ ರಸ್ತೆಗೆ ನೆಟ್ಟಿರುವ ಕಲ್ಲುಕಂಬ ತೆರವು ಮಾಡಿಸಿ ನ್ಯಾಯದೊರಕಿಸುವಂತೆ ಆಗ್ರಹಿಸಿದ್ದಾರೆ.