ತುಮಕೂರು : ಗೃಹಸಚಿವರಿಂದ ಶಹಬಾಶ್ ಪಡೆಯಲು ಬೇಜವಾಬ್ದಾರಿ ಅಧಿಕಾರಿಗಳು ಗೃಹಸಚಿವರ ಮನೆ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ಹಂಪ್ಸ್ ಅಮಾಯಕ ಯುವಕನ ಜೀವ ಬಲಿಪಡೆದಿದೆ.
ಇತ್ತೀಚೆಗಷ್ಟೇ ಕೆಲಸಕ್ಕೆ ಮಹೇಶ್ (25), ಮೃತ ದುರ್ದೈವಿ.ಮಧುಗಿರಿ ತಾಲೂಕಿನ ಪರ್ತಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ನಿನ್ನೆ ಕೆಲಸ ಮುಗಿಸಿ ತನ್ನ ಹೂಟ್ಟೂರು ಗುಬ್ಬಿ ತಾಲ್ಲೂಕು ಮೂಕನಹಳ್ಳಿಗೆ ಬೈಕ್ ನಲ್ಲಿ ತೆರಳುವಾಗ, ತುಮಕೂರಿನ ಹೆಗ್ಗೆರೆ ಬಳಿಯಿರುವ ಗೃಹ ಸಚಿವ ಜಿ ಪರಮೇಶ್ವರ್ ಮನೆ ಮುಂದೆ ಹಾಕಿರುವ ಹಂಪ್ಸ್ ಬಳಿ ಹಿಂಬದಿಯಿಂದ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹೇಶ್ ಸ್ತಳದಲ್ಲೇ ಮೃತಪಟ್ಟಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಇದಾಗಿದ್ದು ,ಗೃಹ ಸಚಿವ ಡಾ ಜಿ ಪರಮೇಶ್ವರ್ ಮನೆ ಬಳಿ ಅವೈಜ್ಙಾನಿಕ ಹಂಪ್ಸ್ ಬೃಹತ್ ಗಾತ್ರದ ಹಂಪ್ಸ್ ಹಾಕಲಾಗಿದೆ
ಒಂದೇ ತಿಂಗಳಲ್ಲಿ ಇದೇ ಜಾಗದಲ್ಲಿ ಐದಾರು ಅಪಘಾತಗಳು ನಡೆದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ,ಅಮಾಯಕ ಯುವಕನ ಸಾವಿಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸ್ತಳೀಯರು ಆರೋಪಿಸಿದ್ದಾರೆ.