ಪಾವಗಡ ತಾಲ್ಲೂಕಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಪೂರ್ವ ಸಿದ್ಧತೆಗಳು ನಡೆದಿವೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆಯಲ್ಲಿ ಮೂರ್ನಾಲ್ಕು ಸಭೆಗಳು ನಡೆದಿದ್ದು, ಅವುಗಳಲ್ಲಿ ತುಮಕೂರಿನಿಂದ ಪಾವಗಡದವರೆಗೆ ರಸ್ತೆ ಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲದಂತೆ ಸ್ವಚ್ಚಗೊಳಿಸಬೇಕೆಂದು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಆದರೆ, ಪಾವಗಡ ಪಟ್ಟಣದ ಹೊರವಲಯದಲ್ಲಿ ತುಮಕೂರು ರಸ್ತೆಯಲ್ಲಿ ಮುಖ್ಯಮಂತ್ರಿ ಉದ್ಘಾಟನೆ ಮಾಡಿರುವ ಹಾಸ್ಟೆಲ್ ಸಂಕೀರ್ಣದ ಆಸುಪಾಸು ಪ್ಲಾಸ್ಟಿಕ್ ಕಸದ ರಾಶಿಗಳಿದ್ದರೂ ಪುರಸಭೆ ಅಧಿಕಾರಿಗಳು ಅದನ್ನು ಸ್ಚಚ್ಚಗೊಳಿಸುವ ಗೋಜಿಗೆ ಹೋಗಿಲ್ಲ.
ಜಿಲ್ಲಾಧಿಕಾರಿ ಸೂಚನೆಗೇ ಕಿಮ್ಮತ್ತಿಲ್ಲವೆಂದರೆ ನಾಗರಿಕರ ದೂರುಗಳನ್ನು ಪುರಸಭೆ ಅಧಿಕಾರಿಗಳು ಪರಿಹರಿಸುತ್ತಾರೆಯೇ? ಜೊತೆಗೆ ಪುರಾಣ ಪ್ರಸಿದ್ಧ ಕಣಿವೆ ನರಸಿಂಹ ಸ್ವಾಮಿ ದೇವಾಲಯದ ಪುಷ್ಕರಣಿ, ದೇವಾಲಯದ ಪ್ರಾಂಗಣ ಸೇರಿದಂತೆ ಈ ಸುತ್ತಮುತ್ತಲಿನ ಪ್ರದೇಶವೆಲ್ಲಾ ಪ್ಲಾಸ್ಟಿಕ್ ಮಯವಾಗಿ ಕಾಣಿದ್ದಂತೂ ಸತ್ಯ.
ಏನೇ ಆದರೂ ಕಾರ್ಯಕ್ರಮ ಯಶಸ್ವಿಪೂರ್ಣವಾಗಿ ನಡೆಯಿತಾದರೂ ಈ ಪ್ಲಾಸ್ಟಿಕ್ ಕಸದಿಂದ ನಾಗರೀಕರ ಮತ್ತು ಇಲ್ಲಿನ ಜನರ ನೆಮ್ಮದಿಯನ್ನು ಹಾಳು ಮಾಡಿದರು.